ಮಂಡ್ಯ: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಂದಿಸಲಾಗಿದ್ದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಆರೋಪಿಯು ಇನ್ನು ಮುಂದೆ ಯಾವುದೇ ದ್ವೇಷ ಭಾಷಣ ಮಾಡುವಂತಿಲ್ಲ ಎಂದು ಎಚ್ಚರಿಕೆ ಸೆಷನ್ ನ್ಯಾಯಾಲಯ ತಾಕೀತು ನೀಡಿದೆ. ಒಂದು ವೇಳೆ ದ್ವೇಷ ಭಾಷಣ ಮಾಡಿ ದೂರು ದಾಖಲಾದರೆ ಈಗ ಸಿಕ್ಕಿರುವ ಜಾಮೀನು ರದ್ದಾಗುತ್ತದೆ ಎಂದು ನ್ಯಾಯಾಲು ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪತ್ರಕರ್ತ ನವೀನ್ ಸೂರಿಂಜೆ, “ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವಂತಿಲ್ಲ. ಆರೋಪಿಯು ಯಾವುದೇ ಕಾರಣಕ್ಕೂ ಇಂತಹ ಕೃತ್ಯವನ್ನು ಪುನರಾವರ್ತಿಸಬಾರದು. ದ್ವೇಷ ಭಾಷಣ ಮಾಡಿದ ಬಗ್ಗೆ ದೂರು ದಾಖಲಾದರೆ ಈಗ ಸಿಕ್ಕಿರುವ ಜಾಮೀನು ರದ್ದಾಗುತ್ತದೆ” ಎಂದು ಷರತ್ತು ವಿಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ಮುಂದೆ ಕಲ್ಲಡ್ಕ ಪ್ರಭಾಕರ್ ಭಟ್ ಎಲ್ಲೇ ದ್ವೇಷ ಭಾಷಣ ಮಾಡಿದರೂ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನೀವು ದಾಖಲಿಸಿದ ಎಫ್‌ಐಆರ್ ಗೂ ಜಾಮೀನು ಸಿಗಲ್ಲ, ಈಗ ಶ್ರೀರಂಗಪಟ್ಟಣದಲ್ಲಿ ಸಿಕ್ಕಿರುವ ಜಾಮೀನೂ ರದ್ದಾಗುತ್ತದೆ. ಸ್ವಸ್ಥ ಸಮಾಜಕ್ಕಾಗಿ ಇಷ್ಟು ಮಾಡುವುದು ಅನಿವಾರ್ಯ” “ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಇರುವ ಹಲವು ಖಾಯಿಲೆಗಳು, ವಯಸ್ಪೂ ಸೇರಿದಂತೆ ಕೆಲ ವಿಷಯಗಳನ್ನು ಆಧರಿಸಿ ಕೋರ್ಟ್ ಜಾಮೀನು ನೀಡಿದೆ.
ಬೆಂಗಳೂರು : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7) ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…
ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…
ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…
ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…
ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…
ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…