ಮೈಸೂರು ನಗರ

ಟ್ರಂಪ್‌ ಗುರಿಯಾಗಿಸಿ ಗುಂಡಿನ ದಾಳಿಗೆ ಯತ್ನಿಸಿದ್ದು ಓರ್ವ ಶಿಕ್ಷಕ ! ಯಾರು ಈ ಥಾಮಸ್‌ ಅಲೆನ್‌

ವಾಷಿಂಗ್ಟನ್‌ : ವರದಿಗಾರರ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿ ಅತಿಥಿಯಾಗಿ ಹೋಟೆಲ್‌ ಪ್ರವೇಶ ಮಾಡಿದ್ದ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಅಮೆರಿಕದ ಶ್ವೇತಭವನದ ಸಮೀಪ ಹಿಲ್ಟನ್ ಹೋಟೆಲ್‌ನಲ್ಲಿ ಆಯೋಜನೆಗೊಂಡಿದ್ದ ಡಿನ್ನರ್‌ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಭದ್ರತಾ ಪಡೆಗಳು ಬಂಧಿಸಿ ಈಗ ವಿಚಾರಣೆ ನಡೆಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ ಮೂಲದ ಕೋಲ್ ಥಾಮಸ್ ಅಲೆನ್(31) ಬಂಧಿತ ಆರೋಪಿ. ವೃತ್ತಿಯಲ್ಲಿ ಈತ ಶಿಕ್ಷಕ ಮತ್ತು ವಿಡಿಯೋ ಗೇಮ್ ಡೆವಲಪರ್ ಆಗಿದ್ದಾನೆ. 2017 ರಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಈತ 2025 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ-ಡೊಮಿಂಗ್ಯೂಜ್ ಹಿಲ್ಸ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. 2014 ರಲ್ಲಿ ನಾಸಾದಲ್ಲೂ ಇಂಟರ್ನ್‌ಶಿಪ್ ಮಾಡಿದ್ದನು. ‌ಥಾಮಸ್ ಅಲೆನ್ ಡಿಸೆಂಬರ್ 2024 ರಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ ‘ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಯನ್ನೂ ಪಡೆದಿದ್ದ ಎಂದು ವರದಿಯಾಗಿದೆ.‌

ಹೋಟೆಲ್‌ಗೆ ನುಗ್ಗಿದ್ದು ಹೇಗೆ?
ಡಿನ್ನರ್‌ ಆಯೋಜನೆಗೊಳ್ಳುವ ಮೊದಲೇ ಕೋಲ್ ಥಾಮಸ್ ಅಲೆನ್ ರೂಮ್‌ ಬುಕ್‌ ಮಾಡಿ ಅತಿಥಿಯಾಗಿ ಪ್ರವೇಶ ಮಾಡಿದ್ದ. ಸಾಮಾನ್ಯವಾಗಿ ಅತಿಥಿಗಳು ಪ್ರವೇಶ ಮಾಡುವಾಗ ಇಲ್ಲಿ ಬಿಗಿಯಾದ ಭದ್ರತಾ ತಪಾಸಣೆಗೆ ಒಳಪಡಿಸಿರಲಿಲ್ಲ. ಇದರಿಂದಾಗಿ ಆತ ಮೆಷಿನ್ ಗನ್, ಹ್ಯಾಂಡ್ ಗನ್ ಮತ್ತು ಚಾಕುಗಳನ್ನು ಸುಲಭವಾಗಿ ಒಳಗೆ ತಂದಿದ್ದ. ಅಷ್ಟೇ ಅಲ್ಲದೇ ಹೋಟೆಲಿನಲ್ಲಿ ಅತಿಥಿಗಳಿಗೆ ಲಾಬಿ ಮತ್ತು ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶಿಸಲು ಯಾವುದೇ ಕಠಿಣ ತಪಾಸಣೆ ಇರಲಿಲ್ಲ.‌

ಹೋಟೆಲ್‌ನ ಸಾಮಾನ್ಯ ಪ್ರದೇಶದಿಂದ ಬಾಲ್‌ರೂಮ್‌ ಗೆ (ಹೋಟೆಲ್‌ ಅಥವಾ ದೊಡ್ಡ ಕಟ್ಟಡಗಳಲ್ಲಿರುವ ಒಂದು ವಿಶಾಲವಾದ ಸಭಾಂಗಣ ಅಥವಾ ಹಾಲ್) ಹೋಗುವ ದಾರಿಯಲ್ಲಿ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ನಿರ್ಮಿಸಿದ್ದ ಮ್ಯಾಗ್ನೆಟೋಮೀಟರ್ ತಪಾಸಣಾ ಕೇಂದ್ರದ ಬಳಿಗೆ ಏಕಾಏಕಿ ನುಗ್ಗಿದ್ದ.

ಈ ವೇಳೆ ಭದ್ರತಾ ತಪಾಸಣಾ ಕೇಂದ್ರದ ಬಳಿ ಏಳೆಂಟು ಬಾರಿ ಗುಂಡು ಹಾರಿಸಿದರೂ, ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ತಕ್ಷಣ ಆತನನ್ನು ತಡೆದಿದ್ದಾರೆ. ಇದರಿಂದಾಗಿ ಆತ ಗಣ್ಯರು ಕುಳಿತಿದ್ದ ಬಾಲ್‌ರೂಮ್‌ನ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಏಜೆಂಟ್‌ಗಳು ಕೋಲ್ ಅಲೆನ್ ಎದುರಿಸಿ, ಆತ ಮತ್ತಷ್ಟು ಗುಂಡು ಹಾರಿಸದಂತೆ ಕೆಳಕ್ಕೆ ತಳ್ಳಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸಂಘರ್ಷದಲ್ಲಿ ಒಬ್ಬ ಏಜೆಂಟ್‌ಗೆ ಗುಂಡು ತಗುಲಿತಾದರೂ ಬುಲೆಟ್ ಪ್ರೂಫ್ ಜಾಕೆಟ್ ಅವರನ್ನು ರಕ್ಷಿಸಿದೆ. ಕೋಲ್ ಅಲೆನ್ ಬಳಿ ಶಾರ್ಟ್‌ಗನ್, ಹ್ಯಾಂಡ್‌ಗನ್ ಹೊರತಾಗಿ ಒಂದಕ್ಕಿಂತ ಹೆಚ್ಚು ಚಾಕುಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಕೋರನನ್ನು ತಡೆಯುತ್ತಿದ್ದಾಗಲೇ ಮತ್ತೊಂದು ತಂಡ ಅಧ್ಯಕ್ಷ ಟ್ರಂಪ್ ಅವರನ್ನು ಸುರಕ್ಷಿತವಾಗಿ ಸಭಾಂಗಣದಿಂದ ಹೊರಗೆ ಕರೆತಂದು ರಕ್ಷಣೆ ಮಾಡಿ ಶ್ವೇತ ಭವನಕ್ಕೆ ಕರೆ ತಂದಿದೆ.

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

12 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

15 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

15 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

16 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

16 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

16 hours ago