ರಾಜ್ಯ

ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ: ಬಸ್‌ಗಳಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್‌ ದುರಂತದ ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಬಸ್‌ಗಳಲ್ಲಿ ಕೆಲ ನಿಯಮಗಳನ್ನು ಕಡ್ಡಾಯಗೊಳಿಸಲು ಸೂಚನೆ ನೀಡಿದ್ದಾರೆ.

ಬಸ್‌ಗಳಲ್ಲಿ ಬೆಂಕಿ ಸ್ಪರ್ಶಕ್ಕೆ ಸರಳವಾಗಿ ಉರಿಯುವ ವಸ್ತುಗಳ ಸಾಗಣಿಕೆಗೆ ಬ್ರೇಕ್‌ ಹಾಕಲಾಗುತ್ತದೆ. ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಎಲ್ಲಾ ಎಸಿ ಬಸ್‌ಗಳಲ್ಲಿ ಇನ್ನು ಮುಂದೆ ಸುತ್ತಿಗೆ ಕಡ್ಡಾಯಗೊಳಿಸಲಾಗಿದೆ. ಲಗೇಜ್‌ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ಇಲ್ಲ ಎಂದು ಸೂಚನೆ ನೀಡಿದ್ದಾರೆ.

ಜೊತೆಗೆ ಬಸ್ಸುಗಳಲ್ಲಿ ಸುರಕ್ಷತಾ ಆಡಿಟ್‌ ಪರಿಶೀಲನೆಗೆ ತಂಡಗಳನ್ನು ರಚಿಸಿ, ಬಸ್‌ಗಳಲ್ಲಿ ಯಾವುದೇ ನೂನ್ಯತೆ ಕಂಡುಬಂದರೂ ಕಠಿಣ ಕ್ರಮದ ಆದೇಶಕ್ಕೆ ಸೂಚನೆ ನೀಡಲಾಗಿದೆ.

ಇದರ ನಡುವೆ ನಿನ್ನೆ ಹಾಗೂ ಇಂದು ರಾಜ್ಯ ಸಾರಿಗೆ ಅಧಿಕಾರಿಗಳು ಹಾಗೂ ಟ್ರಾಫಿಕ್‌ ಪೊಲೀಸರು ಬೆಂಗಳೂರಿನಿಂದ ಹೋಗುವಂತಹ ಎಲ್ಲಾ ಬಸ್ಸುಗಳನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಖಾಸಗಿ ಎಸಿ ಬಸ್‌ಗಳ ಪರಿಶೀಲನೆ ನಡೆಸಿ, ಡ್ರೈವರ್‌ ಲೈಸೆನ್ಸ್‌, ಬಸ್‌ಗಳ ದಾಖಲೆ ಚೆಕ್‌ ಮಾಡುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕಣಿವೆಗೆ ಉರುಳಿದ ಸೇನಾ ವಾಹನ : 10 ಸೈನಿಕರ ಸಾವು

11 ಯೋಧರಿಗೆ ಗಂಭೀರ ಗಾಯ ಭದೇರ್ವಾ : ದೋಡಾ ಜಿಲ್ಲೆಯ ಥನಾಲಾದ ಮೇಲ್ಭಾಗದ ಪ್ರದೇಶದಲ್ಲಿನ ಭದೇರ್ವಾ-ಚಂಬಾ ರಸ್ತೆಯಲ್ಲಿ ಗುರುವಾರ ಸೇನಾ…

12 mins ago

‘ಬಿಗ್ ಬಾಸ್’ ಗಿಲ್ಲಿಗೆ ಸಿಎಂ ಅಭಿನಂದನೆ!

ಬೆಂಗಳೂರು : ಬಿಗ್ ಬಾಸ್ ಮುಗಿದ ಮೇಲೂ ಗಿಲ್ಲಿ ನಟನ ಕ್ರೇಜ್ ಕಮ್ಮಿಯಾಗಿಲ್ಲ. ಹೋದ ಕಡೆ, ಬಂದಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದು,…

18 mins ago

ಬೆಳ್ಳಿ ಬರೋಬ್ಬರಿ 20 ಸಾವಿರ ರೂ.ಇಳಿಕೆ : ಚಿನ್ನದ ದರದಲ್ಲೂ ದಿಢೀರ್ 4 ಸಾವಿರ ರೂ ಕುಸಿತ

ಹೈದರಾಬಾದ್ : ಕಳೆದ ಕೆಲವು ದಿನಗಳಿಂದ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಇದ್ದಕ್ಕಿದ್ದಂತೆ…

29 mins ago

ಟಿವಿಕೆ ವಿಜಯ್ ಪಕ್ಷಕ್ಕೆ ಸೀಟಿ ಗುರುತು ನೀಡಿದ ಆಯೋಗ

ಚೆನ್ನೈ : ನಟ, ರಾಜಕಾರಣಿ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಚುನಾವಣಾ ಆಯೋಗವು ಗುರುವಾರ ಚಿಹ್ನೆ…

1 hour ago

ಮ.ಬೆಟ್ಟ | ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ ದೃಶ್ಯ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳು ಬೆಟ್ಟದಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

1 hour ago

MGNREGA ಕಾಯ್ದೆಯನ್ನು ಮರುಸ್ಥಾಪಿಸುವವರೆಗೆ ನಮ್ಮ ಹೋರಾಟ ಇರಲಿದೆ : ಸಿಎಂ

ಬೆಂಗಳೂರು : ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ…

1 hour ago