ಟೆಕ್‌

ಇಸ್ರೊ ಚಾರಿತ್ರಿಕ ಸಾಧನೆ ; ಕಕ್ಷೆ ಸೇರಿದ ಅತ್ಯಂತ ಭಾರದ ಉಪಗ್ರಹ

ಶ್ರೀಹರಿಕೋಟ : ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಅತ್ಯಂತ ಭಾರದ ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಬಲ್ಲ LVM3-M5 ರಾಕೆಟ್ ಉಡಾವಣೆಯನ್ನು ಭಾನುವಾರ ಸಂಜೆ ಯಶಸ್ವಿಯಾಗಿಸಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಈ ರಾಕೆಟ್ ಉಡಾವಣೆಯಾಯಿತು. ಇದು ಇಲ್ಲಿಯವರೆಗೆ ಇಸ್ರೋ ಉಡಾಯಿಸಿದ ಅತ್ಯಂತ ಭಾರದ ಉಪಗ್ರಹ ಎಂಬುದು ಗಮನಾರ್ಹ. ಸಂಸ್ಥೆ 4,400 ಕೆ.ಜಿ ತೂಕದ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿರುವುದು ಇದೇ ಮೊದಲು ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

ಈ ಉಪಗ್ರಹವು ಭಾರತೀಯ ಭೂಮಿ ಮತ್ತು ಸಮುದ್ರ ಪ್ರದೇಶಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತದೆ. ನೌಕಾಪಡೆಗೆ ಗಮನಾರ್ಹ ಪ್ರಯೋಜನ ನೀಡಲಿದೆ. ಹೆಚ್ಚು ಸಾಮರ್ಥ್ಯದ ಬ್ಯಾಂಡ್‌ವಿಡ್ತ್‌ಗೆ ಪ್ರವೇಶ ಒದಗಿಸುತ್ತದೆ. ದೂರದ ಪ್ರದೇಶಗಳಿಗೆ ಡಿಜಿಟಲ್ ಸಂಪರ್ಕವನ್ನು ಸುಗಮಗೊಳಿಸುತ್ತದೆ.

ಇದನ್ನು ಓದಿ: ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲಿದೆ ಇಸ್ರೋದ 101ನೇ ರಾಕೆಟ್‌

‘ಬಾಹುಬಲಿ’ ಗಾತ್ರದ ರಾಕೆಟ್
43.5 ಮೀಟರ್ ಉದ್ದದ ರಾಕೆಟ್ 8,000 ಕೆ.ಜಿ ತೂಕದ ಪೇಲೋಡ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ “ಬಾಹುಬಲಿ ರಾಕೆಟ್” ಎಂದು ಕರೆಯಲಾಗಿದೆ.

500 ಕೋಟಿ ರೂ. ವೆಚ್ಚ
ಈ ಮಿಷನ್‌ಗಾಗಿ ಸುಮಾರು 500 ಕೋಟಿ ರೂ ವೆಚ್ಚವಾಗಿದ್ದು, ಸಂಪೂರ್ಣವಾಗಿ “ಮೇಕ್ ಇನ್ ಇಂಡಿಯಾ” ಉಪಕ್ರಮದಡಿಯಲ್ಲೇ ಅಭಿವೃದ್ಧಿಪಡಿಸಲಾಗಿದೆ. ಬಾಹುಬಲಿ ರಾಕೆಟ್ ಅನ್ನು ಭಾರತದ ಮಹತ್ವಾಕಾಂಕ್ಷೆಯ “ಗಗನಯಾನ” ಕಾರ್ಯಾಚರಣೆಯಲ್ಲೂ ಬಳಸಲಾಗುತ್ತಿದೆ.

ಮಲ್ಟಿ-ಬ್ಯಾಂಡ್ ಸಂವಹನ ಉಪಗ್ರಹ
ಇಸ್ರೋ ಒದಗಿಸಿದ ಮಾಹಿತಿಯ ಪ್ರಕಾರ, “ಮಲ್ಟಿ-ಬ್ಯಾಂಡ್ ಸಂವಹನ ಉಪಗ್ರಹವು CMS-03 ಭಾರತೀಯ ಮುಖ್ಯ ಭೂಭಾಗ ಸೇರಿದಂತೆ ವಿಶಾಲ ಸಮುದ್ರ ಪ್ರದೇಶಕ್ಕೆ ಸೇವೆಗಳನ್ನು ಒದಗಿಸುತ್ತದೆ. ಈ ಉಪಗ್ರಹ ‘C’, ‘Extended C’, ‘Q’ ಬ್ಯಾಂಡ್‌ಗಳಲ್ಲಿ ವಾಯ್ಸ್​, ಡೇಟಾ ಮತ್ತು ವಿಡಿಯೋ ಲಿಂಕ್‌ಗಳಿಗೆ ಟ್ರಾನ್ಸ್‌ಪಾಂಡರ್ ಸೌಲಭ್ಯಗಳನ್ನು ಒದಗಿಸುತ್ತದೆ.

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

2 hours ago

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

5 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

5 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

5 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

5 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

6 hours ago