ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್’ ಮಾಡಲು ಹೋಗಿ 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಮೀಶ್ ಸಂಗಳದ ರೀಲ್ಸ್ ಚಿತ್ರೀಕರಣ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೈಸೂರಿನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಮೀಶ್, ಯುಗಾದಿ ಹಬ್ಬದ ರಜೆಗಾಗಿ ತನ್ನ ಹುಬ್ಬಳ್ಳಿಯ ಮನೆಗೆ ಬಂದಿದ್ದನು. ಗುರುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಸೇರಿ ಹುಬ್ಬಳ್ಳಿಯ ಪ್ಲಾಟ್‌ವೊಂದರಲ್ಲಿ ರೀಲ್ಸ್ ಚಿತ್ರೀಕರಿಸಲು ತೆರಳಿದ್ದನು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಂತೆ ‘ಸ್ಟಂಟ್ ಮತ್ತು ಕ್ರಾಶ್’ ರೀತಿಯ ರೀಲ್ಸ್ ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ವೇಗವಾಗಿ ಬರುವ ಕಾರು ಮತ್ತು ಬೈಕ್ ನಡುವೆ ಅಪಾಯಕಾರಿ ಸಾಹಸ ದೃಶ್ಯವನ್ನು ಚಿತ್ರೀಕರಿಸಲು ಯೋಜನೆ ರೂಪಿಸಿದ್ದರು.
ರೀಲ್ಸ್ ಚಿತ್ರೀಕರಣದ ವೇಳೆ ನಮೀಶ್ ಬೈಕ್ ಚಲಾಯಿಸುತ್ತಿದ್ದನು. ಎದುರಿನಿಂದ ಅತಿ ವೇಗವಾಗಿ ಬಂದ ಆಡಿ ಕಾರು ನೇರವಾಗಿ ನಮೀಶ್ ಚಲಾಯಿಸುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಮೀಶ್ ಸುಮಾರು 30 ಅಡಿ ದೂರಕ್ಕೆ ಬಿದ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ದೃಶ್ಯವನ್ನು ನೋಡಿದ ಸ್ಥಳೀಯರು ಹಾಗೂ ಸ್ನೇಹಿತರು ಬೆಚ್ಚಿಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರವಿನಗರದ ನಿವಾಸಿ ನಮೀಷ್ ಸಂಗಳದ ಮೃತಪಟ್ಟ ಬಾಲಕ. ಇಲ್ಲಿಯ ಶೇಜವಾಡ್ಕರ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತರಿಗೆ ವಾಹನ ನೀಡಬೇಡಿ ಎಂದು ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಅವರ ಗಮನಕ್ಕೆ ಬರದೆ ಕೆಲವು ಮಕ್ಕಳು ವಾಹನ ಚಲಾಯಿಸುತ್ತಿದ್ದಾರೆ. ಈ ಕುರಿತು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಎಚ್.ಡಿ.ಕೋಟೆ: ಕಬಿನಿ ಕಾಡಿನಲ್ಲಿ ಹುಲಿ ಮರಿಗಳು ಮಣ್ಣಿನ ವಾಸನೆ ಸವಿದು ಮೈಮರೆತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.…
ಮಂಡ್ಯ: ತಾಲ್ಲೂಕಿನ ಭೂತನಹೊಸೂರು ಗ್ರಾಮದ ಸಮೀಪದ ಕಬ್ಬಿನ ಗದ್ದಯೊಂದರಲ್ಲಿ ಪತ್ತೆಯಾಗಿದ್ದ ಮೂರು ಚಿರತೆ ಮರಿಗಳಿಂದ ದೂರವಾಗಿದ್ದ ತಾಯಿ ಚಿರತೆ ಬೋನಿನಲ್ಲಿ…
ಕೆ.ಆರ್.ಪೇಟೆ: ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿದ ಆಹಾರದ ದಾಸ್ತಾನು ರೈಸ್‌ಮಿಲ್‌ನಲ್ಲಿ ಪತ್ತೆಯಾಗಿದೆ. ಮಾರ್ಚ್.17ರಂದು ರೈತ…
ರಿಯಾದ್: ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು, ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರವಾದ ಸೌದಿ ಅರೇಬಿಯಾದ ತೈಲ…
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಗಲ್ಪ್ ಪ್ರದೇಶದಲ್ಲಿನ 9 ವಾಯು ಪ್ರದೇಶಗಳಲ್ಲಿ ಹಾರಾಟ…
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಏ.25…