ರಾಜ್ಯ

ಪುಲ್ವಾಮದಲ್ಲಿ 40 ಸೈನಿಕರ ಸಾವಿನ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲ : ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು : ಪಹಲ್ಗಾಮ್ ದಾಳಿಯ ನಂತರದ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಅಷ್ಟು ಬಹಿರಂಗವಾಗಿ ಭಯೋತ್ಪಾದಕ ದಾಳಿಯಾಗಲು ಅವಕಾಶ ಮಾಡಿಕೊಟ್ಟಿದ್ದೇಕೆ ಎಂಬ ಬಗ್ಗೆ ಈವರೆಗೂ ಉತ್ತರ ದೊರೆತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮದಲ್ಲಿ 40 ಸೈನಿಕರ ಸಾವಿನ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲ. ಆರೋಪಿಗಳ್ಯಾರು ಎಂಬುದನ್ನು ತಿಳಿಸಲಾಗಿಲ್ಲ. ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯ ಬಗ್ಗೆಯೂ ನಿಖರತೆ ಇಲ್ಲವಾಗಿದೆ. ಯಾವುದಕ್ಕೂ ಕೇಂದ್ರ ಸರ್ಕಾರ ಉತ್ತರ ನೀಡುತ್ತಿಲ್ಲ. ಎಷ್ಟು ವಿಮಾನಗಳು ನಾಶವಾದವು ಎಂಬುದು ಈವರೆಗೂ ಅಸ್ಪಷ್ಟತೆಯಿಂದಲೇ ಕೂಡಿದೆ ಎಂದರು.

ಕದನ ವಿರಾಮಕ್ಕೆ ತಾವು ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಪಾಕಿಸ್ತಾನ ಭಾರತದ 5 ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಇದ್ಯಾವುದನ್ನೂ ಕೇಂದ್ರ‌ ಸರ್ಕಾರ ನಡೆದಿದೆ ಅಥವಾ ನಡೆದಿಲ್ಲ ಎಂದು ಖಚಿತವಾಗಿ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಾಂಘಿಕ ಪ್ರದರ್ಶನದಿಂದ ಭಾರತದ ಮುಡಿಗೆ ಟಿ-೨೦ ವಿಶ್ವಕಪ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲೆಂಡ್…

2 hours ago

ಓದುಗರ ಪತ್ರ: ಅನುಭವಿ ಮೌಲ್ಯಮಾಪಕರಿಗೆ ಆದ್ಯತೆ ನೀಡಿ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ವರ್ಷವಿಡೀ ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದರೂ ಪ್ರತಿ ವರ್ಷವೂ…

2 hours ago

ಓದುಗರ ಪತ್ರ: ಆಟೋ ಚಾಲಕರಿಂದ ಅರವಟ್ಟಿಗೆ ಸೌಲಭ್ಯ

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಹೆಚ್ಚಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ರಾಮಸ್ವಾಮಿ…

2 hours ago

ಓದುಗರ ಪತ್ರ: ಯುದ್ಧ: ಎಂಎಲ್‌ಸಿಗೆ ಸ್ಪಂದಿಸದ ಕೇಂದ್ರ ಸರ್ಕಾರ?

ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಭಾರತದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಕಾರ್ಯನಿಮಿತ್ತ…

2 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಸ್ಲಮ್ ವಾಸಿಗಳಿಗೆ ಬದುಕು ಕಟ್ಟಿ ಕೊಟ್ಟ ಆರ್ಕಿಟೆಕ್ಟ್‌

ಕೊಳೆಗೇರಿಗಳ ೨೭,೦೦೦ ಮನೆಗಳಿಗೆ ಶೌಚಾಲಯ ಸೌಲಭ್ಯ ಪೂನಾದ ಇಂದಿರಾ ವಸಾಹತ್ ಎಂಬ ಪ್ರದೇಶದ ಒಂದು ಸ್ಲಮ್ಮಿನಲ್ಲಿ ವಾಸಿಸುವ ಲತಾ ರತನ್…

2 hours ago

ಮರಿಗಳೊಂದಿಗೆ ಹುಲಿ ಕಂಡು ಪುಳಕಿತರಾದ ಪ್ರವಾಸಿಗರು

ಮಹೇಂದ್ರ ಹಸಗೂಲಿ ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ  ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು…

3 hours ago