ಶ್ರೀಹರಿಕೋಟ : ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಅತ್ಯಂತ ಭಾರದ ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಬಲ್ಲ LVM3-M5 ರಾಕೆಟ್ ಉಡಾವಣೆಯನ್ನು ಭಾನುವಾರ ಸಂಜೆ ಯಶಸ್ವಿಯಾಗಿಸಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಈ ರಾಕೆಟ್ ಉಡಾವಣೆಯಾಯಿತು. ಇದು ಇಲ್ಲಿಯವರೆಗೆ ಇಸ್ರೋ ಉಡಾಯಿಸಿದ ಅತ್ಯಂತ ಭಾರದ ಉಪಗ್ರಹ ಎಂಬುದು ಗಮನಾರ್ಹ. ಸಂಸ್ಥೆ 4,400 ಕೆ.ಜಿ ತೂಕದ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿರುವುದು ಇದೇ ಮೊದಲು ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.
ಈ ಉಪಗ್ರಹವು ಭಾರತೀಯ ಭೂಮಿ ಮತ್ತು ಸಮುದ್ರ ಪ್ರದೇಶಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತದೆ. ನೌಕಾಪಡೆಗೆ ಗಮನಾರ್ಹ ಪ್ರಯೋಜನ ನೀಡಲಿದೆ. ಹೆಚ್ಚು ಸಾಮರ್ಥ್ಯದ ಬ್ಯಾಂಡ್‌ವಿಡ್ತ್‌ಗೆ ಪ್ರವೇಶ ಒದಗಿಸುತ್ತದೆ. ದೂರದ ಪ್ರದೇಶಗಳಿಗೆ ಡಿಜಿಟಲ್ ಸಂಪರ್ಕವನ್ನು ಸುಗಮಗೊಳಿಸುತ್ತದೆ.
ಇದನ್ನು ಓದಿ: ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲಿದೆ ಇಸ್ರೋದ 101ನೇ ರಾಕೆಟ್
‘ಬಾಹುಬಲಿ’ ಗಾತ್ರದ ರಾಕೆಟ್
43.5 ಮೀಟರ್ ಉದ್ದದ ರಾಕೆಟ್ 8,000 ಕೆ.ಜಿ ತೂಕದ ಪೇಲೋಡ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ “ಬಾಹುಬಲಿ ರಾಕೆಟ್” ಎಂದು ಕರೆಯಲಾಗಿದೆ.
500 ಕೋಟಿ ರೂ. ವೆಚ್ಚ
ಈ ಮಿಷನ್‌ಗಾಗಿ ಸುಮಾರು 500 ಕೋಟಿ ರೂ ವೆಚ್ಚವಾಗಿದ್ದು, ಸಂಪೂರ್ಣವಾಗಿ “ಮೇಕ್ ಇನ್ ಇಂಡಿಯಾ” ಉಪಕ್ರಮದಡಿಯಲ್ಲೇ ಅಭಿವೃದ್ಧಿಪಡಿಸಲಾಗಿದೆ. ಬಾಹುಬಲಿ ರಾಕೆಟ್ ಅನ್ನು ಭಾರತದ ಮಹತ್ವಾಕಾಂಕ್ಷೆಯ “ಗಗನಯಾನ” ಕಾರ್ಯಾಚರಣೆಯಲ್ಲೂ ಬಳಸಲಾಗುತ್ತಿದೆ.
ಮಲ್ಟಿ-ಬ್ಯಾಂಡ್ ಸಂವಹನ ಉಪಗ್ರಹ
ಇಸ್ರೋ ಒದಗಿಸಿದ ಮಾಹಿತಿಯ ಪ್ರಕಾರ, “ಮಲ್ಟಿ-ಬ್ಯಾಂಡ್ ಸಂವಹನ ಉಪಗ್ರಹವು CMS-03 ಭಾರತೀಯ ಮುಖ್ಯ ಭೂಭಾಗ ಸೇರಿದಂತೆ ವಿಶಾಲ ಸಮುದ್ರ ಪ್ರದೇಶಕ್ಕೆ ಸೇವೆಗಳನ್ನು ಒದಗಿಸುತ್ತದೆ. ಈ ಉಪಗ್ರಹ ‘C’, ‘Extended C’, ‘Q’ ಬ್ಯಾಂಡ್‌ಗಳಲ್ಲಿ ವಾಯ್ಸ್, ಡೇಟಾ ಮತ್ತು ವಿಡಿಯೋ ಲಿಂಕ್‌ಗಳಿಗೆ ಟ್ರಾನ್ಸ್‌ಪಾಂಡರ್ ಸೌಲಭ್ಯಗಳನ್ನು ಒದಗಿಸುತ್ತದೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…