ಬೆಂಗಳೂರು: ಸಾರಿಗೆ ಸಂಸ್ಥೆಯು ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದೆ.
ನಾಳೆಯಿಂದಲೇ ಬಿಎಂಟಿಸಿ ಪಾಸ್‌ಗಳ ದರ ಏರಿಕೆ ಆಗಲಿದೆ. ಹಳೆಯ ಪಾಸ್ ದರವನ್ನು ಪರಿಷ್ಕರಿಸಿ ಹೊಸ ದರ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
70 ರೂಪಾಯಿ ಇದ್ದ ಬಿಎಂಟಿಸಿ ಡೈಲಿ ಪಾಸ್ ದರ ಈಗ 80 ರೂಪಾಯಿ ಆಗಿದೆ. 300 ರೂ ಇದ್ದ ಬಿಎಂಟಿಸಿ ವಾರದ ಪಾಸ್ ದರ ಈಗ 350ರೂಗೆ ಏರಿಕೆಯಾಗಿದೆ. 945ರೂ ಇದ್ದ ಹಿರಿಯ ನಾಗರಿಕ ಮಾಸಿಕ ಪಾಸ್ ಈಗ 1080ರೂ ಆಗಿದೆ. 1050ರೂ ಇದ್ದ ಸಾಮಾನ್ಯ ಮಾಸಿಕ ಪಾಸ್ ದರ ಈಗ 1200ರೂಗೆ ಏರಿಕೆಯಾಗಿದೆ. 2200ರೂ ಇದ್ದ ನೈಸ್ ರೋಡ್ ಮಾಸಿಕ ಪಾಸ್ ದರ ಈಗ 2350 ರೂಗೆ ಏರಿಕೆಯಾಗಿದೆ.
ಇನ್ನು ಒಪ್ಪಂದದ ಮೇಲೆ ಪಡೆಯುವ ಬಸ್‌ಗಳ ದರವನ್ನು ಸಾರಿಗೆ ಇಲಾಖೆ ಏರಿಕೆ ಮಾಡಿದೆ. ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಬಸ್‌ಗಳ ಬಾಡಿಗೆ ಪರಿಷ್ಕರಣೆ ಮಾಡಲಾಗಿದೆ. ಈ ದರವನ್ನು ಕೆಎಸ್‌ಆರ್‌ಟಿಸಿ ಶೇಕಡಾ.15ರಷ್ಟು ಹೆಚ್ಚಳ ಮಾಡಿದೆ.
ಪ್ರತೀ ಕಿ.ಮೀ ದರದ ಮೇಲೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದ್ದು, ಸಾಮಾನ್ಯ ಸಾರಿಗೆ, ಅಶ್ವಮೇಧ ಸೇರಿದಂತೆ 16 ಬಗೆಯ ಬಸ್‌ಗಳ ಬಾಡಿಗೆ ದರವನ್ನು ಸಹ ಏರಿಕೆ ಮಾಡಲಾಗಿದೆ.
ಇನ್ನು ಈಗಾಗಲೇ ಬುಕ್ಕಿಂಗ್ ಆಗಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರವನ್ನೇ ವಿಧಿಸುವಂತೆ ಆದೇಶ ಹೊರಡಿಸಲಾಗಿದೆ.
ಮೈಸೂರು : ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕ ಘಟಕ ಮತ್ತು ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿತ್ತು. ಆದರೆ, ಇದೀಗ…
ಮೈಸೂರು : ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶಗಳನ್ನು ಕಳುಹಿಸಿ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿದ್ದ ಓರ್ವ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.…
ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್ ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್…
ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…
ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…