ರಾಜ್ಯ

ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ವರುಣ: ಭರ್ತಿ ಹಂತಕ್ಕೆ ತಲುಪಿದ ಜಲಾಶಯಗಳು

ಬೆಂಗಳೂರು: ಕಳೆದ ಮೂರು ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಭಾರೀ ಮಳೆಯಿಂದ ಬಹುತೇಕ ಜಲಾಶಯಗಳು ಭರ್ತಿಯ ಹಂತಕ್ಕೆ ತಲುಪಿವೆ.

ಕೆಆರ್‍ಎಸ್, ನಾರಾಯಣಪುರ, ಹೇಮಾವತಿ, ಕಬಿನಿ ಸೇರಿದಂತೆ ಮತ್ತಿತರ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಭರ್ತಿಯ ಸನಿಹದಲ್ಲಿವೆ.

ಕೆಆರ್‍ಎಸ್ ಅಣೆಕಟ್ಟಿನಿಂದ ಕಾವೇರಿ ನದಿಗೆ 35 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡುತ್ತಿದ್ದು, ನದಿಪಾತ್ರದ ಜನತೆ ಎಚ್ಚರಿಕೆಯಿಂದಿರುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಸೇರಿ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರವಾಸಿ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಜಲಾಶಯದಿಂದ 25,000 ಕ್ಯೂಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದ್ದು, ಭದ್ರತಾ ದೃಷ್ಟಿಯಿಂದ ಆರು ಕ್ರಸ್ಟ್‌ ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ದಾಖಲೆ ಬಜೆಟ್; ಹಾದಿ ಸುಲಭದ್ದಲ್ಲ

ಹದಿನೇಳನೇ ಬಾರಿಗೆ ರಾಜ್ಯದ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿರುವ ವಿತ್ತ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದರ…

2 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಇವರು ಲಕ್ಕಿ ಪೊಲಿಟಿಷಿಯನ್ ಡುಕಾಟಿ ರಾಮಚಂದ್ರಪ್ಪ

ಪಕ್ಷಕ್ಕೆ ಬಹುಮತ ಬಂದರೆ ಸಿಎಂ, ಬರದಿದ್ದರೆ ಪ್ರತಿಪಕ್ಷ ನಾಯಕರಾಗುವ ಪ್ರಭಾವಿ ವ್ಯಕ್ತಿ ವೇಗವಾಗಿ ಸಾಗುತ್ತಿದ್ದ ಜೀಪು ಸಂಗನಕಲ್ಲು ಕ್ರಾಸ್ ಬಳಿ…

2 hours ago

ಅಭಿವೃದ್ಧಿಯತ್ತ ಕೊಡಗಿನ ಸರ್ಕಾರಿ ಗೋಶಾಲೆ

ನವೀನ್ ಡಿಸೋಜ ೨೦೨೨ರಲ್ಲಿ ಕೆ.ನಿಡುಗಣೆ ಗ್ರಾಮದಲ್ಲಿ ನಿರ್ಮಾಣವಾದ ಗೋಶಾಲೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಮತ್ತಷ್ಟು ಜಾನವಾರುಗಳಿಗೆ ಆಶ್ರಯ ಒದಗಿಸಲು ಚಿಂತನೆ …

2 hours ago

60 ದಿನಗಳಲ್ಲಿ ಕಲ್ಲಂಗಡಿ ಬೆಳೆದು ಲಾಭ ಗಳಿಸಿದ ರೈತ

ಮಾಗಳಿ ರಾಮೇಗೌಡ ಬೆಟ್ಟದಪುರ: ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಒಂದೂವರೆ ಲಕ್ಷ…

2 hours ago

108 ವರ್ಷಗಳ ಶಾಲೆಯಲ್ಲಿ ನೂರಾರು ಮಕ್ಕಳ ಕಲರವ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ವಯಸ್ಸಾದವರು ಈ ಶಾಲೆಯನ್ನು ನೋಡಿದರೆ, ತಮ್ಮ ಬಾಲ್ಯದ ನೆನಪುಗಳಿಗೆ ರೆಕ್ಕೆಪುಕ್ಕ…

2 hours ago

ಮೈಸೂರು ಜಿಲ್ಲೆಗೆ 13 ನಮ್ಮ ಕ್ಲಿನಿಕ್ ಮಂಜೂರು

ಕೆ.ಬಿ.ರಮೇಶನಾಯಕ ಯಾತ್ರಾಸ್ಥಳ ಚಾಮುಂಡಿಬೆಟ್ಟ, ಅಲ್ಪಸಂಖ್ಯಾತರು ಹೆಚ್ಚಿರುವ ಬಡೇಮಕಾನ್‌ನಲ್ಲಿ ಶೀಘ್ರ ಆರಂಭ ಮೈಸೂರು: ನಗರ ಪ್ರದೇಶದ ಜನರಿಗೆ ಸ್ಥಳೀಯವಾಗಿ ಚಿಕಿತ್ಸೆ ದೊರೆಯುವಂತೆ…

2 hours ago