ರಾಜ್ಯ

ರಾಜ್ಯಪಾಲರಿಗೆ ದಿಲ್ಲಿಯಿಂದ ಫೋನ್‌? : ಫೋನ್‌ ಟ್ಯಾಪಿಂಗ್‌ ಬಗ್ಗೆ ವಿಧಾನಸಭೆಯಲ್ಲಿ ಗದ್ದಲ

ಬೆಂಗಳೂರು : ದೆಹಲಿಯಿಂದ ರಾಜಭವನಕ್ಕೆ ಫೋನ್ ಮಾಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾಡಿದ ಆರೋಪವು ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿತು.‌

ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಅವರು, 2011 ರ ಜ.6 ರಂದು ಆಗಿನ ರಾಜ್ಯಪಾಲರಾದ ಭಾರದ್ವಾಜ್ ಅವರು ಭಾಷಣವನ್ನು ಅಪೂರ್ಣಗೊಳಿಸಿ ಹೋಗುವ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ರಾಜ್ಯಪಾಲರ ಬಗ್ಗೆ ಅಪಾರ ಗೌರವವಿದೆ. ನೀವು ಹೋಗಬೇಡಿ ಎಂದು ಹೇಳುತ್ತಾರೆ. ಆಗ ರಾಜ್ಯಪಾಲರು ಭಾಷಣ ಮಂಡನೆಯಾಗಿದೆ ಎಂದು ಹೇಳಿ ಹೊರಟರು. ಯಾರು ಯಾರ ಮಾತನ್ನು ಕೇಳಿ ಆ ರೀತಿ ನಡೆದುಕೊಂಡರು ಎಂದು ಪ್ರಶ್ನಿಸಿದರು.

ಕಾನೂನು ಸಚಿವ ಎಚ್.ಕೆ.ಪಾಟೀಲರು ನೀವು ತಕರಾರು ಮಾಡುವುದನ್ನು ಜನರು ನೋಡುತ್ತಾರೆ. ದೆಹಲಿಯಿಂದ ಫೆÇೀನ್ ಮಾಡಿಸಿ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ಹೋಗಬೇಕಾದ್ದನ್ನು ನಾವು ಹೇಳುತ್ತೆ?ವೆ ಎನ್ನುತ್ತಿಂದ್ದಂತೆ ಬಿಜೆಪಿ ಶಾಸಕರು ಏರಿದ ದನಿಯಲ್ಲಿ ತೀವ್ರ ಆಕ್ಷೆ?ಪ ವ್ಯಕ್ತಪಡಿಸಿದರು.

ಆಗ ಬಿಜೆಪಿಯ ಸುನಿಲ್‍ಕುಮಾರ್ ಮಾತನಾಡ, ರಾಜ್ಯಭವನದ ಫೋನ್ ಟ್ಯಾಪಿಂಗ್ ನಡೆಯುತ್ತಿದೆಯೇ ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಯಾರು ಕದ್ದಾಲಿಕೆ ಮಾಡುತ್ತಿದೆ ಎಂದು ಪ್ರಶ್ನಿಸಿದರು.‌

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ. ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿಲ್ಲವೇ?, ಕೇಶವ ಕೃಪಾದಿಂದಲೂ ಫೋನ್ ಹೋಗುತ್ತದೆ. ಯಾರು ಮಾಡಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರದಿಂದ ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದರು.

ಸುನಿಲ್‍ಕುಮಾರ್ ಮಾತು ಮುಂದುವರೆಸಿ, ಮೊನ್ನೆ ಕೂಡ ಕಾನೂನು ಸಚಿವರು ಇದೇ ಆರೋಪ ಮಾಡಿದ್ದರು. ಅವರ ಬಳಿ ಅಧಿಕೃತ ದಾಖಲೆ ಇದ್ದರೆ ಸದನದಲ್ಲಿ ಮಂಡಿಸಲಿ. ವಿವರಣೆ ಕೊಡಲಿ ಎಂದು ಒತ್ತಾಯಿಸಿದರು.

ಆಗ ಕಾನೂನು ಸಚಿವರು ನಮ್ಮ ಆರೋಪದ ಬಗ್ಗೆ ತನಿಖೆ ಮಾಡಿ ಎಂದು ಕೇಳಿ ನಾವು ತನಿಖೆಗೆ ಕೊಡುತ್ತೇವೆ ಎಂದರು.

ಸುರೇಶ್‍ಕುಮಾರ್ ಮಾತನಾಡಿ, ಮೊನ್ನೆ ಕೂಡ ಇದೇ ಆರೋಪವನ್ನು ಎಚ್.ಕೆ.ಪಾಟೀಲರು ಮಾಡಿದ್ದರು. ರಾಜ್ಯಪಾಲರ ಫೋನ್ ಕದ್ದಾಲಿಕೆಯಾಗಿದೆ ಎಂದರ್ಥವಲ್ಲವೇ?, ಮೇಲಿಂದ ಮೇಲೆ ರಾಜ್ಯಪಾಲರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದರು.

ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಾನೂನು ಸಚಿವರು ಆರೋಪ ಮಾಡಿದ್ದಾರೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವರು, ಕೇಂದ್ರದಿಂದ ರಾಜ್ಯಪಾಲರಿಗೆ ಕರೆ ಬರುತ್ತದೆ ಎಂದು ಹೇಳಿದರೆ ನಿಮಗೆ ನೋವಾಗುತ್ತದೆ. ಕೇಂದ್ರ ಗೃಹಸಚಿವಾಲಯದ ಅಧೀನದಲ್ಲಿ ರಾಜ್ಯಪಾಲರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನು ಮಾಡಿದ ಆಪಾದನೆಯನ್ನು ಕೇಂದ್ರ ಸಚಿವರು ನಿರಾಕರಿಸಲಿಲ್ಲ ಎಂದರು. ಆಗ ಸುರೇಶ್‍ಕುಮಾರ್‍ರವರು ನಾನು ಅಪರಾಧ ಮಾಡಿದ್ದೇನೆ ಏಕೆ ನೋಟೀಸ್ ಕೊಟ್ಟಿಲ್ಲ ಎಂದು ಕೇಳುತ್ತಿದ್ದೀರಿ ಅಲ್ಲವೇ ಎಂದರು.

ಅದಕ್ಕೆ ಎಚ್.ಕೆ.ಪಾಟೀಲರು ನಾನು ಅಪರಾಧ ಮಾಡಿಲ್ಲ, ಆಪಾದನೆ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಮತ್ತೊಬ್ಬ ಶಾಸಕ ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯಪಾಲರಿಗೆ ದೆಹಲಿಯಿಂದ ಕರೆ ಬರುವುದು ಇವರಿಗೆ ಹೇಗೆ ಗೊತ್ತಾಯಿತು. ತಪ್ಪನ್ನು ಒಪ್ಪಿಕೊಂಡು ಹೇಳಿಕೆ ವಾಪಸ್? ಪಡೆಯಬೇಕು ಎಂದು ಆಗ್ರಹಿಸಿದರು.
ಅಶೋಕ್ ಮಾತನಾಡಿ, ಎಚ್.ಕೆ.ಪಾಟೀಲರು ಮಾತನಾಡಿದ್ದು ದಾಖಲೆಯಾಗಿದೆ. ರಾಜ್ಯಪಾಲರಿಗೆ ದೆಹಲಿಯಿಂದ ದೂರವಾಣಿ ಕರೆ ಬರುತ್ತದೆ ಎಂದು ಹೇಳಿದ್ದಾರೆ. ಇದು ಕದ್ದಾಲಿಕೆ ಎಂದಲ್ಲವೇ?, ಪ್ರಿಯಾಂಕ್ ಖರ್ಗೆಯವರು ಕೇಶವ ಕೃಪಾದಿಂದ ಫೋನ್ ಬರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಆರ್‍ಎಸ್?ಎಸ್? ಕಚೇರಿ ರಾಜಭವನದ ಟ್ಯಾಪಿಂಗ್ ಮಾಡಲಾಗುತ್ತಿದೆಯೇ? ಇದು ಫೋನ್ ಟ್ಯಾಪಿಂಗ್ ಸರ್ಕಾರವೇ, ನಮ ಫೋನ್ನ್ ಟ್ಯಾಪಿಂಗ್ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಆಗ ಕಾಂಗ್ರೆಸ್? ಶಾಸಕ ಶರತ್ ಬಚ್ಚೆ?ಗೌಡ ತೀವ್ರ ಆಕ್ಷೆ?ಪ ವ್ಯಕ್ತಪಡಿಸಿ ನಿಮ ಬಳಿ ಯಾವ ಆಧಾರ ಇದೆ ಎಂದು ಪ್ರಶ್ನಿಸಿದರು. ಮತ್ತೆ ಮಾತನಾಡಿದ ಕಾನೂನು ಸಚಿವರು, ಸದನದಲ್ಲಿ ಆರೋಪ ಮಾಡಿರುವುದನ್ನು ಕೇಳಿಸಿಕೊಂಡವರು ಉತ್ತರ ಕೊಡಬೇಕಲ್ಲವೇ ಎಂದು ಛೇಡಿಸಿದರು.

ಸುರೇಶ್‍ಕುಮಾರ್ ಮಾತನಾಡಿ, ಜವಾಬ್ದಾರಿ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ ನೀಡಲಾಗಿದೆ. ನಿಮ ಮಾತು ತೂಕದಿಂದ ಇರಬೇಕು. ಬೇರೆಯವರಿಗೆ ಕೆಟ್ಟ ಮೇಲ್ಪಂಕ್ತಿ ಹಾಕುತ್ತಿದ್ದೀರಿ ಎಂದು ಆಕ್ಷೇಪಿಸಿದರು.

ಅಶೋಕ್ ಮಾತನಾಡಿ, ರಾಜ್ಯಪಾಲರಿಂದ ಗೌಪ್ಯತೆಯ ಪ್ರಮಾಣ ವಚನ ಸ್ವಿ?ಕರಿಸಿರುವ ನೀವು ಅವರ ಮೇಲೆ ಆರೋಪ ಮಾಡುವುದು ಸರಿಯೇ ಎಂದಾಗ, ಎಚ್.ಕೆ.ಪಾಟೀಲರು ಸಂವಿಧಾನ ಎತ್ತಿಹಿಡಿಯುವುದು ನಮ ಧರ್ಮ. ಭಾಷಣ ಓದಿಲ್ಲ ಎಂದು ಹೇಳುವುದು ತಪ್ಪೆ? ಎಂದು ಮರು ಪ್ರಶ್ನಿಸಿದರು.

ಆಗ ಅಶೋಕ್‍ರವರು ಎಚ್.ಕೆ.ಪಾಟೀಲರು ಕಾನೂನು ಸಚಿವರಾಗಿರುವುದೇ ಅಗೌರವ. ಅನಾಮಿಕ ವ್ಯಕ್ತಿ ಸದನದಲ್ಲಿ ಬಂದು ಕೂತಿದ್ದ. ಆಗ ಕಾನೂನು ಸಚಿವರ ಜವಾಬ್ದಾರಿ ಏನಾಗಿತ್ತು ಎಂದು ಪ್ರಶ್ನಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರವನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸದನದ ಕಾರ್ಯಕಲಾಪವನ್ನು ಭೋಜನಾ ವಿರಾಮಕ್ಕೆ ಮುಂದೂಡಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳಿವರು…

ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…

6 hours ago

ಹೆಬ್ಬಾಳಿನಲ್ಲಿ ಡ್ರಗ್ಸ್‌ ಲ್ಯಾಬ್‌ ಶಂಕೆ : ಶೆಡ್‌ವೊಂದರ ಮೇಲೆ ಎನ್‌ಸಿಬಿ ದಾಳಿ

ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…

6 hours ago

ನಿಗಮ ಮಂಡಳಿ | ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ

ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…

6 hours ago

ಡಿಜಿಟಲ್‌ ಅರೆಸ್ಟ್‌ ಕುತಂತ್ರ : 1 ಕೋಟಿ ವಂಚನೆ

ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…

7 hours ago

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ಇನ್ನಿಲ್ಲ ; ಬೆಂಗಳೂರು ಚಲೋ ಮುಂದೂಡಿಕೆ

ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್‌ ಸುಬ್ಬರಾವ್‌ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…

8 hours ago

ಮೈಸೂರು | ಮೃಗಾಲಯದ ಯುವರಾಜ ಸಾವು

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…

8 hours ago