ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಕ್ಫ್ ಆಸ್ತಿ ಸಂಬಂಧ ಸಚಿವ ಜಮೀರ್ ಅಹಮದ್ ಅವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡಿದ್ದರ ಕುರಿತು ಜಮೀರ್ ಪ್ರತಿಕ್ರಿಯೆ ನೀಡಿದ್ದಾರೆ.
ಜಮೀರ್ ಅಹಮದ್ ಅವರು ರಾಜ್ಯದಲ್ಲಿ ಕೋಮು ದ್ವೇಷ ಹರಡುತ್ತಿದ್ದು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಜಮೀರ್ ಅಹ್ಮದ್ ತಮ್ಮನ್ನು ಸಂಪುಟದಿಂದ ಕಿತ್ತೊಗೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹಮದ್ ಅವರು ಪ್ರಹ್ಲಾದ್ ಜೋಶಿ ಅವರಿಗೆ ರಾಜ್ಯದ ಹಿಂದೂ- ಮುಸ್ಲಿಂ, ಮತೀಯವಾದ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ಗೊತ್ತಿಲ್ಲ. ಸಂಪುಟದಿಂದ ನನ್ನನ್ನು ತೆಗೆಯಲು ಸಾಧ್ಯವಿಲ್ಲ ಎಂದು ತಿರಗೇಟು ನೀಡಿದರು.
ಭಾರತ ಒಂದು ಜಾತ್ಯಾತೀತ ದೇಶ, ನಾವೆಲ್ಲರೂ ಭಾರತೀಯರು. ಪ್ರಹ್ಲಾದ್ ಜೋಶಿಯವರು ಜಾತಿ ರಾಜಕಾರಣ ಮಾಡಬಾರದು, ʼಮುಸ್ಲಿಂರು ಬಿಜೆಪಿ ವಿರುದ್ಧ ಮತ ಹಾಕುವ ಕಾರಣ ಸಮಯ ಸಿಕ್ಕಾಗಲೆಲ್ಲ ಈ ರೀತಿ ಮಾತನಾಡುತ್ತಾ ರಾಜ್ಯದ ಹಿಂದೂ-ಮುಸ್ಲಿಂರ ನಡುವೆ ಬಿರುಕು ಮೂಡಿಸುತ್ತಾರೆʼಎಂದರು.
ರಾಜ್ಯದಲ್ಲಿ ಉಪಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವಕ್ಫ್ ಆಸ್ತಿ ವಿಷಯ ಮುನ್ನಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.
ವಕ್ಫ್ ಬೋರ್ಡ್ ನಲ್ಲಿ ೨೩ ಸಾವಿರ ಎಕರೆ ಜಾಗ ಇದ್ದು. ೮೪ ಸಾವಿರ ಎಕರೆ ಒತ್ತುವರಿ ಆಗಿದೆ. ವಕ್ಪ್ ಆಸ್ತಿಯನ್ನು ಉಳಿಸಿಕೊಳ್ಳುವ ಉದ್ಧೇಶದಿಂದ ಅದರ ತೆರವಿಗೆ ವಕ್ಫ್ ಆದಾಲತ್ ನಡೆಸುತ್ತಿದ್ದೇವೆ, ಸರ್ಕಾರದ ಒಂದು ಇಂಚು ಜಾಗವನ್ನು ಪಡೆದಿಲ್ಲ ಎಂದು ಹೇಳಿದರು.
ವಿಜಯಪುರದಲ್ಲಿ ಈ ಆಸ್ತಿ ವಿಷಯವಾಗಿ ಬಿಜೆಪಿಯವರು ರೈತರನ್ನು ಎತ್ತಿಕಟ್ಟುತ್ತಿದ್ದಾರೆ. ವಕ್ಫ್ ಆಸ್ತಿ ಸಂಬಂಧ ಸೂಕ್ತವಾದ ಎಲ್ಲಾ ದಾಖಲೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ ಎಂದರು.
ವಕ್ಫ್ ನಲ್ಲಿ ಜಮೀನು ಲೂಟಿಯಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ: ಪ್ರತಿಪಕ್ಷ ನಾಯಕ ಕೋಲಾರ: ವಕ್ಫ್ ಅಧಿಕಾರಿಗಳು ರೈತರ ಬಳಿ ಬಂದರೆ…
ಮಂಡ್ಯ: ಇಲ್ಲಿನ ಬೂದನೂರು ಗ್ರಾಮದ ಬಳಿ ಅನ್ಯಕ್ರಾಂತವಾಗದ ಜಮೀನಿನಲ್ಲಿ ಹುಕ್ಕಾ ಬಾರ್ ನಡೆಸಲು ಅನಧಿಕೃತ ಲೈಸೆನ್ಸ್ ನೀಡಿದ ಪಿಡಿಓ ವಿನಯ್ಕುಮಾರ್ನನ್ನು…
ಮಡಿಕೇರಿ: ಶನಿವಾರಸಂತೆಯ ವಿಜಯ ವಿನಾಯಕ ದೇವಾಲಯದಲ್ಲಿ ಭಾನುವಾರ ರಾತ್ರಿ ಬಾಗಿಲು ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿ ಹೊತ್ತು ಕಳ್ಳರು…
ಬೆಂಗಳೂರು: ಇನ್ನೂ ತಮ್ಮ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಎಚ್ಎಸ್ಆರ್ಪಿ) ಅಳವಡಿಕೆ ಮಾಡದ ವಾಹನ ಸವಾರರಿಗೆ ರಾಜ್ಯ ಸರ್ಕಾರ…
ಮೈಸೂರು : ಸಾಂಸ್ಕೃತಿಕ ನಗರದಲ್ಲಿ ಇದೀಗ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು ಯುವತಿಯ ಸ್ನೇಹಿತರಿಬ್ಬರು ವಿಜಯನಗರದ ಖಾಸಗಿ ಹೋಟೆಲ್…
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.…