ರಾಜ್ಯ

ರಾಜ್ಯ ಸರ್ಕಾರದಿಂದ 2026ರ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರವು 2026ನೇ ವರ್ಷಕ್ಕೆ 20 ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ 21 ದಿನಗಳ ಪರಿಮಿತಿ ರಜಾ ದಿನಗಳ ಪಟ್ಟಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದಂದು ಬರುವ ಹಬ್ಬಗಳನ್ನು ಸಾರ್ವತ್ರಿಕ ರಜೆಯ ಪಟ್ಟಿಯಿಂದ ಹೊರಗಿಡಲಾಗಿದೆ. ಜ.15ರಂದು ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ, ಜ.26 ಗಣರಾಜ್ಯೋತ್ಸವ, ಮಾ.19 ಯುಗಾದಿ ಹಬ್ಬ, ಮಾ.21ರಂದು ಖುತುಬ್-ಎ-ರಂಜಾನ್, ಮಾ.31ರಂದು ಮಹಾವೀರ ಜಯಂತಿಗಳಂದು ಸಾರ್ವತ್ರಿಕ ರಜಾ ಘೋಷಿಸಲಾಗಿದೆ.

ಏ.3ರಂದು ಶುಭ ಶುಕ್ರವಾರ, ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಏ.20ರಂದು ಬಸವ ಜಯಂತಿ, ಅಕ್ಷಯ ತೃತೀಯ, ಮೇ 1ರಂದು ಕಾರ್ಮಿಕ ದಿನಾಚರಣೆ, ಮೇ28 ಬಕ್ರೀದ್, ಜೂ.26 ಮೊಹರಂ ಕಡೆ ದಿನ, ಆ.15 ಸ್ವಾತಂತ್ರ್ಯ ದಿನಾಚರಣೆ ಹಾಗೂ ಆ.26ರಂದು ಈದ್ ಮಿಲಾದ್ ಸಾರ್ವತ್ರಕ ರಜಾ ದಿನಗಳಾಗಿವೆ.

ಸೆ.14ರಂದು ವರಸಿದ್ಧಿ ವಿನಾಯಕ ವ್ರತ, ಅ.2ರಂದು ಗಾಂಧಿ ಜಯಂತಿ, ಅ.20ರಂದು ಮಹಾನವಮಿ, ಆಯುಧಪೂಜೆ, ಅ.21ರಂದು ವಿಜಯದಶಮಿ, ನ.10ರಂದು ಬಲಿಪಾಡ್ಯಮಿ, ದೀಪಾವಳಿ, ನ.27ರಂದು ಕನಕದಾಸ ಜಯಂತಿ ಹಾಗೂ ಡಿ.25 ರಂದು ಕ್ರಿಸ್‍ಮಸ್ ಸಾರ್ವತ್ರಿಕ ರಜಾದಿನಗಳನ್ನಾಗಿ ಘೋಷಿಸಿದೆ.

ಫೆ.15ರಂದು ಮಹಾಶಿವರಾತ್ರಿ, ಅಕ್ಟೋಬರ್ 25ರಂದು ಮಹರ್ಷಿ ವಾಲೀಕಿ ಜಯಂತಿ, ನ.1ರಂದು ಕನ್ನಡ ರಾಜ್ಯೋತ್ಸವ ಭಾನುವಾರವೇ ಬರಲಿವೆ. ನ.11ರಂದು ನರಕ ಚತುರ್ದಶಿ ಅ.10ರಂದು ಮಹಾಲಯ ಅಮವಾಸ್ಯೆಯು ಎರಡನೇ ಶನಿವಾರಗಳಂದು ಬರಲಿವೆ. ಈ ರಜಾ ದಿನಗಳ ಸಂಧರ್ಭದಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಿರುತ್ತವೆ. ಸೆ.3ರಂದು ಕೈಲ್ ಮೂಹೂರ್ತ, ಅ.18ರಂದು ತುಲಾ ಸಂಕ್ರಮಣ, ನ.26ರಂದು ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಅನ್ವಯವಾಗುವಂತೆ ಸಾರ್ವತ್ರಿಕ ರಜೆ ನೀಡಲಾಗಿದೆ.

ಪರಿಮಿತ ರಜೆಗಳು: ಜ.1ರಂದು ನೂತನ ವರ್ಷಾರಂಭ, ಜ.27ರಂದು ಮಧ್ವ ನವಮಿ, ಫೆ.4ರಂದು ಷಬ್-ಎ-ಬರಾತ್, ಮಾ.2ರಂದು ಹೋಳಿಹಬ್ಬ, ಮಾ. 17ರಂದು ಷಬ್-ಎ-ಖಾದರ್, ಮಾ.20ರಂದು ಜುಮತ್-ಉಲ-ವಿದಾ, ಮಾ. 23ರಂದು ದೇವರ ದಾಸಿಮಯ್ಯ ಜಯಂತಿ, ಮಾ.27ರಂದು ಶ್ರೀರಾಮ ನವಮಿ ಪರಿಮಿತಿ ರಜಾದಿನಗಳಾಗಿವೆ.

ಏ.4ರಂದು ಹೋಲಿ ಸ್ಯಾಟರ್ ಡೇ, ಏ.21ರಂದು ಶ್ರೀ ಶಂಕರಾಚಾರ್ಯ ಜಯಂತಿ, ಏ.22ರಂದು ಶ್ರೀರಾಮಾನುಜಾಚಾರ್ಯ ಜಯಂತಿ, ಆ.21ರಂದು ಶ್ರೀ ವರಮಹಾಲಕ್ಷ್ಮೀ ವ್ರತ, ಆ.27ರಂದು ಯಜುರ್ ಉಪಕರ್ಮ, ಆ.28 ರಂದು ಬ್ರಹಶ್ರೀ ನಾರಾಯಣಗರು ಜಯಂತಿ, ರಕ್ಷಾ ಬಂಧನ, ಸೆ.4ರಂದು ಶ್ರೀ ಕೃಷ್ಣ ಜನಾಷ್ಠಮಿ, ಸೆ.8 ರಂದು ಕನ್ಯಾಕುಮಾರಿಯಮ್ಮ ಜಯಂತಿ, ಸೆ.17ರಂದು ವಿಶ್ವಕರ್ಮ ಜಯಂತಿ, ಸೆ.25ರಂದು ಶ್ರೀ ಅನಂತಪದನಾಭ ವ್ರತಗಳು ಸಹ ಪರಿಮಿತಿ ರಜಾದಿನಗಳ ಪಟ್ಟಿಯಲ್ಲಿವೆ.

ನ.24ರಂದು ಗುರುನಾನಕ್ ಜಯಂತ್, ನ.26 ರಂದು ಹುತ್ತರಿ ಹಬ್ಬ, ಡಿ.24ರಂದು ಕ್ರಿಸ್ ಈವ್ ಪರಿಮಿತ ರಜಾದಿನಗಳಾಗಿವೆ.

ಆಂದೋಲನ ಡೆಸ್ಕ್

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

2 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

2 hours ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

2 hours ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

12 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

12 hours ago