ರಾಜ್ಯ

ಇಂದಿನಿಂದ ನಂದಿನ ಹಾಲಿನ ದರ ೨ ರೂಪಾಯಿ ಏರಿಕೆ

ಬೆಂಗಳೂರು : ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಹಾಲು ಸಂಗ್ರಹಣೆ ಪ್ರಮಾಣವು ಶೇ.15ರಷ್ಟು ಹೆಚ್ಚಳವಾಗಿದ್ದು ಈ ಹೆಚ್ಚುವರಿ ಹಾಲಿನ ಮಾರಾಟವು ಕೆಎಂಎಫ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈಗಾಗಿ ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ನಿರ್ಧಾರ ಮಾಡಿದೆ.

ಇಂದು ಬೆಳಿಗ್ಗೆಯಿಂದಲೇ ಪರಿಷ್ಕೃತ ದರ ಜಾರಿಯಾಗಿದ್ದು, 50 ಎಂ.ಎಲ್‌. ಹೆಚ್ಚುವರಿ ಹಾಲಿಗೆ ಗ್ರಾಹಕರು ಹೆಚ್ಚುವರಿಯಾಗಿ 2 ರೂ. ಪಾವತಿಸಬೇಕಾಗಿದೆ. ಹೆಚ್ಚುವರಿಯಾಗಿ 50 ಎಂ.ಎಲ್‌. ಹಾಲು ಕೊಡುವುದರಿಂದ ದಿನದಲ್ಲಿ 3.50 ಲಕ್ಷ ಲೀಟರ್ ನೇರವಾಗಿ ಮಾರಾಟವಾಗಲಿದೆ.

ಕೆಎಂಎಫ್‌ನ ನಂದಿನಿ ಬ್ರಾಂಡ್‌ನ ಎಲ್ಲಾ ಮಾದರಿಯ ಹಾಲಿನ ದರ ಪರಿಷ್ಕರಿಸಲಾಗಿದೆ. ಆದರೆ, ಮೊಸರು, ಮಜ್ಜಿಗೆ ಹಾಗೂ ಇತರೆ ಹಾಲಿನ ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸವಿತಾ ಆಕಾಂಕ್ಷ್‌

ಮೂಲತಃ ಮೈಸೂರು ಜಿಲ್ಲೆಯ ಗೆಜ್ಜಗಳ್ಳಿ ಗ್ರಾಮದ ನಿವಾಸಿಯಾಗಿರುವ ನಾನು ಮೈಸೂರಿನ ಜೆಎಸ್‌ ಎಸ್‌ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದೇನೆ. ಬಳಿಕ ಮೈಸೂರಿನ ಸ್ಥಳೀಯ ಮಟ್ಟದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಹಾಗೂ ಪ್ರಾದೇಶಿಕ ದಿನಪತ್ರಿಕೆಯಲ್ಲಿ ಕೆಲಸ ಮಾಡಿದ್ದು, ಆರೂವರೆ ವರ್ಷಗಳ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಾಡುಪ್ರಾಣಿಗಳ ರಕ್ಷಣೆ ಮತ್ತು ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಅಧ್ಯಯನ ಮಾಡುತ್ತಾ ಹೊಸ ಹೊಸ ವಿಷಯ ತಿಳಿದುಕೊಳ್ಳುವುದರಲ್ಲಿ ನನಗೆ ಆಸಕ್ತಿ ಹೆಚ್ಚಿದೆ. ಸಿಗುವ ಒಂದಷ್ಟು ಸಮಯ ಕುಟುಂಬಸ್ಥರೊಟ್ಟಿಗೆ ಕಾಲ ಕಳೆಯುತ್ತೇನೆ. ಜೊತೆಗೆ ವನ್ಯಜೀವಿಗಳ ಕುರಿತ ಪುಸ್ತಕ ಓದುವುದು ನನ್ನ ಮತ್ತೊಂದು ಹವ್ಯಾಸವಾಗಿದೆ.

Recent Posts

ಚನ್ನಪಟ್ಟಣಕ್ಕೆ ಡಿ.ಕೆ ಸುರೇಶ್‌ ಕೊಡುಗೆ ಏನು: ನಿಖಿಲ್‌ ಪ್ರಶ್ನೆ

ಚನ್ನಪಟ್ಟಣ: ಡಿಸಿಎಂ ಡಿಕೆ ಶಿವಕುಮಾರ್‌ ಅವರು ನಿನ್ನೆ ಕ್ಷೇತ್ರದ ಪ್ರಚಾರ ವೇಳೆ ಚನ್ನಪಟ್ಟಣಕ್ಕೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕೊಡುಗೆ…

1 hour ago

ವಕ್ಫ್‌ ವಿರುದ್ಧ ನಮ್ಮ ಆಸ್ತಿ ಉಳಿಸಿಕೊಳ್ಳಲು ಪ್ರತಿಭಟನೆ ಅಗತ್ಯ; ಪ್ರತಾಪ್‌ ಸಿಂಹ

ಮಡಿಕೇರಿ: ರಾತ್ರೋರಾತ್ರಿ ಈ ಭಾಗದ ಜನತೆಯ ಜಮೀನು ವಕ್ಫ್‌ ಆಸ್ತಿವೆಂದು ಸೃಷ್ಠಿಯಾಗುತ್ತಿದೆ. ಹೀಗಾಗಿ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ…

2 hours ago

ಕಾಂಗ್ರೆಸ್ ಭಾಗ್ಯಲಕ್ಷ್ಮೀ ಯೋಜನೆಗೆ ಹಣ ನೀಡಲಾಗದೇ ದಿವಾಳಿಯಾಗಿದೆ: ಬಿಎಸ್‌ವೈ ಟೀಕೆ

ಬಳ್ಳಾರಿ: ತಾನು ಮುಖ್ಯಮಂತ್ರಿಯಾಗಿದ್ದ ವೇಳೆ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ರೂಪಿಸಿದ್ದ ಭಾಗ್ಯಲಕ್ಷ್ಮೀ ಬಾಂಡ್‌ ಯೋಜನೆಗೆ ಹಣ ನೀಡಲಾಗದೇ ಆ ಯೋಜನೆಯನ್ನೂ…

2 hours ago

ಮೈಸೂರು ರೈಲ್ವೆ ವೇಳಾಪಟ್ಟಿ: ನವೆಂಬರ್ 10 ಭಾನುವಾರ

ಮೈಸೂರಿನಿಂದ ಹೊರಡುವ ರೈಲುಗಳು ಕ್ರ.ಸಂ -  ರೈಲು ಸಂಖ್ಯೆ - ರೈಲಿನ ಹೆಸರು - ಮೈಸೂರಿನಿಂದ ಎಲ್ಲಿಗೆ    -…

2 hours ago

ಕೇರಳದಿಂದ ಅಸುರಕ್ಷಿತ ಆಹಾರ ಸಾಗಾಟ ಆರೋಪ: ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ

ಮಡಿಕೇರಿ: ಕೇರಳದಿಂದ ಕೊಡಗು ಜಿಲ್ಲೆಗೆ ಅಸುರಕ್ಷಿತ ಆಹಾರ ಪದಾರ್ಥ ಸಾಗಾಟ ಮಾಡುತ್ತಿರುವ ಆರೋಪದ ಹಿನ್ನೆಲೆ ಆಹಾರ ಇಲಾಖೆಯ ಅಧಿಕಾರಿಗಳು ಶನಿವಾರ…

3 hours ago

ಜನಸಾಮಾನ್ಯರ ಅಭಿವೃದ್ದಿಯೇ ಕಾಂಗ್ರೆಸ್‌ ಗುರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕಲ್ಯಾಣ (ಶಿಗ್ಗಾವಿ): ಕಾಂಗ್ರೆಸ್ ಪಕ್ಷ ಸದಾ ಬಡವರ ಬಗ್ಗೆ ಚಿಂತಿಸುವ ಪಕ್ಷ. ಜನ ಸಾಮಾನ್ಯರ ಅಭಿವೃದ್ಧಿಯೇ ಪಕ್ಷದ ಗುರಿ ಎಂದು…

3 hours ago