ನದೆಹಲಿ: ಸುದೀರ್ಘ 17 ವರ್ಷಗಳ ಕಾಯುವಿಕೆಯ ಬಳಿಕ ಟೀಂ ಇಂಡಿಯಾ 9ನೇ ಆವೃತ್ತಿಯ ಟಿ20 ವಿಶ್ವಕಪ್‌ನ್ನು ಜಯಿಸಿತು. ಇದೀಗ ತನ್ನ ಮುಂದಿನ ಸರಣಿಗಾಗಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ.
ಆದರೆ ಇದು ವಿಶ್ವಕಪ್ ಆಡಿದ ತಂಡವಲ್ಲ. ಬದಲಾಗಿ ಮತ್ತೊಂದು ಯುವ ಪಡೆಯನ್ನು ಸಜ್ಜುಗೊಳಿಸಿ ಕಳುಹಿಸಿದೆ. ಇದೇ ಜುಲೈ. 6 ರಿಂದ ಆರಂಭವಾಗಲಿರುವ ಸರಣಿಗೆ ಯುವ ಬ್ಯಾಟರ್ ಶುಭ್‌ಮನ್ ಗಿಲ್ ನಾಯಕರಾಗಿದ್ದಾರೆ. ಇನ್ನು ಈ ಸರಣಿಗೆ ಒಟ್ಟು 15 ಜನ ಆಟಗಾರರ ತಂಡವೊಂದನ್ನು ಕಳುಹಿಸಿಕೊಡಲಾಗಿದೆ.
ಭಾರತ ಹಾಗೂ ಜಿಂಬಾಬ್ವೆ ನಡುವಣ ಐದು ಚುಟುಕು ಮಾದರಿಯ ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆಯಲ್ಲಿ ಆಯೋಜನೆಯಾಗಿದೆ.
ಭಾರತ vs ಜಿಂಬಾಬ್ವೆ ಚುಟುಕು ಸರಣಿ ವೇಳಾಪಟ್ಟಿ:
ಮೊದಲ ಟಿ20 ಪಂದ್ಯ: ಜುಲೈ. 6 ರಂದು ಸಂಜೆ 4.30ಕ್ಕೆ
ಎರಡನೇ ಟಿ20 ಪಂದ್ಯ: ಜುಲೈ. 7 ರಂದು ಸಂಜೆ 4.30ಕ್ಕೆ
ಮೂರನೇ ಟಿ20 ಪಂದ್ಯ: ಜುಲೈ. 10 ರಂದು ಸಂಜೆ 4.30ಕ್ಕೆ
ನಾಲ್ಕನೇ ಟಿ20 ಪಂದ್ಯ: ಜುಲೈ. 13 ರಂದು ಸಂಜೆ 4.30ಕ್ಕೆ
ಐದನೇ ಟಿ20 ಪಂದ್ಯ: ಜುಲೈ. 14 ರಂದು ಸಂಜೆ 4.30ಕ್ಕೆ
ಪಂದ್ಯ ಆರಂಭ: ಭಾರತೀಯ ಕಾಲಮಾನ ಪ್ರಕಾರ ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಬದಲಾಗಿ ಸಂಜೆ 4.30ಕ್ಕೆ ಪ್ರಾರಂಭವಾಗುತ್ತದೆ. ಅಂದರೆ ಜಿಂಬಾಬ್ವೆ ಕಾಲಮಾನ ಪ್ರಕಾರ ಮದ್ಯಾಹ್ನ ಒಂದು ಗಂಟೆಗೆ ಪಂದ್ಯ ನಡೆಯಲಿದೆ.
ವೀಕ್ಷಣೆ: ಭಾರತ ಹಾಗೂ ಜಿಂಬಾಬ್ವೆ ನಡುವಣ ಪಂದ್ಯವನ್ನು ಸೋನಿ ನೆಟ್ವರ್ಕ್‌ನಲ್ಲಿ ಮತ್ತು ಸೋನಿ ಆಪ್ ಮೂಲಕ ವೀಕ್ಷಿಸಬಹುದಾಗಿದೆ.
ಟೀಂ ಇಂಡಿಯಾ: ಶುಭ್‌ಮನ್ ಗಿಲ್(ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್(ವಿ.ಕೀ), ಧ್ರವ್ ಜುರೆಲ್, ಶಿವಂ ದುಬೆ, ರಿಯಾನ್ ಪರಾಗ್, ವಾಷಿಂಗ್‌ಟನ್ ಸುಂದರ್, ಖಲೀಲ್ ಅಹ್ಮದ್, ತುಷಾರ್ ದೇಶ್‌ಪಾಂಡೆ, ಮುಖೇಶ್ ಕುಮಾರ್, ರವಿ ಬಿಷ್ಣೋಯ್, ಆವೇಶ್ ಖಾನ್
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…