ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ‘ಒಪ್ಪೋ’ ಭಾರತದ ಮಾರುಕಟ್ಟೆಯಲ್ಲಿ ತನ್ನ ಸರಣಿಯ ಎಫ್25 ಪ್ರೋ 5ಜಿ ಮೊಬೈಲ್ ಅನ್ನು ಪರಿಚಯಿಸಿದೆ. ಈ ಫೋನ್ 128 ಜಿಬಿ ಮತ್ತು 256ಬಿಜಿ ಮೆಮೋರಿ ವೇರಿಯಂಟ್ಸ್‌ಗಳಲ್ಲಿ ಲಭ್ಯವಿದ್ದು, ಇದರ ಬೆಲೆ ಕ್ರಮವಾಗಿ 23,999 ರೂ. ಮತ್ತು 25,999 ರೂ.ಗಳಿಗೆ ಲಭ್ಯವಿದೆ.
ಈ ಫೋನ್ 7.54 ಎಂಎಂ ದಪ್ಪ ಮತ್ತು 6.7 ಇಂಚು ಇದೆ. ಅಲ್ಲದೆ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 48 ನಿಮಿಷಗಳಲ್ಲಿ ಪೂರ್ಣ ಚಾರ್ಜಿಂಗ್ ಆಗಲಿದೆ. ಸ್ಕ್ರೀನ್ ರಕ್ಷಣೆಗಾಗಿ ಪಾಂಡ ಗ್ಲಾಸ್
ಅಳವಡಿಸಲಾಗಿದೆ. ಇನ್ನು ಈ ಫೋನ್‌ನಲ್ಲಿ 64 ಎಂಪಿ ಟ್ರಿಪಲ್ ಕ್ಯಾಮೆರಾ ಹಾಗೂ ಕತ್ತಲಿನಲ್ಲಿಯೂ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯಲು ಅನುಕೂಲವಾಗುವ ಕ್ಯಾಮೆರಾಗಳನ್ನು ಹೊಂದಿದ್ದು, 4ಕೆ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿದೆ.
ಇನ್ನು ಮುಂಭಾಗದಲ್ಲಿ ಸೆಲ್ಫಿಗಳಿಗೆ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಐ ಆಧಾರಿತ ನೆಟ್‌ವರ್ಕ್ ಆಯ್ಕೆ ಮತ್ತು 360 ಡಿಗ್ರಿ ಸುತ್ತಲಿನ ಆಂಟೆನಾ ವಿನ್ಯಾಸವನ್ನು ಸಂಯೋಜಿಸಲಾಗಿದೆ. ಈ ಮೊಬೈಲ್ ಪ್ರಸ್ತುತ ಒಪ್ಪೋ ಮಳಿಗೆಗಳಲ್ಲಿ, ಅಮೆಜಾನ್, ಪ್ಲಿಪ್‌ಕಾರ್ಟ್‌ಗಳಲ್ಲಿ ಲಭ್ಯವಿದೆ. ಇನ್ನು ಎಐ ತಂತ್ರಜ್ಞಾನವು ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…