ರಾಜ್ಯ

ಕಾಲ್ತುಳಿತ ಪ್ರಕರಣ | ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡಿರುವ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿ, ಮುಂದಿನ ಅರ್ಜಿ ವಿಚಾರಣೆಯನ್ನು ಜೂನ್.10ಕ್ಕೆ ಮುಂದೂಡಿದೆ.

ಘಟನೆಯ ಬಗ್ಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ನೋಟೀಸ್ ಜಾರಿಗೊಳಿಸಿದ ಪೀಠ ಜೂನ್ 10 ಕ್ಕೆ ಮುಂದಿನ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವೇರ ರಾವ್ ಹಾಗೂ ಸಿ.ಎಂ ಜೋಶಿ ಅವರಿದ್ದ ವಿಭಾಗೀಯ ಪೀಠದಲ್ಲಿ ಸ್ವಯಂ ದೂರು ದಾಖಲಾಗಿತ್ತು. ಮಧ್ಯಾಹ್ನದ ನಂತರ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ದುರ್ಘಟನೆಗೆ ಕಾರಣ ಏನು..?ಘಟನೆ ಬಳಿಕ ತೆಗೆದುಕೊಂಡ ಕ್ರಮಗಳೇನು?ಮುಂದಿನ ವಿಚಾರಣೆಗೆ ಪ್ರಗತಿ ವರದಿ ಸಲ್ಲಿಕೆಗೆ ಎ ಜಿ ಅವರಿಗೆ ಸೂಚಿಸಿದರು.

ಬಿಸಿಐಗೆ, ಐಪಿಎಲ್ ಆಯೋಜನೆ ಮಾಡಿದ್ದವರಿಗೆ ನೊಟೀಸ್ ನೀಡುವಂತೆ ವಕೀಲರು ಮನವಿ ಮಾಡಿದರು. ಸರ್ಕಾರದ ಪ್ರಗತಿ ವರದಿ ಸಲ್ಲಿಸಲಿ. ಆಮೇಲೆ ನಿಮ್ಮ ವಾದವನ್ನ ಆಲಿಸುತ್ತೇನೆ ಎಂದು ನ್ಯಾಯಾಧೀಶರು ಹೇಳಿದರು.

ಬುಧವಾರ ನಡೆದ ದುರ್ಘಟನೆ ಸಂಬಂಧ ಸ್ವಯೋಪ್ರೇರಿತ ದೂರು ದಾಖಲಿಸಿಕೊಂಡಿರುವ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ. ಯಾವ ರೀತಿಯ ಮೆಡಿಕಲ್ ಫೆಸಿಲಿಟಿ ಮಾಡಲಾಗಿತ್ತು? ಇಂತಹ ಘಟನೆ ನಡೆದಾಗ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೀರಿ? ಏನಾದರೂ ಎಸ್‌ಒಪಿ ಮಾಡಿಕೊಂಡಿದ್ರಾ? ಇಂತಹ ಕಾರ್ಯಕ್ರಗಳನ್ನು ಮಾಡುವಾಗ ನಿಯಮಗಳನ್ನು ತರಬೇಕು. ನೀವು ಈ ಕೆಲಸವನ್ನು ಮಾಡಿದ್ರಾ? ಎಂದು ಕೋರ್ಟ್‌ ಪ್ರಶ್ನೆಗಳನ್ನು ಮಾಡಿದೆ.

ಮೆಡಿಕಲ್, ಫೈರ್ ಬ್ರಿಗೇಡ್ ಎಲ್ಲಾ ರೀತಿಯ ವ್ಯವಸ್ಥೆ ಇರಬೇಕು. ಈ ವ್ಯವಸ್ಥೆಯನ್ನು ಮಾಡಿಕೊಂಡಿದ್ರಾ? ಹೀಗೆ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ಅಲ್ಲದೆ, ಮುಂದುವರೆದು ಅವರು ಈ ಘಟನೆಗೆ ಯಾರು ಹೊಣೆ?, ಕ್ರಿಕೇಟ್ ಅಸೋಸಿಯೇಷನ್ಮಾ? ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಾ? ಅಂತಲೂ ಪ್ರಶ್ನಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು 21 ಗೇಟ್‌ಗಳಿವೆ. ಆದರೆ 3 ಅನ್ನು ಮಾತ್ರ ಓಪನ್ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳನ್ನು ಸಿಜೆ ಅವರು ಕೇಳಿದ್ದಾರೆ. ಕೊನೆಗೆ ಇದೆಲ್ಲಕ್ಕೂ ಸಮಗ್ರ ವರದಿ ಕೊಡಬೇಕು ಎಂದು ಅರ್ಜಿ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿಕೆ ಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅನಿರೀಕ್ಷಿ ಘಟನೆ ನಡೆದಿದ್ದು, 11 ಮಂದಿ ಸಾವನ್ನಪ್ಪಿ, 56 ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಹಲವು ಮಂದಿ ಮೇಲ್ ಮೂಲಕ ಮನವಿ ಮಾಡಿದ್ದಾರೆ. ಘಟನೆ ಗಂಭೀರವಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೀಠ ತಿಳಿಸಿದೆ.

ಸರ್ಕಾರದ ಪರ ಎಜಿ ಕೋರ್ಟ್​ಗೆ ಹೇಳಿದ್ದೇನು?
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಹೈಕೋರ್ಟ್ ನೀಡುವ ಸಲಹೆಗಳನ್ನು ಪಾಲಿಸಲು ಸರ್ಕಾರ ಬದ್ಧವಾಗಿದೆ. ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರತಿರೋಧಿಸುವುದಿಲ್ಲ ಜೂನ್ 3ರಂದು ಆರ್‌ಸಿಬಿ ಐಪಿಎಲ್ ಮ್ಯಾಚ್ ಗೆಲುವು ಸಾಧಿಸಿತು. ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದರು. ಬಂದೋಬಸ್ತ್​ ಗಾಗಿ 1,643 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ವಾಟರ್ ಟ್ಯಾಂಕರ್, ಕೆಎಸ್‌ಆರ್​ಪಿ ತುಕಡಿ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ 1,600 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಕಾಲ್ತುಳಿತ ಸಂಭವಿಸಿ 56 ಜನರು ಗಾಯಗೊಂಡಿದ್ದರು. ಐವರು ಮಹಿಳೆಯರು ಹಾಗೂ 6 ಪುರುಷರು ಮೃತಪಟ್ಟಿದ್ದಾರೆ. ಕೋಲಾರ, ಉತ್ತರ ಕನ್ನಡ, ತುಮಕೂರು, ಯಾದಗಿರಿ, ಮಂಡ್ಯದಿಂದಲೂ ಬೆಂಗಳೂರಿಗೆ ಜನ ಬಂದಿದ್ದರು. ಒಟ್ಟು ನಿನ್ನೆ ಬೆಂಗಳೂರಿಗೆ 2.5 ಲಕ್ಷ ಜನರು ಬಂದಿದ್ದರು ಎಂದು ಕೋರ್ಟ್​ಗೆ ತಿಳಿಸಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಗರ ಸಾರಿಗೆ ಬಸ್‌ಗಳಿಂದ ಪರಿಸರ ಮಾಲಿನ್ಯ

ಮೈಸೂರಿನ ಕುವೆಂಪುನಗರ ಮಾರ್ಗದಲ್ಲಿ ಸಂಚರಿಸುವ ನಗರ ಸಾರಿಗೆಯ ಕೆಲವು ಬಸ್ಸುಗಳಿಂದ ವಿಪರೀತವಾಗಿ ಕಪ್ಪು ಹೊಗೆ ಬರುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಆರೋಗ್ಯದ…

1 hour ago

ಓದುಗರ ಪತ್ರ: ರಾಜ್ಯಕ್ಕೆ ಕೇಂದ್ರದ ಅನುದಾನ ಕಡಿತ: ಹೋರಾಟ ಅಗತ್ಯ

ಪ್ರತಿ ವರ್ಷ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ಐದು ಲಕ್ಷ ಕೋಟಿ ರೂ.ಗಳ ತೆರಿಗೆ ಹೋಗುತ್ತಿದ್ದರೂ, ಕೇಂದ್ರ ಸರ್ಕಾರ ರಾಜ್ಯಕ್ಕೆ…

1 hour ago

ಓದುಗರ ಪತ್ರ: ಕುವೆಂಪುನಗರ ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿಪಡಿಸಿ

ಮೈಸೂರಿನ ಕುವೆಂಪು ನಗರದಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಪ್ರತಿ ದಿನ ಹಿರಿಯ ನಾಗರಿಕರು ಬರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡ ಚಿತ್ರರಂಗವೂ ಅರಸು-ಸಿದ್ದರಾಮಯ್ಯ ಆಡಳಿತ ರಂಗವೂ

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…

1 hour ago

ಇಂದು ಫಲಪುಷ್ಪ ಪ್ರದರ್ಶನದ ಮಧುರ ವಸ್ತ್ರೋತ್ಸವ

ಮಂಡ್ಯ: ಜಿಲ್ಲಾಡಳಿತ ಮತ್ತು ಮಂಡ್ಯ ಜಿಲ್ಲಾ ಪಂಚಾಯಿತಿ,ತೋಟಗಾರಿಕೆ ಇಲಾಖೆ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ಸಹ ಯೋಗದಲ್ಲಿ ಫಲಪುಷ್ಪ…

1 hour ago

ಜನವರಿ.24ರಿಂದ ಮಂಜಿನ ನಗರಿಯಲ್ಲಿ ಫಲಪುಷ್ಪ ಪ್ರದರ್ಶನ

ನವೀನ್ ಡಿಸೋಜ ಗಮನ ಸೆಳೆಯಲಿದೆ ೧೮ ಅಡಿ ಎತ್ತರದ ಶ್ರೀ ಭಗಂಡೇಶ್ವರ ದೇವಸ್ಥಾನ ಕಲಾಕೃತಿ; ಹಲವು ವಿಭಿನ್ನತೆಯೊಂದಿಗೆ ಆಯೋಜನೆ ಮಡಿಕೇರಿ:…

1 hour ago