ಪಾವಗಡ: ವಿಧಾನಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಅವರ ನೇತೃತ್ವದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ನಿಯೋಗವು ಪಾವಗಡದ ಸೋಲಾರ್ ಪಾರ್ಕ್‌ಗೆ ಬುಧವಾರ ಭೇಟಿ ನೀಡಿತು.
ಕ್ರೆಡಲ್ ಅಧ್ಯಕ್ಷರೂ ಆಗಿರುವ ಶಾಸಕರಾದ ಟಿ.ಡಿ. ರಾಜೇಗೌಡ ಅವರನ್ನು ಒಳಗೊಂಡಂತೆ ಶಾಸಕರಾದ ಯು.ಬಿ.ಬಣಕಾರ್, ಡಿ.ಜಿ.ಶಾಂತನಗೌಡ, ಹೆಚ್.ವಿ.ವೆಂಕಟೇಶ್ ಹಾಗೂ ವಿಧಾನ ಪರಿಷತ್ ಸದ್ಯರಾದ ಉಮಾಶ್ರೀ, ಭಾರತಿ ಶೆಟ್ಟಿ ಅವರಿದ್ದ ನಿಯೋಗಕ್ಕೆ ಅಧಿಕಾರಿಗಳು ಪಾರ್ಕ್‌ನ ವೈಶಿಷ್ಟ್ಯತೆಗಳ ಬಗ್ಗೆ ವಿವರ ನೀಡಿದರು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್, “ಇಂಧನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪಾವಗಡದ ಸೋಲಾರ್ ಪಾರ್ಕ್ ಮಾದರಿಯಾಗಿದೆ. ಇದೇ ರೀತಿ ರಾಜ್ಯದ ಬೇರೆ ಭಾಗದಲ್ಲೂ ಬೃಹತ್ ಸೋಲಾರ್ ಪಾರ್ಕ್ ಅಭಿವೃದ್ಧಿಯಾಗಬೇಕು,” ಎಂದು ಹೇಳಿದರು.
ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಕೆ.ಎಸ್.ಪಿ.ಡಿ.ಸಿ.ಎಲ್.ನ ಸಿಇಓ ಅಮರನಾಥ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂಬೈ : 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ…
ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…
ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…
ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…
ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…
ಬೆಂಗಳೂರು : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ಆಟೋ ಎಲ್.ಪಿ.ಜಿಗೆ ಯಾವುದೇ…