ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿಗೆ ಬರುವ ಪ್ರವಾಸಿಗರಿಗೆ ಪುರಾತತ್ವ ಸರ್ವೇಕ್ಷಣ ಇಲಾಖೆ ಗುಡ್‌ನ್ಯೂಸ್ ನೀಡಿದ್ದು, ಇನ್ನು ಮುಂದೆ ಕ್ಯೂ ಆರ್ ಕೋಡ್‌ಗೆ ಸ್ಕ್ಯಾನ್ ಮಾಡಿ ಸಂಗೀತದ ಸ್ವಾದವನ್ನು ಸವಿಯಬಹುದಾಗಿದೆ.
ಭಾರತದ ಪುರಾತತ್ವ ಸರ್ವೇಕ್ಷಣ ಇಲಾಖೆ ವತಿಯಿಂದ ಹಂಪಿಯ ವಿಜಯ ವಿಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿ ಸಂಗೀತದ ಕಂಬಗಳಿಗೆ ಪ್ರಾಯೋಗಿಕವಾಗಿ ಕ್ಯೂ ಆರ್ ಕೋಡನ್ನು ಅಳವಡಿಸಲಾಗಿದೆ.
ಪ್ರವಾಸಿಗರು ಕ್ಯೂ ಆರ್ ಕೋಡ್‌ಗೆ ಸ್ಕ್ಯಾನ್ ಮಾಡುವುದರ ಮೂಲಕ ಸಂಗೀತವನ್ನು ಕೇಳುವ ವ್ಯವಸ್ಥೆ ಮಾಡಲಾಗಿದೆ.
ಇನ್ನು ಇಲ್ಲಿ ಪ್ರವಾಸಿಗರ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಂಬಕ್ಕೆ ಕ್ಯೂ ಆರ್ ಕೋಡ್ ಅಳವಡಿಸುವ ಪ್ಲಾನ್ ಮಾಡಲಾಗಿದೆ.
ಸ್ಥಳೀಯರು ಹಾಗೂ ಪ್ರವಾಸಿಗರ ಸಲಹೆಯ ಮೇರೆಗೆ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎನ್ನಲಾಗಿದೆ.
ಈ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆದಾಯ ಬರಲಿದ್ದು, ಮುಂದಿನ ದಿನಗಳಲ್ಲಿ ಹಂಪಿಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಪುರಾತತ್ವ ಸರ್ವೇಕ್ಷಣ ಇಲಾಖೆ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.
ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್ ಪಾವತಿಗಳ ಮೇಲಿನ…
ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…
ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…
ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…
ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…
ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…