ಮಹಿಳೆ

ಸರ್ಗಂ ಕೌಶಲ್ ವಿಶ್ವದ ಚೆಲುವೆಯಾಗಿದ್ದು ಹೇಗೆ ಗೊತ್ತೇ..?

ಸರ್ಗಂ ಕೌಶಲ್ ವಿಶ್ವದ ಚೆಲುವೆಯಾಗಿದ್ದು ಹೇಗೆ ಗೊತ್ತೇ..?

ಕಾಶ್ಮೀರಿ ಚೆಲುವೆಯೊಬ್ಬಳು 21 ವರ್ಷದ ಬಳಿಕ ವಿಶ್ವ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಜಮ್ಮು ಮೂಲದ ಸರ್ಗಂ ಕೌಶಲ್ ಅವರು ಲಾಸ್ ವೆಗಾಸ್ ನಲ್ಲಿ ಡಿ.18ರಂದು ಜರುಗಿದ ಸ್ಪರ್ಧೆಯಲ್ಲಿ ಸುಮಾರು 63 ದೇಶಗಳ ಸುಂದರಿಯರೊಂದಿಗೆ ಸ್ಪರ್ಧಿಸಿ ಮಿಸೆಸ್ ವರ್ಲ್ಡ್ 2022 ಕಿರೀಟವನ್ನು ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಸಾಧನೆಯ ಫೋಟೋಗಳನ್ನು ಅವರು ಇನ್‌ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಫೋಟೋಗಳು ಇಲ್ಲಿವೆ.

 

ಮಿಸೆಸ್ ವರ್ಲ್ಡ್ ವಿವಾಹಿತ ಮಹಿಳೆಯರಿಗೆ ಮೀಸಲಾದ ಸ್ಪರ್ಧೆ. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪ್ರಶಸ್ತಿ

2001ರಲ್ಲಿ ವೈದ್ಯೆಯಾಗಿದ್ದ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು. ಈಗ ಶಿಕ್ಷಕಿಯಾಗಿರುವ ಸರ್ಗಂ ಕೌಶಲ್‌ ಈ ಕಿರೀಟ ಒಲಿದಿದೆ.

 


1990ರ ಸೆ.17 ರಂದು ಜಮ್ಮುವಿನ ಜಿ.ಎಸ್. ಕೌಶಲ್ ಹಾಗೂ ರೀನಾ ಕಾಜೂರಿಯ ದಂಪತಿ ಪುತ್ರಿಯಾಗಿ ಜನಿಸಿದ ಸರ್ಗಂ ಪ್ರತಿಭಾನ್ವಿತ ವಿದ್ಯಾರ್ಥಿನಿ.

ಜಮ್ಮುವಿನ ಪ್ರೆಸೆಂಟೇಶನ್ ಕಾನ್ವೆಂಟ್, ಗಾಂಧಿನಗರ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಸರ್ಗಂ, ಜಮ್ಮು ವಿವಿಯ ಇಂಗ್ಲೀಷ್ ಸಾಹಿತ್ಯ ಸ್ನಾತಕೋತ್ತರ ಪದವೀಧರೆ.

ಸರ್ಗಂ ಕೌಶಲ್ ಗೆ ತನಗಿಂತ ಏಳು ವರ್ಷ ಕಿರಿಯನಾದ ಮಂಥನ್ ಕೌಶಲ್ ಎಂಬ ಸಹೋದರನಿದ್ದಾನೆ.

ಸರ್ಗಂ ಕೌಶಲ್ 2018 ರಲ್ಲಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕರ್ನಲ್ ಆದಿತ್ಯ ಮನಮೋಹನ್ ಶರ್ಮಾ ಅವರನ್ನು ವಿವಾಹವಾಗುತ್ತಾರೆ.

 


ಇದೇ ವರ್ಷದ ಜೂನ್ ತಿಂಗಳಿನಲ್ಲಿ 2022-ರ ಮಿಸೆಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯನ್ನು ಗೆದ್ದ ಸರ್ಗಂ ವಿಶ್ವ ಸುಂದರಿ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಜಮ್ಮುವಿನ ಕೆ.ಸಿ.ಇಂಟರ್‌ ನ್ಯಾಷನಲ್ ಸ್ಕೂಲ್‌ ನಲ್ಲಿ ಶಿಕ್ಷಕಿಯಾಗಿರುವ ಸರ್ಗಂ ತನ್ನ 32 ನೇ ವಯಸ್ಸಿನಲ್ಲಿ ಮಿಸೆಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಸರ್ಗಂ, ಶುದ್ಧ ಶಾಖಾಹಾರಿ. ತಮ್ಮ ಫಿಟ್ನೆಸ್‌ ಗೆ ಆಹಾರ ಪದ್ಧತಿಯೂ ನೆರವಾಗಿದೆ ಎನ್ನುತ್ತಾರೆ ಅವರು.

ಸತತ ಪರಿಶ್ರಮ,ಬದ್ಧತೆ,ನೌಕಾದಳದಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ ಆದಿತ್ಯ ಅವರ ಬೆಂಬಲದಿಂದ ಸರ್ಗಂ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಕೊನೆಯ ಹಂತದವರೆಗೂ ನಿಕಟ ಪೈಪೋಟಿ ನೀಡಿದ್ದ ಪಾಲಿನೇಶಿಯಾ ಅವರನ್ನು ಸೋಲಿಸಿ ವಿಶ್ವ ಸುಂದರಿ ಕಿರೀಟಕ್ಕೆ ಭಾಜನನರಾದ ಸರ್ಗಂ

 

andolanait

Share
Published by
andolanait

Recent Posts

ನಾಳೆ ಶ್ರೀ ಅಯ್ಯಪ್ಪ ಕ್ಷೇತ್ರದ ಮುಖಮಂಟಪ ಲೋಕಾರ್ಪಣೆ

ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…

2 hours ago

‘ದೇಸಿ ಬೀಜಗಳನ್ನು ಉಳಿಸಿದರೆ ವಿಷಮುಕ್ತ ಆಹಾರ ನೀಡಲು ಸಾಧ್ಯ’

ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…

2 hours ago

ಕ್ರಿಸ್‌ಮಸ್ ಹಬ್ಬಕ್ಕೆ ಅರಮನೆ ನಗರಿ ಸಜ್ಜು

ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…

2 hours ago

ಡಿಎಚ್‌ಒ ವರ್ಗಾವಣೆಯಲ್ಲಿ ಎಡವಟ್ಟು

ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…

2 hours ago

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

13 hours ago