ರಾಜ್ಯ

ರಾಜ್ಯದ ಅತಿದೊಡ್ಡ ಸೈಬರ್‌ ವಂಚನೆ ; ಮಹಿಳಾ ಟಿಕ್ಕಿಯ 31ಕೋಟಿ ದೋಖಾ..

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ನಡೆದಿದೆ.

ಇಂದಿರಾನಗರ ನಿವಾಸಿಯೊಬ್ಬರಾದ ಐಟಿ ಕ್ಷೇತ್ರದ ಹಿರಿಯ ಉದ್ಯೋಗಿ ಮಹಿಳೆಗೆ ಸೈಬರ್ ವಂಚಕರು ಬರೋಬ್ಬರಿ 31 ಕೋಟಿ ರೂಪಾಯಿ ವಂಚಿಸಿದ್ದಾರೆ. 180ಕ್ಕೂ ಹೆಚ್ಚು ಬ್ಯಾಂಕ್ ಟ್ರಾನ್ಸ್‌ಆಕ್ಷನ್‌ಗಳ ಮೂಲಕ ನಡೆದ ಈ ಲೂಟಿ ಬಗ್ಗೆ ಪೂರ್ವ ವಿಭಾಗ ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (ಸೆನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಬರ್​ ಖದೀಮರು ಬರೋಬ್ಬರಿ ₹31ಕೋಟಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸೈಬರ್ ಮೋಸದ ಹೊಸ ಆಯಾಮವನ್ನು ತೋರಿಸುತ್ತದೆ.

ದೂರುದಾರ ಮಹಿಳೆ ಐಟಿ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ಅವರಿಗೆ ದೊಡ್ಡ ಮೊತ್ತದ ಉಳಿತಾಯ ಮತ್ತು ನಿಶ್ಚಿತ ಠೇವಣಿ ಇತ್ತು. 2024 ಸೆಪ್ಟೆಂಬರ್ 15ರಂದು ಅನಾಮಿಕ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ ತಾನು ಕೊರಿಯರ್ ಸರ್ವಿಸ್‌ನಿಂದ ಕರೆ ಮಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡ. “ಮುಂಬೈನ ಅಂಧೇರಿ ಕೇಂದ್ರದಿಂದ ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ಅದರಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ಎಂಡಿಎಂಎ ಡ್ರಗ್ಸ್ ಇವೆ” ಎಂದು ಹೇಳಿದ್ದಾನೆ. ಅಲ್ಲಿಂದ ವಂಚಕರ ಜಾಲ ಶುರುವಾಗಿದೆ.

ಇದನ್ನು ಓದಿ: ವಂಚನೆ ಆರೋಪ : ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಕಂಪನಿಯ ನಾಲ್ವರಿಗೆ ಸಮನ್ಸ್‌

ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ಮೋಸ!
ಮಹಿಳೆ ತಕ್ಷಣ “ನನಗೆ ಯಾವುದೇ ಪಾರ್ಸೆಲ್ ಬಂದಿಲ್ಲ, ಇದು ನನ್ನದಲ್ಲ” ಎಂದು ತಿಳಿಸಿದರು. ಆದರೆ ಆರೋಪಿ “ಪಾರ್ಸೆಲ್ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಇದೆ. ಇದು ಸೈಬರ್ ಅಪರಾಧ. ಸೈಬರ್ ಸೆಲ್‌ಗೆ ವರದಿ ಮಾಡಿ” ಎಂದು ಸಲಹೆ ನೀಡಿದ. ನಂತರ ಕರೆಯನ್ನು ಬೇರೊಬ್ಬರಿಗೆ ವರ್ಗಾಯಿಸಿದ. ಆ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. “ನೀವು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ. ಕುಟುಂಬದವರಿಗೆ ತಿಳಿಸಿದರೆ ಅವರನ್ನೂ ಪ್ರಕರಣಕ್ಕೆ ಸೇರಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾನೆ.

ಸೆಪ್ಟೆಂಬರ್ 23ರಂದು ಆರೋಪಿ ವಿಡಿಯೋ ಕಾಲ್ ಮಾಡಿದ್ದಾನೆ. ಸಿಬಿಐ ಕಚೇರಿ ಎಂಬಂತೆ ಬ್ಯಾಕ್‌ಗ್ರೌಂಡ್ ಇಟ್ಟುಕೊಂಡು ವಿಚಾರಣೆ ನಡೆಸಿದ್ದಾನೆ. ಒಂದು ವಾರದವರೆಗೆ ದಿನಾ ವಿಡಿಯೋ ಕಾಲ್‌ಗಳು ಬಂದಿವೆ. “ಆರ್‌ಬಿಐ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್‌ಗೆ ನಿಮ್ಮ ಆಸ್ತಿ ವಿವರ ಘೋಷಿಸಬೇಕು. ತನಿಖೆಗಾಗಿ ಬ್ಯಾಂಕ್ ಖಾತೆ ಪರಿಶೀಲಿಸಬೇಕು. ಹಣವನ್ನು ನೀವೇ ವರ್ಗಾವಣೆ ಮಾಡಿ, ಪರಿಶೀಲನೆ ಬಳಿಕ ವಾಪಸ್ ನೀಡುತ್ತೇವೆ” ಎಂದು ಮಾತು ಕೊಟ್ಟಿದ್ದಾನೆ. ಮಹಿಳೆ ಆ ಮಾತು ನಂಬಿ ತಮ್ಮ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಯಿಂದ ಹಣ ವರ್ಗಾವಣೆ ಮಾಡಿದ್ದಾರೆ.

180ಕ್ಕೂ ಹೆಚ್ಚು ಟ್ರಾನ್ಸ್‌ಆಕ್ಷನ್‌ಗಳಲ್ಲಿ 31 ಕೋಟಿ ರೂಪಾಯಿ ಹೋಗಿದೆ. ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಕೊನೆಗೆ 2025 ಮಾರ್ಚ್ ನಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡಿತು. ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ. ನಂತರ ಮಹಿಳೆಗೆ ತನ್ನ ಮೋಸದ ಜಾಲ ಅರಿವಿಗೆ ಬಂದಿದೆ.

ಮಹಿಳೆ ಮೋಸಕ್ಕೆ ಬಿದ್ದಿರುವುದು ತಡವಾಗಿ ಅರಿವಾಗಿದೆ. ಮಗನ ಮದುವೆ, ವಿದೇಶ ಪ್ರಯಾಣ ಮತ್ತು ಅನಾರೋಗ್ಯದ ಕಾರಣ ದೂರು ನೀಡಲು ತಡ ಮಾಡಿದ್ದು, ಕೊನೆಗೆ ಪೂರ್ವ ವಿಭಾಗ ಸೆನ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಕಲಂ 419, 420, 468, 471 ಮತ್ತು ಐಟಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಸೈಬರ್ ಕ್ರೈಂ ತಂಡ ತನಿಖೆ ನಡೆಸುತ್ತಿದೆ. ಬ್ಯಾಂಕ್ ಖಾತೆಗಳು, ಐಪಿ ಅಡ್ರೆಸ್, ಮೊಬೈಲ್ ಟ್ರೇಸ್ ಮಾಡುತ್ತಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ಸೈಬರ್ ಮೋಸಗಳ ತೀವ್ರತೆ ತೋರಿಸುತ್ತದೆ. ಐಟಿ ಉದ್ಯೋಗಿಗಳೇ ಬಲೆಗೆ ಬೀಳುತ್ತಿದ್ದಾರೆ. ವಂಚಕರು ನಕಲಿ ಸಿಬಿಐ, ಆರ್‌ಬಿಐ ಅಧಿಕಾರಿಗಳಾಗಿ ಮೋಸ ಮಾಡುತ್ತಾರೆ. ವಿಡಿಯೋ ಕಾಲ್, ಬೆದರಿಕೆ, ನಂಬಿಕೆ ಗಳಿಸುವ ತಂತ್ರಗಳು ಬಳಸುತ್ತಾರೆ. ಹೀಗಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ನಟಿ ಮೇಲೆ ಅತ್ಯಾಚಾರ ಕೇಸ್‌: ಮಲಯಾಳಂ ಸ್ಟಾರ್‌ ನಟ ದಿಲೀಪ್‌ ಖುಲಾಸೆ

ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…

12 mins ago

ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋದ ನಟ ದರ್ಶನ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…

18 mins ago

ಬೆಳಗಾವಿ ಅಧಿವೇಶನ ವಿರೋಧಿಸಿ ಎಂಇಎಸ್‌ ಪುಂಡರಿಂದ ಮಹಾಮೇಳಾವ್:‌ ಹಲವರು ಪೊಲೀಸ್‌ ವಶಕ್ಕೆ

ಬೆಳಗಾವಿ: ಬೆಳಗಾವಿ ಅಧಿವೇಶನ ವಿರೋಧಿಸಿ ಎಂಇಎಸ್‌ ಪುಂಡರು ಮಹಾಮೇಳಾವ್‌ ನಡೆಸಲು ಸಿದ್ಧತೆ ನಡೆಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದಿನಿಂದ…

29 mins ago

ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಗೈರು

ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಗೈರಾಗಿದ್ದಾರೆ. ಇಂದಿನಿಂದ ಡಿಸೆಂಬರ್.‌19ರವರೆಗೆ ಅಧಿವೇಶನ…

1 hour ago

ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜು

ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್‌ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…

1 hour ago

ಕಾವೇರಿ ನದಿ ಪಾತ್ರಕ್ಕೆ ಮಾರಕವಾದ ಪ್ರವಾಸೋದ್ಯಮ

ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…

2 hours ago