ಓದುಗರ ಪತ್ರ
ಖಾಸಗಿ ಹಾಗೂ ಸರ್ಕಾರಿ ಬ್ಯಾಂಕುಗಳು ಈಗಲೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲ ಎಂಬ ಕಾರಣಕ್ಕೆ ದಂಡ ವಿದಿಸುತ್ತಿದ್ದು, ೨೦೨೪-೨೫ನೇ ಸಾಲಿನಲ್ಲೇ ೪,೦೮೭ ಕೋಟಿ ರೂ. ದಂಡ ವಸೂಲಿ ಮಾಡಿರುವುದು ವರದಿಯಾಗಿದೆ.
ಮಹಿಳೆಯೊಬ್ಬರ ಉಳಿತಾಯ ಖಾತೆಗೆ ಜಮೆಯಾದ ಮನ್ರೇಗಾದ ಕೂಲಿ ಹಣವಾದ ೫೦೦ ರೂ.ಗಳಲ್ಲಿ ೪೪೦ ರೂ. ಕಡಿತಗೊಳಿಸಿ ದಂಡ ವಸೂಲಿ ಮಾಡಿರುವುದು ಆತಂಕಕಾರಿ ಸಂಗತಿಯಾಗಿದೆ. ಬಡ ಜನರ ದಿನದ ದುಡಿಮೆಯ ಹಣವನ್ನು ದಂಡದ ರೂಪದಲ್ಲಿ ಪಡೆದರೆ ಜೀವನ ನಿರ್ವ ಹಣೆ ಹೇಗೆ ಮಾಡುವುದು ಎಂಬ ಪ್ರಶ್ನೆ ಕಾಡುತ್ತದೆ.
ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಈ ಮೊದಲು ಶೇ.೪ ಬಡ್ಡಿ ನೀಡುತ್ತಿದ್ದ ಬ್ಯಾಂಕ್‌ಗಳು ಈಗ ಬಡ್ಡಿಯ ಮೊತ್ತವನ್ನು ಶೇ. ೨.೫ ಬಡ್ಡಿ ನೀಡುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಆರ್‌ಬಿಐ ಗ್ರಾಕರಿಗೆ ದಂಡ ವಿಧಿಸುತ್ತಿರುವ ಬ್ಯಾಂಕ್‌ಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನ ಗ್ರಾಹಕರೊಬ್ಬರು ನೀಡಿದ ದೂರನ್ನು ಅಧರಿಸಿ ಲೋಕಸಭೆಯ ಅರ್ಜಿಗಳ ಸಮಿತಿಯು ಕನಿಷ್ಠ ಮೊತ್ತ ಇಲ್ಲವೆಂಬ ಕಾರಣಕ್ಕೆ ಬ್ಯಾಂಕ್‌ಗಳು ದಂಡ ವಿಧಿಸದಂತೆ ಶಿಫಾರಸು ಮಾಡಿದ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ದರ ನೀಡಬೇಕು ಎಂದೂ ಅದು ಹೇಳಿದೆ.
ಗ್ರಾಹಕರ ಠೇವಣಿಯ ಹಣದಿಂದಲೇ ಸಾವಿರಾರು ಕೋಟಿ ರೂ. ವ್ಯವಹಾರ ನಡೆಸಿ ಲಾಭಗಳಿಸುವ ಬ್ಯಾಂಕ್‌ಗಳು ಉಳಿತಾಯ ಖಾತೆದಾರರು ಬ್ಯಾಂಕಿನಲ್ಲಿಟ್ಟಿರುವ ಹಣಕ್ಕೆ ಹೆಚ್ಚು ಬಡ್ಡಿ ನೀಡಬೇಕು ಹಾಗೂ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡವಿಧಿಸಬಾರದು ಎಂದು ಆರ್‌ಬಿಐ ಆದೇಶ ಹೊರಡಿಸುವ ಮೂಲಕ ಗ್ರಾಹಕರ ಹಿತ ಕಾಪಾಡ ಬೇಕಾಗಿದೆ.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…