ಬೆಂಗಳೂರು : ಕುಣಿಯಲಾರದವರು ನೆಲ ಡೊಂಕು ಅಂತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಹಿನ್ನೆಲೆ ನಗರದ ಟೌನ್ ಹಾಲ್ ಬಳಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಅವರ ಸರ್ಕಾರ ಉಳಿಸಿಕೊಳ್ಳಲು ಆಗಿಲ್ಲ ಅದಕ್ಕೆ ಏನೇನೋ ಹೇಳ್ತಾರೆ. ಅವರು ಸಿಎಂ ಆಗಿದ್ದಾಗ ಎಲ್ಲಿದ್ರು ಎಂದು ಎಲ್ಲರಿಗೂ ಗೊತ್ತಿದೆ. ಅವರು ವೆಸ್ಟ್ ಎಂಡ್ ಹೋಟೆಲ್ ನಲ್ಲೇ ಇದ್ರಲ್ಲ, ಯಾಕೆ ಅಲ್ಲಿದ್ರು ಎಂದು ಪ್ರಶ್ನಿಸಿದರು.
ಈ ಹಿಂದೆ ಕಾವೇರಿ ನಿವಾಸ ಬಿಟ್ಟು ಕೊಡದ ವಿಚಾರವಾಗಿ ಮಾತನಾಡಿದ ಸಿಎಂ, ಬಿಟ್ಟು ಕೊಡಿ ಎಂದು ಕೇಳಿದ್ರೆ ಕೊಡ್ತಿದ್ದೆ. ಯಡಿಯೂರಪ್ಪ ತುಂಬಾ ಸಮಯ ಅಲ್ಲೇ ಇದ್ರಲ್ಲ, ಅದಕ್ಕೆ ಏನು ಹೇಳ್ತಾರೆ? ಒಂದು ವರ್ಷ 10 ತಿಂಗಳ ಬದಲು 2 ವರ್ಷ ಇದ್ರಲ್ಲ ಅದರ ಬಗ್ಗೆ ಏನು ಹೇಳ್ತಾರೆ? ಜಾರ್ಜ್ ಗೆ ಆ ಮನೆ ಅಲರ್ಟ್ ಆಗಿತ್ತು, ಜಾರ್ಜ್ ನನಗೆ ಕೊಟ್ಟಿದ್ದರು. ಕಾವೇರಿ ನಿವಾಸ ಅದು ಡೆಲಿಗೇಟೆಡ್ ಕ್ವಾಟರ್ಸ್ ಅಲ್ಲ. ಅಲ್ಲಿ ಯಾರು ಬೇಕಾದರು ಇರಬಹುದು ಎಂದರು.
ಪುನೀತ್ ಮಡಿಕೇರಿ ಹೊಸ ವರ್ಷಾಚರಣೆಗೆ ಕೊಡಗಿನತ್ತ ಮುಖ ಮಾಡಿದ ಜನರು; ಜಿಲ್ಲೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ ಮಡಿಕೇರಿ: ಹೊಸ ವರ್ಷವನ್ನು…
೨೦೨೫ರ ಅವಧಿಯಲ್ಲಿ ರಾಜಕೀಯವಾಗಿ ಗಂಭೀರ ವಿಪ್ಲವಗಳನ್ನು ಕಾಣದೆ ಹೋದರೂ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಬದಲಾವಣೆಗಳು ನಡೆದಿರುವುದು…
ಶಾಲೆಗೆ ಬೀಗ ಹಾಕಿರುವುದನ್ನು ಫೋಟೊ ತೆಗೆದು ಸಾಬೀತುಪಡಿಸಿದ ಕರವೇ; ಶಿಕ್ಷಕರ ವಿರುದ್ಧ ಆಕ್ರೋಶ ಹನೂರು: ಹನೂರು ಶೈಕ್ಷಣಿಕ ವಲಯದ ಕೆಲವೆಡೆ…
ಚಾಮರಾಜನಗರ: ಹೊಸ ವರ್ಷ-೨೦೨೬ರ ಸ್ವಾಗತಕ್ಕೆ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ನಾನಾ ಕಡೆಯಿಂದ ಧಾವಿಸುವ ಪ್ರವಾಸಿಗರು ಅದಾಗಲೇ ವಸತಿ…
ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರು: ನಗರದಲ್ಲಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದೆ. ನಗರ ಸಾರಿಗೆಗೆ ಪ್ರಸಕ್ತ ವರ್ಷ ೯೬…