ರಾಜ್ಯ

ಶಿವನಸಮುದ್ರದಲ್ಲಿ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ: ಸಚಿವ ಈಶ್ವರ್‌ ಖಂಡ್ರೆ ಸಂತಸ

ಬೆಂಗಳೂರು: ಶಿವನಸಮುದ್ರದ ಕಾಲುವೆಗೆ ಇಳಿದಿದ್ದ ಗಂಡಾನೆಯನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದ್ದು, ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ನೀರು ಕುಡಿಯಲು ಕಾಲುವೆಗೆ ಇಳಿದ ಆನೆ ಕಳೆದ ಮೂರು ದಿನಗಳಿಂದ ಮೇಲೆ ಬರಲಾರದೆ, ಆಹಾರವೂ ಸಿಗದೆ ನಿತ್ರಾಣವಾಗಿತ್ತು. ಅರಣ್ಯ ಸಿಬ್ಬಂದಿ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ಮೇಲೆತ್ತಿರುವುದಾಗಿ ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆನೆಯೊಂದು ಶಿವನಸಮುದ್ರದ ಕಾಲುವೆಯಲ್ಲಿ ಸಿಲುಕಿದೆ ಎಂಬ ಮಾಹಿತಿ ತಮಗೆ ದೊರೆತ ಕೂಡಲೇ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕರೆ ಮಾಡಿ ತತ್ ಕ್ಷಣ ಕ್ರಮ ಕೈಗೊಂಡು ಆನೆ ರಕ್ಷಿಸಲು ಸೂಚಿಸಿದ್ದಾಗಿಯೂ ಸಚಿವರು ಹೇಳಿದರು.

12 ವರ್ಷದ ಆನೆಯನ್ನು 50 ಅಡಿ ಆಳದಿಂದ ಮೇಲೆತ್ತಲಾಗಿದೆ. ನೀರಿನ ಹರಿವು ಹೆಚ್ಚಿದ್ದ ಕಾರಣ ಕಾರ್ಯಚರಣೆಗೆ ಅಡ್ಡಿಯಾಗಿತ್ತು. ರಕ್ಷಿಸಲಾದ ಆನೆ ಯಶಸ್ವಿಯಾಗಿ ಹತ್ತಿರದ ಅರಣ್ಯದತ್ತ ಹೆಜ್ಜೆ ಹಾಕಿದೆ ಎಂದು ತಿಳಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಶಾಲೆಗಳಲ್ಲಿ ದಿನಪತ್ರಿಕೆ ಓದುವುದು ಇನ್ಮುಂದೆ ಕಡ್ಡಾಯ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ…

15 mins ago

ಜನಗಣತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾಲ್ಗೊಳ್ಳುವಿಕೆ ಅತ್ಯಗತ್ಯ: ಪ್ರಧಾನಿ ಮೋದಿ

ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ…

38 mins ago

ಮೈಸೂರು | ಕರಗ ಮಹೋತ್ಸವ ಸಂಪನ್ನ

ಮೈಸೂರು : ನಗರದ ಇಟ್ಟಿಗೆಗೂಡಿನ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್, ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ ೧೦೨ನೇ ಕರಗಮಹೋತ್ಸವ…

1 hour ago

ಮುಂದುವರೆದ ಕಾಡಾನೆ ಹಾವಳಿ : ಒಂಟಿ ಸಲಗ ದಾಳಿಗೆ ಓರ್ವ ಬಲಿ

ರಾಮನಗರ : ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಒಂಟಿ ಸಲಗ ದಾಳಿದ ಓರ್ವ ವ್ಯಕ್ತಿ…

1 hour ago

ಟ್ರಂಪ್‌ ಗುರಿಯಾಗಿಸಿ ಗುಂಡಿನ ದಾಳಿಗೆ ಯತ್ನಿಸಿದ್ದು ಓರ್ವ ಶಿಕ್ಷಕ ! ಯಾರು ಈ ಥಾಮಸ್‌ ಅಲೆನ್‌

ವಾಷಿಂಗ್ಟನ್‌ : ವರದಿಗಾರರ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿ ಅತಿಥಿಯಾಗಿ ಹೋಟೆಲ್‌ ಪ್ರವೇಶ ಮಾಡಿದ್ದ ವಿಚಾರ ಪ್ರಾಥಮಿಕ ತನಿಖೆಯಿಂದ…

2 hours ago

ಹನೂರು | ಬಾರದ ಮಳೆ ; ಮಳೆಗಾಗಿ ಮಕ್ಕಳ ವಿಶೇಷ ಪ್ರಾರ್ಥನೆ

ಹನೂರು : ಜನ ಜಾನುವಾರುಗಳಿಗೂ ಕುಡಿಯುವ ನೀರಿನ ತೊಂದರೆ ಉಂಟಾಗಿರುವ ಪರಿಣಾಮ ಗ್ರಾಮದಲ್ಲಿರುವ ಮಕ್ಕಳೆಲ್ಲರೂ ಸೇರಿ ಮಳೆರಾಯನಿಗೆ ಪ್ರಾರ್ಥನೆ ಮಾಡಿರುವಂತಹ…

2 hours ago