ರಾಜ್ಯ

ನಟ ದರ್ಶನ್‌ ಸೆಲ್‌ ಸುತ್ತಮತ್ತ ಇದ್ದ ನಟೋರಿಯಸ್‌ ರೌಡಿಗಳು ಶಿಫ್ಟ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್‌ ಸೆಲ್‌ ಸುತ್ತಾಮುತ್ತಾ ಇದ್ದ ಆರೋಪಿಗಳನ್ನು ಬೇರೆ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ.

ಕಳೆದ ಬಾರಿ ಪರಪ್ಪನ ಅಗ್ರಹಾರದಲ್ಲಿ ನಡೆದ ಅವಾಂತರದಿಂದ ಫುಲ್‌ ಅಲರ್ಟ್‌ ಆಗಿರುವ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ನಟ ದರ್ಶನ್‌ ಇಡಲಾಗಿದ್ದ ಸೆಲ್‌ಗೆ ಬಂದೋಬಸ್ತ್‌ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಟ ದರ್ಶನ್‌ ಸೆಲ್‌ ಸುತ್ತಾಮುತ್ತಾ ಇದ್ದ ನಟೋರಿಯಸ್‌ ರೌಡಿಗಳನ್ನು ಶಿಫ್ಟ್‌ ಮಾಡಲಾಗಿದೆ. ದರ್ಶನ್‌ ಸೆಲ್‌ಗೆ ಹೊಂದಿಕೊಂಡಿರುವ ಸೆಲ್‌ಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.

ಈ ಹಿಂದೆ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಹರಟೆ ಹೊಡೆಯುತ್ತಾ ಕುಳಿತಿದ್ದ ನಟ ದರ್ಶನ್‌ ಫೋಟೋ ವೈರಲ್‌ ಆಗಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ ಬೆನ್ನಲ್ಲೇ ಪೊಲೀಸರು ನಿಗಾ ವಹಿಸಿದ್ದಾರೆ.

ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ನಟ ದರ್ಶನ್‌ ಕುಳಿತುಕೊಂಡು ಸಿಗರೇಟು ಹೊಡೆದಿದ್ದ. ಲ್ಯಾನ್‌ನಲ್ಲಿ ಕುಳಿತು ಕಾಫಿ ಕುಡಿದ ಫೋಟೋಗಳು ವೈರಲ್‌ ಆಗಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಜೈಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕಣಿವೆಗೆ ಉರುಳಿದ ಸೇನಾ ವಾಹನ : 10 ಸೈನಿಕರ ಸಾವು

11 ಯೋಧರಿಗೆ ಗಂಭೀರ ಗಾಯ ಭದೇರ್ವಾ : ದೋಡಾ ಜಿಲ್ಲೆಯ ಥನಾಲಾದ ಮೇಲ್ಭಾಗದ ಪ್ರದೇಶದಲ್ಲಿನ ಭದೇರ್ವಾ-ಚಂಬಾ ರಸ್ತೆಯಲ್ಲಿ ಗುರುವಾರ ಸೇನಾ…

12 mins ago

‘ಬಿಗ್ ಬಾಸ್’ ಗಿಲ್ಲಿಗೆ ಸಿಎಂ ಅಭಿನಂದನೆ!

ಬೆಂಗಳೂರು : ಬಿಗ್ ಬಾಸ್ ಮುಗಿದ ಮೇಲೂ ಗಿಲ್ಲಿ ನಟನ ಕ್ರೇಜ್ ಕಮ್ಮಿಯಾಗಿಲ್ಲ. ಹೋದ ಕಡೆ, ಬಂದಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದು,…

18 mins ago

ಬೆಳ್ಳಿ ಬರೋಬ್ಬರಿ 20 ಸಾವಿರ ರೂ.ಇಳಿಕೆ : ಚಿನ್ನದ ದರದಲ್ಲೂ ದಿಢೀರ್ 4 ಸಾವಿರ ರೂ ಕುಸಿತ

ಹೈದರಾಬಾದ್ : ಕಳೆದ ಕೆಲವು ದಿನಗಳಿಂದ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಇದ್ದಕ್ಕಿದ್ದಂತೆ…

29 mins ago

ಟಿವಿಕೆ ವಿಜಯ್ ಪಕ್ಷಕ್ಕೆ ಸೀಟಿ ಗುರುತು ನೀಡಿದ ಆಯೋಗ

ಚೆನ್ನೈ : ನಟ, ರಾಜಕಾರಣಿ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಚುನಾವಣಾ ಆಯೋಗವು ಗುರುವಾರ ಚಿಹ್ನೆ…

1 hour ago

ಮ.ಬೆಟ್ಟ | ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ ದೃಶ್ಯ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳು ಬೆಟ್ಟದಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

1 hour ago

MGNREGA ಕಾಯ್ದೆಯನ್ನು ಮರುಸ್ಥಾಪಿಸುವವರೆಗೆ ನಮ್ಮ ಹೋರಾಟ ಇರಲಿದೆ : ಸಿಎಂ

ಬೆಂಗಳೂರು : ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ…

2 hours ago