Categories: Uncategorized

ಇಡಿ ಕೈಗೆ ಪ್ರಮುಖ ಸಾಕ್ಷ್ಯ!

ಎರಡನೇ ದಿನವೂ ಅಧಿಕಾರಿಗಳಿಂದ ಮುಡಾ ದಾಖಲೆಗಳ ಪರಿಶೀಲನೆ

ಮೈಸೂರು: ನಿವೇಶನಗಳ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಽಸಿದಂತೆ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ೨ನೇ ದಿನವಾದ ಶನಿವಾರವೂ ದಾಳಿ ಮುಂದುವರಿಸಿದ್ದು, ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ದೊರೆತಿವೆ.

ಇಡಿ ಅಧಿಕಾರಿಗಳ ಮೊದಲ ದಿನದ ಡ್ರಿಲ್‌ಗೆ ಬೆಚ್ಚಿಬಿದ್ದ ಮುಡಾ ಅಧಿಕಾರಿಗಳು, ವೈಟ್ನರ್  ಹಚ್ಚದ ದಾಖಲೆಗಳನ್ನು ಶನಿವಾರ ತಂದೊಪ್ಪಿಸಿ ದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ
ಸಾಧ್ಯತೆ ಇದೆ.

ಶುಕ್ರವಾರ ಬೆಳಿಗ್ಗೆ ೧೧ ಗಂಟೆಯಿಂದ ಸತತ ೧೨ ಗಂಟೆಗಳ ಕಾಲ ಸಾಕಷ್ಟು ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು, ರಾತ್ರಿ ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಿಗ್ಗೆ ಮತ್ತೆ ಸಿಆರ್ ಪಿಎಫ್- ಯೋಧರ ಭದ್ರತೆಯೊಂದಿಗೆ ಆಯುಕ್ತರ ಕೊಠಡಿಯಲ್ಲಿ ೧೨ ಅಧಿಕಾರಿಗಳ ತಂಡ ಮತ್ತೆ ವಿಚಾರಣೆ ಮುಂದುವರಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ವಿಚಾರಣೆ ನಡೆಸಿದ ಹಿರಿಯ ಅಧಿಕಾರಿಗಳು ಸಿಎಂ ಪತ್ನಿ ಪಾರ್ವತಿಗೆ ಸಂಬಂಧಿಸಿದ ೫೦:೫೦ ಅನುಪಾತದಡಿ ಮಂಜೂರಾಗಿರುವ ೧೪ ನಿವೇಶನಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಕೆಸರೆ ಗ್ರಾಮದ ಸರ್ವೆ ನಂಬರ್ ೪೬೪ರ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದ ತನಿಖಾಧಿಕಾರಿಗಳು ತಹಸಿಲ್ದಾರ್, ವಲಯ ಆಯುಕ್ತರು, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದರು.

ಪ್ರತಿಯೊಬ್ಬರಿಗೂ ತಮ್ಮದೇ ಆದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಜತೆಗೆ ಒಬ್ಬರಿಗೊಬ್ಬರು ಮರು ಪ್ರಶ್ನೆಗಳನ್ನೂ ಹಾಕಿ ಸತ್ಯಾಂಶ ಹೊರ ತೆಗೆಯುವಲ್ಲಿ ಸ-ಲರಾಗಿದ್ದಾರೆ. ಕೇಂದ್ರೀಯ ಅರೆಸೇನಾಪಡೆ ಭದ್ರತೆಯಲ್ಲಿ ದಾಖಲೆಗಳನ್ನು ಆರು ಮಂದಿ ತಂಡ ಪರಿಶೀಲಿಸಿತು.

ಬೆಂಗಳೂರಿನಿಂದ ಕರೆಯಿಸಿದ್ದ ಇಬ್ಬರು ಎ-ಎಸ್‌ಎಲ್ ಅಧಿಕಾರಿಗಳ ಕೈಗೆ ಮೂಲ ದಾಖಲೆ ಒದಗಿಸಿ ವರದಿ ನೀಡುವಂತೆ ಕೇಳಲಾ
ಗಿದೆ. ಮನವಿ ಪತ್ರದ ೨ನೇ ಪುಟದಲ್ಲಿದ್ದ ಖಾಲಿ ಜಾಗಕ್ಕೆ ವೈಟ್ನರ್ ಹಚ್ಚಿದ್ದ ವಿಚಾರವೇ ಈಗ ಇಡಿಗೆ
ಸಿಕ್ಕಿದ ಪ್ರಮುಖ ಸಾಕ್ಷ್ಯವಾಗಿದೆ.

ಮೂಲ ದಾಖಲೆ ಪತ್ತೆ

ಮುಡಾ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪತ್ನಿ ನೀಡಿದ್ದ ಮನವಿ ಪತ್ರಕ್ಕೆ ವೈಟ್ನರ್ ಹಚ್ಚಿರುವುದು ಪತ್ತೆಯಾಗಿದೆ. ಮನವಿ ಪತ್ರದ ೨ನೇ ಪುಟದಲ್ಲಿದ್ದ ಖಾಲಿ ಜಾಗಕ್ಕೆ ವೈಟ್ನರ್ ಹಚ್ಚಲಾಗಿತ್ತು. ಆದರೆ, ಇದರ ಮಧ್ಯೆಯೇ ವೈಟ್ನರ್ ಹಚ್ಚಿರುವ ಪತ್ರ ಕೂಡ
ಇಡಿ ಅಧಿಕಾರಿಗಳಿಗೆ ಸಿಕ್ಕಿದೆ. ವೈಟ್ನರ್ ಹಚ್ಚಿದ ದಾಖಲೆಯೇ ಸಿದ್ದರಾಮಯ್ಯಗೆ ಸಂಕಷ್ಟ ತರಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ಸಿಎಂ ಬಿಡುಗಡೆ ಮಾಡಿರುವ ದಾಖಲೆ ಹಾಗೂ ಆರ್‌ಟಿಐನಲ್ಲಿ ನೀಡಿದ್ದ ದಾಖಲೆ ಬೇರೆ ಬೇರೆ ಇದೆ. ವೈಟ್ನರ್‌ನಲ್ಲೂ ವ್ಯತ್ಯಾಸ ಕಂಡು ಬಂದಿದೆ. ಇದಿಷ್ಟೇ ಅಲ್ಲ,ಎರಡೂ ದಾಖಲೆಗಳಲ್ಲಿ ಸಿಎಂ ಪತ್ನಿಯ ಸಹಿಯಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ.

 

ಆಂದೋಲನ ಡೆಸ್ಕ್

Recent Posts

ಎಂಡಿಎ ಬಜೆಟ್‌ | ಮೈಸೂರು ಅಭಿವೃದ್ಧಿಗೆ ಒತ್ತು ; 799.90 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ

ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…

15 mins ago

ಮೈಸೂರು | 24 ಅಪರಾಧ ಪ್ರಕರಣ ಭೇಧಿಸಿದ ಪೊಲೀಸರು ; 20ಕ್ಕೂ ಹೆಚ್ಚು ಆರೋಪಿಗಳು ವಶಕ್ಕೆ

ಮೈಸೂರು : ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ 24 ಅಪರಾಧ ಪ್ರಕರಣಗಳನ್ನು…

60 mins ago

ʻಪಂಚ ಗ್ಯಾರಂಟಿʼಯಿಂದ ಮಹಿಳಾ ಸಬಲೀಕರಣ ಸಾಧ್ಯ : ಅರುಣ್ ಕುಮಾರ್

ಮೈಸೂರು : ರಾಜ್ಯ ಸರ್ಕಾರದ ʻಪಂಚ ಗ್ಯಾರಂಟಿʼ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…

1 hour ago

ಬೆಟ್ಟಳ್ಳಿ ಮಾರಮ್ಮನ ಜಾತ್ರೆ ; ಹನೂರಲ್ಲಿ 2 ದಿನ ಮದ್ಯ ಮಾರಾಟ ನಿಷೇಧ

ಹನೂರು : ಪಟ್ಟಣದಲ್ಲಿ ನಡೆಯಲಿರುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ಹನೂರು…

1 hour ago

ಕೆ.ಆರ್.ಆಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ICU ಘಟಕ ಸ್ಥಾಪಿಸಿ : ಎಂಎಲ್‌ಸಿ ಕೆ.ಶಿವಕುಮಾರ್ ಮನವಿ

ಬೆಂಗಳೂರು : ಮಂಡ್ಯ, ಚಾಮರಾಜನಗರ, ಹೊಳೆನರಸೀಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ತುರ್ತು ಸೇವೆಗಳ ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ…

2 hours ago

ಈವರೆಗೂ ಇರಾನ್‌ನಿಂದ 67 ಸಾವಿರ ಭಾರತೀಯರನ್ನು ಕರೆ ತಂದಿದ್ದೇವೆ: ಸಚಿವ ಜೈಶಂಕರ್‌

ನವದೆಹಲಿ: ಇರಾನ್-‌ಇಸ್ರೇಲ್‌ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿದ್ದ 67 ಸಾವಿರ ಭಾರತೀಯರನ್ನು ಕರೆ ತಂದಿದ್ದೇವೆ ಎಂದು ವಿದೇಶಾಂಗ ಸಚಿವ ಜೈಶಂಕರ್‌…

4 hours ago