ಬೆಂಗಳೂರು: ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆಯ ಘಟನೆಗಳು ನಡೆಯದಂತೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಈ ಕುರಿತಂತೆ ಸಂವಿಧಾನವದ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಗುರುವಾರ ಪ್ರಕಟಣೆ ಹೊರಡಿಸಿರುವ ಸಚಿವರು, ಚಿಕ್ಕಮಗಳೂರು ಜಿಲ್ಲೆಯ ಗೇರಮರಡಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಆಚರಣೆ ಸಂಬಂಧ ಇವು ಸಂವಿಧಾನದ ಸಮಾನತೆ ಮತ್ತು ಭ್ರಾತೃತ್ವದ ಆಯಗಳಿಗೆ ವಿರುದ್ಧವಾಗಿದೆ. ಶೂ ಕೊಂಡುಕೊಳ್ಳಲು ಆಗದಿರುವ ಬಡ ವರ್ಗಗಳ ಜನರಿರುವ ಸಮುದಾಯಗಳಲ್ಲೇ ಶೂ ಧರಿಸಿ ನಡೆಯುವುದು ಮೈಲಿಗೆಯಾಗಲಿದೆ ಎಂಬುದು ತಲೆ ತಗ್ಗಿಸುವಂತ ಸಂಗತಿಯಾಗಿದೆ ಎಂದಿದ್ದಾರೆ.
ಇದರೊಂದಿಗೆ ಮೈಸೂರು ಜಿಲ್ಲೆಯ ಕೆಂಚಲಗೂಡು ಗ್ರಾಮದಲ್ಲಿ ದಲಿತರು ದೇವಾಲಯಕ್ಕೆ ನುಗ್ಗಿದರು ಎಂದು ಪ್ರತ್ಯೇಕ ದೇವಾಲಯ ನಿರ್ಮಾಣ ಮಾಡುವ ಮನಸ್ಥಿತಿ ಕಂಡು ನನ್ನ ಮನಸ್ಸು ಘಾಸಿಗೊಂಡಿದೆ
ಅಂಬೇಡ್ಕರ್ ಹೇಳಿದಂತೆ ನಮ್ಮ ಜನರು ಅದರಲ್ಲೂ ಪ್ರಮುಖವಾಗಿ ಯುವಕರು ಮೌಢ್ಯತೆಯಿಂದ ಮೊದಲು ಹೊರಬರಬೇಕಿದೆ. ಉತ್ತಮ ಶಿಕ್ಷಣ ಪಡೆದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಬೆಳೆಯುವತ್ತಾ ಗಮನ ನೀಡಬೇಕು. ಇಲ್ಲವಾದರೆ ಹಲವಾರು ತ್ಯಾಗ ಬಲಿದಾನಗಳಿಂದ ರೂಪುಗೊಂಡ ಸಂವಿಧಾನದ ಆಶಯಗಳು ನಾಶವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಯಾವ ಮನುವಾದಿ ಮಾರ್ಗವನ್ನು ಅಂಬೇಡ್ಕರ್ ಅವರು ಹಿಡಿಯಬಾರದು ಎಂದು ಬಯಸಿದ್ದರೋ ಇಂದು ಅದೇ ಮಾರ್ಗದಲ್ಲಿ ಕೆಲವರು ಹೋಗುತ್ತಿರುವುದು ಶೋಚನೀಯವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ ವಂದೇ ಮಾತರಂ'ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ…
ಮಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ 600ಕ್ಕೆ…
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.…
ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ https:karresults.nic.in ನಲ್ಲಿ…
ಟೆಲ್‌ಅವೀವ್: ಕದನ ವಿರಾಮದ ನಡುವೆಯೂ ಲೆಬನಾನ್‌ನಲ್ಲಿ ಇಸ್ರೇಲ್ ಏರ್‌ಸ್ಟೈಕ್ ನಡೆಸಿ ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸೆಮ್‌ನ ಸೋದರಳಿಯ ಯೂಸುಫ್ ಹರ್ಷಿಯನ್ನು…
ಟೆಹ್ರಾನ್ : ಅಮೆರಿಕ ಮತ್ತು ಇರಾನ್ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್…