ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂಳಿರುವ ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು ಸರಿಯಾದ ರೀತಿ ತನಿಖೆ ನಡೆಯುತ್ತಿಲ್ಲ. ಸಾಕ್ಷಿ, ಪಿರ್ಯಾದುದಾರರ ಹೇಳಿಕೆ ಲೀಕ್ ಆಗ್ತಾ ಇದೆ. ಫಿರ್ಯಾದುದಾರ ಸಾಕ್ಷಿಗೆ ರಾಜ್ಯ ಸರ್ಕಾರ ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡ ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಪ್ರಕರಣ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿಲ್ಲ, ಕೂಡಲೇ ಸರ್ಕಾರ ಪ್ರಮಾಣಿಕ ಅಧಿಕಾರಿಗಳ ಒಳಗೊಂಡ ಎಸ್‌ಐಟಿ ರಚನೆ ಮಾಡಬೇಕು ಎಸ್‌ಐಟಿ ತನಿಖೆಯನ್ನು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಮಾಡಬೇಕೆಂದು ಮನವಿ ಮಾಡಿದರು.
ಸಾಕ್ಷಿ, ಪಿರ್ಯಾದುದಾರರ ಬಳಿ ಸಾಕ್ಷಿಗಳು ಇವೆ. ಮೂರು ವಾರವಾದರೂ ಸಾಕ್ಷಿ ಪಿರ್ಯಾದುದಾರ ಹೇಳಿಕೆ ಪಡೆದು ಸರಿಯಾಗಿ ತನಿಖೆ ಮಾಡುತ್ತಿಲ್ಲ. ಇದರ ಹಿಂದೆ ಕಾಣದ ಶಕ್ತಿಗಳು ಇವೆ ಎಂದು ಆರೋಪಿಸಿದರು.
ಧರ್ಮಸ್ಥಳಕ್ಕೆ ಕೋಟ್ಯಾಂತರ ಭಕ್ತರು ಹೋಗುತ್ತಾ ಇದ್ದಾರೆ. ಹತ್ಯೆಗಳು ನಡೆದಿದೆ ಎಂದು ಒಬ್ಬ ಹೇಳುವಾಗ ತೀರ ಮಂದಗತಿ ಕಾರ್ಯ ಸೂಕ್ತ ಅಲ್ಲ. ಸರ್ಕಾರವನ್ನು ಸರಿಯಾದ ರೀತಿ ತೆಗೆದುಕೊಂಡು ಹೋಗುವ ಕೆಲಸ ಮಾಧ್ಯಮ ಮಾಡಬೇಕಿದೆ. ಈ ಪ್ರಕರಣವನ್ನು ಮುಂದೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ, ತಪ್ಪಿತಸ್ಥರನ್ನು ಹುಡುಕಿ ಸತ್ಯಶೋಧನೆ ಮಾಡಬೇಕಿದೆ ಎಂದರು.
ಸತ್ಯಶೋಧನೆ ಮಾಡಬೇಕಿದೆ
ನಾನೊಬ್ಬ ನಿವೃತ್ತ ನ್ಯಾಯಮೂರ್ತಿ ಆಗಿ ಈ ಅನ್ಯಾಯ ನೋಡಿ ಪ್ರತಿಕ್ರಿಯಿಸಿದ್ದೇನೆ. ಕಾನೂನಿನ ಅನ್ವಯ ಸತ್ಯ ಶೋಧನೆ ಮಾಡಬೇಕಿದೆ. 100 ಮೃತ ದೇಹಗಳ ಹೂತು ಹಾಕಲಾಗಿದೆ ಎಂಬ ಮಾಹಿತಿ ಇದೆ. ಸಾಕ್ಷಿ ಪಿರ್ಯಾದುದಾರನಿಗೂ ಒತ್ತಡ ಹಾಕಲಾಗುತ್ತಿದೆ ಎಂದು ಅವನೇ ಹೇಳುತ್ತಾ ಇದ್ದಾನೆ. ಹೀಗಾಗಿ ಸಾಕ್ಷಿ ಪಿರ್ಯಾದುದಾರರನಿಗೆ ಭದ್ರತೆ ನೀಡಬೇಕು. ಈತನಿಗೆ ಏನಾದರೂ ಆದರೆ ಡಿಜಿಪಿ, ಗೃಹಸಚಿವರು ಕಾರಣ ಆಗುತ್ತಾರೆ ಎಂದರು.
ವಕೀಲರಿಗೂ ಬೆದರಿಕೆ
ಸಾಕ್ಷಿ ಪರವಾಗಿ ನಿಂತ ವಕೀಲರಿಗೂ ಬೆದರಿಕೆ ಹಾಕುತ್ತಾ ಇದ್ದಾರೆ. ಸಾಕ್ಷಿ, ವಕೀಲರಿಗೆ ತೊಂದರೆ ಆದರೆ ಡಿಜಿಪಿ, ಗೃಹಸಚಿವರು ಕಾರಣ ಆಗ್ತಾರೆ. ಸುದ್ದಿಗಳಿಗೆ ಪ್ರತಿಭಂದಕಾಜ್ಞೆ ಏಕೆ ತರುತ್ತಾ ಇದ್ದರೆ ಎಂದು ಗೊತ್ತಾಗುತ್ತಿಲ್ಲ. ಯಾರು ತರ್ತಾ ಇದ್ದಾರೆ ಅನ್ನೋದು ಮುಖ್ಯ ವಿಚಾರ. ಮೂಲಭೂತ ಹಕ್ಕನ್ನ ಕಿತ್ತುಕೊಳ್ಳುವ ಕೆಲಸ ಮಾಡಬಾರದು. ವಾಕ್ ಸ್ವಾತಂತ್ರ್ಯ ಮಿತಿಮೀರಿದಾಗ ಮಾತ್ರ ಪ್ರತಿಬಂಧ ಹೇರಬಹುದು. ಸಾಕ್ಷಿ ಪಿರ್ಯಾದುದಾರ ಹೇಳುವ ಹೇಳಿಕೆ ಸುದ್ದಿ ಮಾಡುವುದನ್ನು ನಿರ್ಬಂಧ ಹೇರಬಾರದು. ಪತ್ರಿಕಾ ಸ್ವಾತಂತ್ರ್ಯಕ್ಕೆ ತೊಂದರೆ ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
367 ಸಂತ್ರಸ್ತೆಯರು
ಧರ್ಮಸ್ಥಳದಲ್ಲಿ 367 ಬಾಲಕಿಯರು ಮತ್ತು ಯುವತಿಯರು ಅಪರಿಚಿತ ಶವಗಳಾಗಿ ಪತ್ತೆಯಾಗಿದ್ದಾರೆ. ಪತ್ತೆಯಾಗದ ಶವಗಳೂ ಇನ್ನೂ ಇರುವ ಶಂಕೆಯಿದೆ. ಅವರೆಲ್ಲರಿಗೂ ನ್ಯಾಯ ಸಿಗಬೇಕಾದರೆ ತನಿಖೆ ನಡೆಯಬೇಕು ಎಂದು ವಕೀಲ ಎಸ್.ಬಾಲನ್ ಒತ್ತಾಯಿಸಿದರು.
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…