Categories: Uncategorized

ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವಲ್ಲಿ ಸಾವಯವ ಕೃಷಿಯ ಪಾತ್ರ ಮಹತ್ವವಾದದ್ದು: ಡಾ.ಎಸ್.ವಿ ಸುರೇಶ್

ಮೈಸೂರು: ಭೂಮಿ ಒಂದು ನೈಸರ್ಗಿಕ ಸಂಪನ್ಮೂಲ ಅದನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಭೂಮಿಯ ಫಲವತ್ತತೆಯನ್ನು ಉಳಿಸುವಲ್ಲಿ ಸಾವಯವ ಕೃಷಿಯ ಪಾತ್ರ ಮಹತ್ವವಾದದ್ದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ ಸುರೇಶ್ ಹೇಳಿದರು.

ಇಂದು(ಜೂ.26) ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಮೈಸೂರಿನ ಆಕಾಶವಾಣಿ, ಕೃಷಿ ಇಲಾಖೆ, ಸಾವಯವ ಕೃಷಿ ಸಂಶೋಧನ ಕೇಂದ್ರ, ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಮಂಡ್ಯದ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ ಮತ್ತು ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲಾ ಸಾವಯವ ಕೃಷಿಕರ ಒಕ್ಕೂಟ(ರಿ) ಇವರ ಸಂಯುಕ್ತಾಶ್ರಯದಲ್ಲಿ ಸಾವಯವ ಸಂಪದ-ಸಮಗ್ರ ಸಾವಯವ ಕೃಷಿ ಬದುಕಿನ ಬೇಸಾಯ ಚಿತ್ರಣ ಕುರಿತ ಬಾನುಲಿ ಸರಣಿ ಕಾರ್ಯಕ್ರಮದ ಸಮರೋಪ ಸಮಾರಂಭ ಹಾಗೂ ಕೃಷಿ ದೀವಿಗೆ-ಸಂಶೋಧನಾ ಸಂಸ್ಥೆಯೊಂದಿಗೆ ಕೃಷಿ ಕಲಿಕೆ ಕುರಿತ ಬಾನುಲಿ ಸರಣಿಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದವರು.

ಆಧುನಿಕ ಕೃಷಿ ಅಳವಡಿಕೆಯಿಂದ ಮಣ್ಣಿನ ಫಲವತ್ತತೆಯು ಕಳೆದು ಹೋಗುತ್ತಿದೆ. ಅದನ್ನು ತಡೆದು ಮಣ್ಣಿಗೆ ಮರು ಜೀವ ನೀಡಬೇಕೆಂದರೆ ಸಾವಯವ ಕೃಷಿಯ ಅಳವಡಿಕೆ ಅತ್ಯಗತ್ಯ. 54 ಸರಣಿಯ ಬಾನುಲಿ ಕಾರ್ಯಕ್ರಮವು ಯಶಸ್ವಿಯಾಗಿರುವುದಕ್ಕೆ ರೈತರ ಭಾಗವಹಿಸುವಿಕೆ ಕಾರಣವಾಗಿದ್ದು, ತರಬೇತಿ ಪಡೆದ ರೈತರು ಸಾವಯವ ಕೃಷಿಯ ಬಗ್ಗೆ ಇತರರಿಗೂ ತಿಳಿಸಿ ಹೆಚ್ಚಿನ ಜನರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದರು.

ತoತ್ರಜ್ಞಾನ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಅವಿಭಾಜ್ಯ ಅಂಗವಿದoತೆ ಅದನ್ನು ಯಾವ ರೀತಿ ಎಷ್ಟರ ಮಟ್ಟಿಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸಾವಯವ ಕೃಷಿ ಎಂಬುದು ಮಣ್ಣಿನ ಫಲವತ್ತತೆಯ ಮೇಲೆ ಅವಲಂಬಿಸಿರುತ್ತದೆ. ಕಡಿಮೆ ಫಲವತ್ತತೆ ಹೊಂದಿರುವ ಭೂಮಿಯಲ್ಲಿ ತಡವಾಗುತ್ತದೆ. ಆದರೆ ಸತತ ಪ್ರಯತ್ನವನ್ನು ಮಾಡಿದರೆ ಸಾವಯವ ಕೃಷಿಯಲ್ಲಿ ಯಶಸ್ಸನ್ನು ಪಡೆಯಬಹುದು ಎಂದು ತಿಳಿಸಿದರು.

ಪ್ರತಿಯೊಬ್ಬ ರೈತರು ಸಹ ಆಸೆ ಆಸಕ್ತಿ ಮತ್ತು ಬದ್ಧತೆಯಿಂದ ಕೆಲಸವನ್ನು ನಿರ್ವಹಿಸಬೇಕು. ಸಾವಯವ ಕೃಷಿಯನ್ನು ಕಾರ್ಯರೂಪಕ್ಕೆ ತಂದು ಅನುಸರಿಸಿಕೊಂಡು ನಿರಂತರವಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಕಾಶವಾಣಿಯ ಉಪ ನಿರ್ದೇಶಕರು(ಕಾರ್ಯಕ್ರಮ) ಹಾಗೂ ನಿಲಯದ ಮುಖ್ಯಸ್ಥರಾದ ಉಮೇಶ್,  ಸಾವಯವ ಕೃಷಿ ಎಂದರೆ ಮೂಲ ಕೃಷಿಯನ್ನು ಹುಡುಕುವುದು ಎಂದರ್ಥ. ಸಾವಯವ ಕೃಷಿಗೆ ಸಾವಯವ ಕೃಷಿಯೇ ಸಾಟಿ. ರೈತರು ಆದಾಯಕ್ಕಾಗಿ ಆಧುನಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಬದಲು ಆರೋಗ್ಯಕರ ಸಾವಯವ ಕೃಷಿಯನ್ನು ಆಯ್ದುಕೊಂಡು ಇತರರಿಗೂ ಸಾವಯವ ಕೃಷಿಯ ಪ್ರಯೋಜನವನ್ನು ತಿಳಿಸಿಕೊಡಬೇಕು ಎಂದು ಹೇಳಿದರು.

ಬಾನುಲಿ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ರೈತರನ್ನು ಹೆಚ್ಚಾಗಿ ಆಕರ್ಷಿಸುತ್ತಿದ್ದು, ಇದೇ ರೀತಿಯ ಇನ್ನು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಕೃಷಿಕರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಅಶೋಕ್ ಕುಮಾರ್ ಡಿ ಅವರು ಮಾತನಾಡಿ, ಮನುಷ್ಯನಿಗೆ ಆಹಾರ ಧಾನ್ಯಗಳು ಮೊದಲ ಆದ್ಯತೆಯಾಗಿದ್ದು, ಸಾವಯವ ಕೃಷಿಯಲ್ಲಿ ಅಡಿಕೆ, ಅರಿಶಿಣ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ರಾಗಿ, ನವಣೆ, ಜೋಳ ಇತ್ಯಾದಿ ಆಹಾರ ಬೆಳೆಗಳನ್ನು ಬೆಳೆಯಲು ಒತ್ತು ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಆಕಾಶವಾಣಿಯ ಉದ್ಘೋಷಕರಾದಂತಹ ಆರ್.ಲೋಕೇಶ್ವರಿ, ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಮತ್ತು ಹಿರಿಯ ಕ್ಷೇತ್ರ ಅಧೀಕ್ಷಕರಾದ ಡಾ.ಸಿ ರಾಮಚಂದ್ರ, ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಎನ್ ಕೇಶವಮೂರ್ತಿ, ಮಂಡ್ಯ ವಿ.ಸಿ ಫಾರಂ ನ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎನ್ ಶಿವಕುಮಾರ್, ಮೈಸೂರಿನ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಡಾ.ಬಿ.ಎಸ್ ಚಂದ್ರಶೇಖರ, ಮೈಸೂರು ಮಂಡ್ಯ ಚಾಮರಾಜನಗರ ಸಾವಯವ ಕೃಷಿಕರ ಒಕ್ಕೂಟ ರಂಗಸಮುದ್ರ ಸಾವಯವ ಕೃಷಿಕರಾದ ರಮೇಶ್ ಪಿ, ರಂಗಸಮುದ್ರ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಎಸ್ ಬಿ ಮಮತಾ, ರೈತ ಬಾಂಧವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯ ವಿಷಾದಕರ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಹಿನ್ನೆಲೆಯಲ್ಲಿ, ಮಲಯಾಳಂ ಭಾಷಾ ಮಸೂದೆ ೨೦೨೫ ಅನ್ನು…

54 mins ago

ಓದುಗರ ಪತ್ರ: ಗಡಿಭಾಗದ ಶಾಲೆಗಳಲ್ಲಿ ಕನ್ನಡ ನಿರ್ಲಕ್ಷ್ಯ ಸಲ್ಲದು

ನಮ್ಮ ರಾಜ್ಯದ ಗಡಿಭಾಗಗಳಲ್ಲಿನ ಅನ್ಯಭಾಷಾ ಮಾಧ್ಯಮ ಶಾಲೆಗಳಲ್ಲಿ (ತಮಿಳು, ಮರಾಠಿ, ಮಲಯಾಳಂ, ಉರ್ದು, ತೆಲುಗು) ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿ…

56 mins ago

ಓದುಗರ ಪತ್ರ: ಜಯಚಾಮರಾಜ ಒಡೆಯರ್ ವೃತ್ತದ ಹೆಸರು ಉಳಿಯಲಿ

ಮಂಡ್ಯ ಸೀಮೆಯ ಆರ್ಥಿಕ, ಸಾಮಾಜಿಕ, ಕೈಗಾರಿಕೆ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕಾರ್ಯದಲ್ಲಿ ಮೈಸೂರು ರಾಜವಂಶಸ್ಥರ ಕೊಡುಗೆ ಅಪಾರ.…

59 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಇಡಿ ದಾಳಿ: ಕೇಂದ್ರದ ಜೊತೆ ಮತ್ತೆ ಮಮತಾ ಜಟಾಪಟಿ

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಪಶ್ಚಿಮ ಬಂಗಾಳದ ರಾಜಕಾರಣ ಎಂದರೆ ಅದು ಬೀದಿ ಕಾಳಗ. ಈ ಬೀದಿ ಕಾಳಗದ ರಾಜಕಾರಣ…

1 hour ago

ದುರಸ್ತಿಯಾದ ಬೆನ್ನಲ್ಲೇ ಗುಂಡಿಮಯವಾದ ಕರಡಿಗೋಡು ರಸ್ತೆ

ಕೃಷ್ಣ ಸಿದ್ದಾಪುರ ಕಳಪೆ ರಸ್ತೆ ಕಾಮಗಾರಿ; ೩೦ ಲಕ್ಷ ರೂ. ಅನುದಾನ ವ್ಯರ್ಥ ಸಿದ್ದಾಪುರ: ಇಲ್ಲಿನ ಕರಡಿಗೋಡು ಗ್ರಾಮದಲ್ಲಿ ರಸ್ತೆ…

1 hour ago

ಮೂಲಸೌಕರ್ಯ ವಂಚಿತ ಮುನಿಯಪ್ಪನ ದೊಡ್ಡಿ ಗ್ರಾಮ

ಮಹಾದೇಶ್ ಎಂ.ಗೌಡ ಕುಡಿಯುವ ನೀರು, ಚರಂಡಿ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರ ಆಗ್ರಹ  ಹನೂರು: ಕುಡಿಯುವ ನೀರಿಗೆ ಹಾಹಾಕಾರ, ಶಾಲೆಗೆ…

1 hour ago