ಮೈಸೂರು : ಸುಧಾರಣೆ ನೆಪದಲ್ಲಿ ಕ್ರೌರ್ಯ ನಡೆಯುತ್ತಿದೆ. ಜೈಲಲ್ಲಿರುವ ಕೈದಿಗಳಿಗೆ ಕನಸು ಕಾಣುವ ಸ್ವಾತಂತ್ರ್ಯವೂ ಇಲ್ಲದಾಗಿದೆ. ಆರ್ಥಿಕ, ಅಧಿಕಾರ ಮತ್ತು ಜಾತಿ ಅಸಮಾನತೆ ಜೊತೆಗೆ ಕನಸು ಕಾಣುವ ಅಸಮಾನತೆಯೂ ಸಮಾಜದಲ್ಲಿ ಸೃಷ್ಟಿಯಾಗಿದೆ ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ ವಿಷಾದಿಸಿದರು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸ್ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಕವಿತಾ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಮೇಶ್ ಚಂದ್ರ ಅವರ ‘ಝಹಾದಿಯೊಳಗಣ ಹಾಡೇ ಝ’, ಗಣೇಶ್ ಅಮಿನಗಡ ಅವರ ‘ಕೈದಿಗಳ ಕಥನ’, ‘ರಂಗ ಪ್ರಸಂಗ’ ಹಾಗೂ ‘ರಂಗ ಕರ್ಪೂರ’ ಕವನ ಸಂಕಲನಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜೈಲಿಗೆ ಹೋಗಿ ಬಂದ ನಂತರ ಅಪರಾಧದ ಕಳಂಕವನ್ನು ಜೀವನಪೂರ್ತಿ ಹೊತ್ತಿಕೊಂಡು ಬದುಕ ಬೇಕೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಇದೇ ಅಪಮಾನ ರಾಜಕಾರಣಿಗಳಿಗೆ ಯಾಕೆ ಆಗುವುದಿಲ್ಲ? ಸಾವಿರಾರು ಕೋಟಿ ರೂ. ದುಡ್ಡು ಮಾಡಿರುವವರನ್ನು ಅಪರಾಧಿಗಳೆಂದು ತಿಳಿದಿದ್ದರೂ ಅವರಿಗೆ ನಮಸ್ಕಾರ ಮಾಡಿ ಹಾರ, ತುರಾಯಿ ಹಾಕಲಾಗುತ್ತದೆ. ನಮ್ಮ ನ್ಯಾಯದ ಕಲ್ಪನೆಯನ್ನೇ ಪ್ರಶ್ನೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.
ಜೈಲಿನಲ್ಲಿರುವ ಕೈದಿಗಳಿಗಿಂತ ಸಹಸ್ರಪಟ್ಟು ಅಪರಾಧ ಮಾಡಿರುವ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ. ಅವರು ಶ್ರೀಮಂತಿಕೆಯಲ್ಲಿ ಸುಖವಾಗಿಯೇ ಬದುಕುತ್ತಿದ್ದಾರೆ. ಆದರೆ, ನಾವು ಅವರನ್ನು ಅಪರಾಧಿಗಳೆಂದು ಕನಸು, ಮನಸ್ಸಿನಲ್ಲಿಯೂ ಭಾವಿಸುತ್ತಿಲ್ಲ ಎಂದು ವಿಷಾದಿಸಿದರು.
ಜೈಲಿನಲ್ಲಿ ಇರುವವರಲ್ಲಿ 100 ರಲ್ಲಿ 98 ಮಂದಿ ಹಳ್ಳಿಗಳಿಂದ ಬಂದ ಬಡವರು, ಅಲ್ಪ ಶಿಕ್ಷಿತರು. ಶಿಕ್ಷಣ ಪಡೆದವರಿದ್ದರೂ ನ್ಯಾಯವನ್ನು ಖರೀದಿಸಲು ಸಾಧ್ಯವಾಗದವರೇ ಹೆಚ್ಚು. ಅವರ ಮನಸ್ಥಿತಿಯನ್ನು ಅರಿತು ಅವರನ್ನು ಸುಧಾರಣೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಲೇಖಕರಾದ ರಮೇಶ್‌ಚಂದ್ರ, ಗಣೇಶ್ ಅಮಿನಗಡ, ಹಿರಿಯ ರಂಗಕರ್ಮಿ ಹುಲಿಗಪ್ಪ ಕಟ್ಟಿಮನಿ, ಬಿಡುಗಡೆಗೊಂಡ ಕೈದಿಗಳಾದ ಎಚ್.ವಿ.ರಮೇಶ್, ಮಹೇಶ ಬಾಗಳಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…
ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…
ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…
ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…
ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…