ರಾಜ್ಯ

ಕೆಎಸ್‌ಆರ್‌ಟಿಸಿಯ 20 ‘ನಮ್ಮ ಕಾರ್ಗೋ’ ಟ್ರಕ್‌ಗಳಿಗೆ ಸಾರಿಗೆ ಸಚಿವ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 20 ನಮ್ಮ ಕಾರ್ಗೋ ಟ್ರಕ್‌ಗಳಿಗೆ ಇಂದು(ಶನಿವಾರ) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಮುಂದಿನ ಕೆಲವು ದಿನಗಳಲ್ಲಿ 100 ಟ್ರಕ್‌ಗಳು ಸೇರ್ಪಡೆಗೊಳ್ಳಲಿವೆ. ಒಂದು ವರ್ಷದೊಳಗೆ 500 ಟ್ರಕ್‌ಗಳಿಗೆ ತನ್ನ ಕಾರ್ಗೋ ಫ್ಲೀಟ್ ಅನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಇನ್ನು ಈ ಹೊಸ ಟ್ರಕ್‌ಗಳನ್ನು ಟಾಟಾದ ಪುಣೆ ತಯಾರಿಕ ಘಟಕದಲ್ಲಿ ತಯಾರಿಸಲಾಗಿದ್ದು, ಇದನ್ನು ರಾಜ್ಯದೊಳಗೆ ಸರಕು ಸಾಗಿಸಲು ಬಳಸಲಾಗುತ್ತದೆ. ಈಗ 20 ಟ್ರಕ್​ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರ ಪ್ರತಿಕ್ರಿಯೆಯನ್ನು ನೋಡಿದ ನಂತರ ಒಂದು ತಿಂಗಳಲ್ಲಿ 100 ಮತ್ತು ಒಂದು ವರ್ಷದಲ್ಲಿ 500 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.

ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣವನ್ನು ಟ್ರಕ್‌ಗಳ ಕಾರ್ಯಾಚರಣೆ ಮತ್ತು ಡಿಪೋವಾಗಿ ಬಳಸಿಕೊಳ್ಳಲಾಗುವುದು. ಉಳಿದ ಜಾಗವನ್ನು ವಾಣಿಜ್ಯ ಆದಾಯ ಗಳಿಸಲು ಸರ್ಕಾರಿ ಕಂಪೆನಿಗಳಿಗೆ ನೀಡಲಾಗುವುದು. ಇದೀಗ ಸಾರಿಗೆ ಸಂಸ್ಥೆ ಹೆಚ್ಚು ಭಾರವಾದ ಸರಕುಗಳನ್ನು ಸಾಗಿಸಲು ಟ್ರಕ್‌ಗಳನ್ನು ಬಳಸಲಾಗುತ್ತಿದ್ದು, ಈ ಆರು ಚಕ್ರದ ಟ್ರಕ್‌ಗಳಲ್ಲಿ 6ಟನ್‌ ಸರಕನ್ನು ಸಾಗಿಸಬಹುದಾಗಿದೆ.

ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಕಾರ, ಈ ಟ್ರಕ್‌ಗಳು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತದೆ. ಉತ್ತಮ ಪ್ರತಿಕ್ರಿಯೆ ಬಂದರೆ ಇನ್ನಷ್ಟು ಜಿಲ್ಲೆಗಳಿಂದ ಸಂಚರಿಸಲಿದೆ. ಈ ಟ್ರಕ್‌ಗಳು ಆರಂಭದಲ್ಲಿ ಸಾರಿಗೆ ಔಷಧೀಯ, ಜವಳಿ, ಆಹಾರ ಮತ್ತು ಆತಿಥ್ಯ ಉದ್ಯಮಗಳಿಂದ ಸರಕುಗಳನ್ನು ಸಾಗಿಸಲು ಯೋಜನೆ ರೂಪಿಸಲಾಗಿದೆ.

andolanait

Recent Posts

ಭಯೋತ್ಪಾದಕ ದಾಳಿ | ಕೇಂದ್ರದ ನಿಲುವಿಗೆ ಬದ್ಧ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ದೇಶಕ್ಕೆ ಮಾರಕವಾಗಿರುವ ಉಗ್ರರನ್ನು ಮಟ್ಟಹಾಕಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ…

21 mins ago

ಸಾರ್ವಜನಿಕ ಅಹವಾಲು ಆಲಿಸಿದ ಸಿಎಂ

ಮೈಸೂರು: ಕಾಲು ನೋವಿನಿಂದ ವಿಶ್ರಾಂತಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ತಿಂಗಳ ಬಳಿಕ ಮೈಸೂರಿಗೆ ಆಗಮಿಸಿದ್ದರಿಂದ ನೂರಾರು ಸಾರ್ವಜನಿಕರ ಆಹವಾಲು…

47 mins ago

ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆಗೆ ಗಣ್ಯರು ಭಾಗಿ; ಭಿಗಿ ಭದ್ರತೆ

ವ್ಯಾಟಿಕನ್‌ : ಕಳೆದ ಸೋಮವಾರ ನಿಧನರಾದ ಪೋಪ್‌ ಫ್ರಾನ್ಸಿಸ್‌ ಅವರ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ವ್ಯಾಟಿಕನ್‌ ಸಿಟಿಯ ಬೆಸಿಲಕಾದಾ ಸಾಂಟಾ ಮಾರಿಯ…

2 hours ago

ನಾವು ಯುದ್ಧದ ಪರ ಇಲ್ಲ, ಶಾಂತಿಯ ಪರ : ಸಿಎಂ

ಮೈಸೂರು: ನಾನು ಯುದ್ದದ ಪರ ಅಲ್ಲ, ಶಾಂತಿಯ ಪರ. ಯುದ್ದದ ಬದಲು ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮ…

3 hours ago

ರಾಜ್ಯದಲ್ಲೂ ಪಾಕ್‌ ಪ್ರಜೆಗಳ ತಪಾಸಣೆ : ಸಿಎಂ ಸಿದ್ದರಾಮಯ್ಯ

ಮೈಸೂರು : ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು…

3 hours ago

ಸ್ವಾತಂತ್ರ್ಯ ಹೋರಾಟಕ್ಕೆ ಬರದೆ ಸಂಘ ಪರಿವಾರ, ದೇಶಭಕ್ತಿ ಬಗ್ಗೆ ಮತಾಡ್ತಾರೆ ; ಸಿ.ಎಂ ವ್ಯಂಗ್ಯ

ಮೈಸೂರು : ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ಸಾವರ್ಕರ್ ಮತ್ತು…

3 hours ago