ಮೈಸೂರು: ವಾಹನವೊಂದರಲ್ಲಿ ಸಾಗಿಸುತ್ತಿದ್ದಾಗ ಕೆಳಗಡೆ ಬಿದ್ದ ಬಟ್ಟೆ ತುಂಬಿದ ಬಾಕ್ಸ್, ಆಟೋ ಚಾಲಕರೊಬ್ಬರಿಗೆ ಸಿಕ್ಕಿದ್ದು, ಅದನ್ನು ಮೈಸೂರಿನ ಬಾಲಕಿ ಯರ ಬಾಲಮಂದಿರಕ್ಕೆ ತಲುಪಿಸಿದ್ದಾರೆ.
ಶನಿವಾರ ಮಧ್ಯಾಹ್ನ ೨ ಗಂಟೆ ವೇಳೆಯಲ್ಲಿ ನಂಜನಗೂಡಿನಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಸರಕು ಸಾಗಾಣಿಕೆ ವಾಹನದಲ್ಲಿದ್ದ ಬಾಕ್ಸ್‌ವೊಂದು ಬೇಗೂರು ಬಳಿ ರಸ್ತೆಗೆ ಬಿದ್ದಿದ್ದು, ಅದೇ ದಾರಿಯಲ್ಲಿ ಮೈಸೂರಿನ ಕಡೆಗೆ ಆಟೋ ರಿಕ್ಷಾದಲ್ಲಿ ಬರುತ್ತಿದ್ದ ನವೀನ್ ಅವರಿಗೆ ಆ ಬಾಕ್ಸ್ ಸಿಕ್ಕಿದೆ. ಆ ಬಾಕ್ಸ್‌ನ್ನು ವಾಪಸ್ ಮಾಡುವ ಸಲುವಾಗಿ ಅವರು ಆ ವಾಹನದ ಹಿಂದೆ ಒಂದಷ್ಟು ದೂರ ಹೋಗಿದ್ದಾರೆ.
ಆದರೆ, ಅದನ್ನು ಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಅವರು ಮೈಸೂರಿನ ಸಿದ್ದಾರ್ಥ ಲೇಔಟ್‌ನಲ್ಲಿರುವ ತಮ್ಮ ಮನೆಗೆ ವಾಪಸ್ ಬಂದಿದ್ದಾರೆ. ಆ ಬಾಕ್ಸ್‌ನಲ್ಲಿ ಹೆಣ್ಣುಮಕ್ಕಳು ಧರಿಸುವ ೧೫ ಹೊಸ ಚೂಡಿದಾರ್‌ಗಳು ಕಂಡುಬಂದಿವೆ. ಸಾಗಾಣಿಕೆ ವಾಹನದವರು ತಮ್ಮನ್ನು ಹುಡುಕಿಕೊಂಡು ಬರಬಹುದು ಎಂದು ನವೀನ್ ಭಾವಿಸಿದ್ದರು. ಹಾಗಾಗಿ ಆ ಬಾಕ್ಸ್‌ನ್ನು ಮಂಗಳವಾರದವರೆಗೆ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದರು.
ಆದರೆ, ಚೂಡಿದಾರ್‌ಗಳಿದ್ದ ಬಾಕ್ಸ್ ಅನ್ನು ಕೇಳಿಕೊಂಡು ಯಾರೂ ನವೀನ್ ಅವರನ್ನು ಸಂಪರ್ಕಿಸಲಿಲ್ಲ. ಆದ್ದರಿಂದ ಹೆಣ್ಣುಮಕ್ಕಳ ಚೂಡಿದಾರ್‌ಗಳಿದ್ದ ಬಾಕ್ಸ್ ಅನ್ನು ನವೀನ್ ಅವರು ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ತಲುಪಿಸಿದ್ದಾರೆ. ಅಲ್ಲಿರುವ ಹೆಣ್ಣುಮಕ್ಕಳಿಗೆ ಈ ಚೂಡಿದಾರ್‌ಗಳು ಉಪಯುಕ್ತವಾಗಬಹುದು ಎಂದು ಭಾವಿಸಿ ಅಲ್ಲಿಗೆ ಕೊಟ್ಟಿದ್ದೇನೆ ಎಂದು ಆಟೋ ಚಾಲಕ ನವೀನ್ ‘ಆಂದೋಲನ’ ದಿನಪತ್ರಿಕೆಗೆ ತಿಳಿಸಿದರು.
ವಾರಸುದಾರರು ಬಾಲಮಂದಿರ ಸಂಪರ್ಕಿಸಬಹುದು
ನವೀನ್ ಅವರು ಆ ಬಾಕ್ಸ್‌ನ್ನು ಮಂಗಳವಾರ ಬಾಲಮಂದಿರದಲ್ಲಿದ್ದ ಅಧ್ಯಕ್ಷರಾದ ಭಾಗ್ಯಶ್ರೀ ಅವರಿಗೆ ತಲುಪಿಸಿದ್ದಾರೆ. ಬಾಕ್ಸ್‌ನ ವಾರಸುದಾರರು ಬಾಲಮಂದಿರಕ್ಕೆ ಆಗಮಿಸಿ ಸೂಕ್ತ ಮಾಹಿತಿಗಳನ್ನು ನೀಡಿ ಅದನ್ನು ವಾಪಸ್ ಪಡೆಯಬಹುದು. ಮಾಹಿತಿಗೆ ಮೊ. ಸಂ. 9481831708/ 9845366774 ಸಂಪರ್ಕಿಸಬಹುದು ಎಂದು ಭಾಗ್ಯಶ್ರೀ ಅವರು ತಿಳಿಸಿದ್ದಾರೆ.
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…
ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…
ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…