ಹೈದರಾಬಾದ್ : ಕಳೆದ ಕೆಲವು ದಿನಗಳಿಂದ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಇದ್ದಕ್ಕಿದ್ದಂತೆ ಗಮನಾರ್ಹ ಕುಸಿತ ಕಂಡವು. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ವಹಿವಾಟು ಪ್ರಾರಂಭವಾದ ತಕ್ಷಣ ಎರಡೂ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.
ಇದು ಮಾರುಕಟ್ಟೆಯಲ್ಲಿ ಹೂಡಿಕೆದಾರರನ್ನು ಅಚ್ಚರಿಗೊಳಿಸಿತು. ಬೆಳ್ಳಿ ಪ್ರತಿ ಕೆಜಿಗೆ ಸುಮಾರು 20,000 ರೂ. ಕಡಿಮೆಯಾದರೆ, ಚಿನ್ನದ ಬೆಲೆ ಕೂಡ 10 ಗ್ರಾಂಗೆ 4,000 ರೂ.ಗಿಂತ ಹೆಚ್ಚು ಇಳಿಕೆ ದಾಖಲಿಸಿದೆ. ಬೆಳ್ಳಿ ಆರಂಭಿಕ ಹಂತದಲ್ಲಿ ತೀವ್ರವಾಗಿ ಕುಸಿತ ಕಂಡಿತು. ಬೆಳ್ಳಿ ಬುಧವಾರ ಪ್ರತಿ ಕೆಜಿಗೆ 3,25,602 ರೂ.ಗೆ ಮುಕ್ತಾಯಗೊಂಡಿತ್ತು. ಗುರುವಾರ ಬೆಳಗ್ಗೆ ಮಾರುಕಟ್ಟೆ ಆರಂಭವಾದ ತಕ್ಷಣ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 3,05,753 ರೂ.ಗೆ ಇಳಿಕೆ ದಾಖಲಿಸಿತು. ಒಂದೇ ಬಾರಿಗೆ ಪ್ರತಿ ಕೆಜಿಗೆ ಸುಮಾರು 19,849 ರಷ್ಟು ಕುಸಿತ ಕಂಡಿತು. ಇತ್ತೀಚಿನ ದಿನಗಳಲ್ಲಿ ತೀವ್ರ ಏರಿಕೆಯ ನಂತರ ಆದ ಅತಿ ದೊಡ್ಡ ಕುಸಿತವಿದು.
ಚಿನ್ನದ ಬೆಲೆಯಲ್ಲೂ ಭಾರಿ ಕುಸಿತ
ಬೆಳ್ಳಿಯ ಜೊತೆಗೆ ಚಿನ್ನದ ಬೆಲೆಗಳು ಸಹ ತೀವ್ರ ಕುಸಿತ ಕಂಡಿವೆ. ಕಳೆದ ಮೂರು ವಹಿವಾಟಿನಲ್ಲಿ ಚಿನ್ನವು ನಿರಂತರ ಏರಿಕೆ ದಾಖಲಿಸಿತ್ತು. ಈ ಮೂಲಕ ಬಂಗಾರ ಜೀವಿತಾವಽಯ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು. ಬುಧವಾರ ಫೆಬ್ರವರಿ 5 ರ ಫ್ಯೂಚರ್ ವಹಿವಾಟಿನಲ್ಲಿ 10 ಗ್ರಾಂಗೆ 1,52,862ಕ್ಕೆ ಮುಕ್ತಾಯಗೊಂಡಿತ್ತು. ಆದಾಗ್ಯೂ ಗುರುವಾರ ಇದು 10 ಗ್ರಾಂಗೆ 1,48,777 ಕ್ಕೆ ಇಳಿದಿದೆ. ಈ ಮೂಲಕ ಬಂಗಾರ ಇಂದಿನ ವಹಿವಾಟಿನಲ್ಲಿ ಸುಮಾರು 4,085ರಷ್ಟು ಇಳಿಕೆ ಕಂಡು ಮಧ್ಯಮ ವರ್ಗ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…
ಶಿವಮೊಗ್ಗ: ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…
ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…