ಮೈಸೂರು : ಜಲಸಂಪನ್ಮೂಲ ಇಲಾಖೆಯ 42 ಮಂದಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಎಇಇ)ಗಳನ್ನು ವರ್ಗಾವಣೆ ಮಾಡಲಾಗಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಕಾವೇರಿ ನೀರಾವರಿ ನಿಗಮ ನಿಯಮಿತ ಕಿಬ್ಬನಹಳ್ಳಿ ಉಪವಿಭಾಗದ ಎಇಇ ಟಿ.ಎಸ್.ಹರೀಶ್ ಅವರನ್ನು ಮಂಡ್ಯದ ಬೆಳ್ಳೂರು ಕಾವೇರಿ ನೀರಾವರಿ ನಿಗಮ ನಿಯಮಿತ(ಕಾನೀನಿನಿ) ಹೇಮಾವತಿ ನಾಲಾ ಉಪ ವಿಭಾಗದ ಹುದ್ದೆಗೆ, ಹೇಮಾವತಿ ನಾಲಾ ಉಪವಿಭಾಗದ ಎಇಇ ಎನ್.ಎನ್.ರಾಜೇಗೌಡ ಅವರನ್ನು ಮಂಡ್ಯದ ನಾಗಮಂಗಲ ತಾಲ್ಲೂಕು ಬೆಳ್ಳೂರು ಕ್ರಾಸ್ ಹೇಮಾವತಿ ನಾಲಾ ಉಪವಿಭಾಗದ ಹುದ್ದೆಗೆ, ಹಾಸನ ಜಿಲ್ಲೆ ಸಕಲೇಶಪುರದ ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನಾ ಉಪವಿಭಾಗದ ಎಇಇ ಎಚ್.ಎಂ. ಶಶಿಕುಮಾರ್ ಅವರನ್ನು ಹಾಸನದ ಗೊರೂರು ಹೇಮಾವತಿ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಕಚೇರಿಯ ತಾಂತ್ರಿಕ ಸಹಾಯಕ ಹುದ್ದೆಗೆ ವರ್ಗಾಯಿಸಲಾಗಿದೆ.
ಸ್ಥಳ ನಿರೀಕ್ಷೆಯಲ್ಲಿದ್ದ ಎಇಇ ವೈ.ಸಿ. ನವೀನ್‌ಕುಮಾರ್ ಅವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತ ವಿಸಿಸಿ ಉಪವಿಭಾಗದ ಹುದ್ದೆಗೆ, ಸ್ಥಳ ನಿರೀಕ್ಷೆಯಲ್ಲಿದ್ದ ಎಇಇ ಕೆ. ಯದುಕೃಷ್ಣ ಅವರನ್ನು ನಾಗಮಂಗಲದ ಕಾನೀನಿನಿ ಎಚ್‌ಎಲ್‌ಬಿಸಿ ಉಪವಿಭಾಗದ ಹುದ್ದೆಗೆ, ಸ್ಥಳ ನಿರೀಕ್ಷೆಯಲ್ಲಿದ್ದ ಡಿ.ಎಚ್. ಅನಿಲ್‌ಕುಮಾರ್ ಅವರನ್ನು ಮೈಸೂರು ಅಧಿಕ್ಷಕ ಇಂಜಿನಿಯರ್ ಕಚೇರಿಯ ನೀರಾವರಿ ತನಿಖಾ ವೃತ್ತದ ತಾಂತ್ರಿಕ ಸಹಾಯಕ ಹುದ್ದೆಗೆ, ಸ್ಥಳ ನಿರೀಕ್ಷೆಯಲ್ಲಿದ್ದ ಕೆ.ಎಸ್.ಮಹೇಶ್ ಅವರನ್ನು ಚಾಮರಾಜನಗರದ ಅಟ್ಟುಗುಳಿಪುರದ ಕಾವೇರಿ ನೀರಾವರಿ ನಿಗಮ ನಿಯಮಿತದ ಸಿಆರ್‌ಆರ್ ಉಪ ವಿಭಾಗದ ಹುದ್ದೆಗೆ ವರ್ಗಾಯಿಸಲಾಗಿದ್ದು, ಇವರು ಸೇರಿದಂತೆ 42 ಮಂದಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಸಿದ್ದೇಗೌಡ ಕೊಡಿಯಾಲ ಸಮಯಕ್ಕೆ ಬಾರದ ಅಧಿಕಾರಿ-ಸಿಬ್ಬಂದಿ:ಜನತೆ ಹೈರಾಣ ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ನಾಡಕಚೇರಿಯು ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದೆ. ಈ ನಾಡಕಚೇರಿಯಲ್ಲಿ…
ಲಕ್ಷ್ಮೀಕಾಂತ್ ಕೋಮಾರಪ್ಪ ಫಸಲು ನಾಶ, ಕಂಗಾಲಾದ ಕೃಷಿಕರು; ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸೋಮವಾರಪೇಟೆ: ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿ…
ಎಚ್.ಎಸ್.ದಿನೇಶ್ ಕುಮಾರ್ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ನಿಲ್ಲದ ದಂಧೆ; ಪ್ರತಿ ಬಾರಿಯೂ ದಂಧೆಗೆ ಹೊಸ ದಾರಿ ಹುಡುಕುವ ದುರುಳರು ಮೈಸೂರು:…
ಕೊಹ್ಲಿ-ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್, ಎಸ್‌ಆರ್‌ಎಚ್ ವಿರುದ್ಧ ಭರ್ಜರಿ ಜಯ ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಸನ್…
ಮಂಡ್ಯ: ಇತಿಹಾಸ ಪ್ರಸಿದ್ಧ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು ಶನಿವಾರ ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮೇಲು ಕೋಟೆಯ…