ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಟೋಟಕ ತಿರುವು ಸಿಕ್ಕಿದೆ. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಬಚವಾಗಲು ಬರೋಬ್ಬರಿ 30 ಲಕ್ಷ ರೂ ಹಣ ನೀಡಿದ್ದರು ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಕೇಸಿನ ವಿಚಾರಣೆ ವೇಳೆ ಪೊಲೀಸ್ ತನಿಖೆಯಲ್ಲಿ ಈ ಸ್ಪೋಟಕ ಮಾಹಿತಿ ಸಿಕ್ಕಿದೆ. ಕೊಲೆಯಾದ ನಂತರ ಶವವನ್ನು ಎಸೆದು, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ ೩೦ ಲಕ್ಷ ರೂಪಾಯಿ ಹಣವನ್ನು ದರ್ಶನ್ ನೀಡಿದ್ದರು. ಈ ದೊಡ್ಡ ಮೊತ್ತದ ಹಣವನ್ನು ಪ್ರದೋಶ್ ಎನ್ನುವವನಿಗೆ ಕೊಟ್ಟು, ಕೆಲವು ಹುಡುಗರನ್ನು ಪೋಲಿಸರಿಗೆ ಸರೆಂಡರ್ ಆಗಲು ಹೇಳಿದ್ದರು. ಆ ಮೂಲಕ ಕೊಲೆ ಕೇಸ್‌ನಿಂದ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಸೇರಿದಂತೆ ದೊಡ್ಡವರು ಬಚಾವಾಗಲು ಯೋಜನೆ ರೂಪಿಸಿದ್ದರು. ಅದರಂತೆ ಪ್ರದೋಶ್ ಎನ್ನುವ ವ್ಯಕ್ತಿ ಹಣವನ್ನು ಪಡೆದುಕೊಂಡು ಹೋಗಿದ್ದರು.
ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿದ್ದ ಶವವನ್ನು ತೋರಿಸಿ ಬಾಡಿಯನ್ನು ಎಸೆದು ಸರೆಂಡರ್ ಆಗುವಂತೆ ಕಾರ್ತಿಕ್ ಹಾಗೂ ಅವನ ಸಹಚರರಿಗೆ ಸೂಚಿಸಲಾಗಿತ್ತು. ಜೊತೆಗೆ ನೀವು ಅರೆಸ್ಟ್ ಆಗಿ, ಕೋರ್ಟ್ ಖರ್ಜು, ನಿಮಗೆ ಜಾಮೀನು ನೀಡಿ ಹೊರೆಗೆ ಕರೆಸಿಕೊಳ್ಳಲುವ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಲಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈ ಹಣವನ್ನು ದರ್ಶನ್ ಅವರೇ ನೀಡಿದ್ದು, ಕೇಸ್‌ನಲ್ಲಿ ದರ್ಶನ್ ವಿರುದ್ಧ ಸಿಕ್ಕ ದೊಡ್ಡ ಎವಿಡೆನ್ಸ್ ಆಗಿದೆ. ಕೊಲೆ ಬಳಿಕ ರಾಘವೇಂದ್ರ, ನಿಖಿಲ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಮೊದಲು ಸರೆಂಡರ್ ಆಗಿದ್ದರು.
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್ ಬ್ಯಾಂಡ್‌ನ ಸದ್ದಿನೊಂದಿಗೆ…
ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…
ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…
ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…