ಬೆಂಗಳೂರು : “ಹಿಂದೂ ರಾಷ್ಟ್ರ ಕಲ್ಪನೆ ಈ ದೇಶದ ಕೋಟ್ಯಾಂತರ ಜನರ ಸಂಕಲ್ಪವಾಗಿದೆ, ಅದಕ್ಕೆ ಅವಕಾಶ ನೀಡದಿರಲು ನೀವು ಮೊಘಲರಲ್ಲ, ಮೊಘಲರೇ ಮತ್ತೆ ಹುಟ್ಟಿ ಬಂದರೂ ಈಗದು ಸಾಧ್ಯವಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಹಿಂದೂಗಳು ಉಳಿಯಬೇಕಾದರೆ ಹಿಂದೂ ರಾಷ್ಟ್ರವಾಗಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ಹಿಂದೂ ರಾಷ್ಟ್ರ ನಿರ್ಮಾಣ ಆಗುವುದಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಪೂಜ್ಯ ಪೇಜಾವರ ಶ್ರೀಗಳ ‘ಹಿಂದೂ ರಾಷ್ಟ್ರದ ಪ್ರತಿಪಾದನೆ’ ಇನ್ನೊಬ್ಬರನ್ನು ಹೊರಗಟ್ಟುವುದಲ್ಲ, ಬಲವಂತ ಮತಾಂತರವಲ್ಲ, ಎಲ್ಲರನ್ನೂ ಒಳಗೊಂಡ ನೈಜ ಭಾರತೀಯತೆಯನ್ನು ರಕ್ಷಿಸುವುದು ಭಾರತದ ಅಸ್ತಿತ್ವವಾಗಿದೆ ಎಂದು ಅಭಿಪ್ರಯಾಪಟ್ಟಿದ್ದಾರೆ.
ಭಾರತವೆಂದರೆ ಹಿಂದುತ್ವ, ಹಿಂದುತ್ವ ಎಂದರೆ ಬಹುತ್ವ, ವಿವಿಧತೆಯನ್ನು ತನ್ನ ಒಡಲಲ್ಲಿರಿಸಿಕೊಂಡು ಏಕತೆಯನ್ನು ಮೆರೆಯುತ್ತಿರುವುದೇ ಭಾರತೀಯತೆಯಾಗಿದೆ. ಈ ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲು ಶತ ಶತಮಾನಗಳಿಂದಲೂ ಹೊರಗಿನವರ ಆಕ್ರಮಣ ನಡೆಯುತ್ತಲೇ ಇದೆ, ಮೊಘಲರ ನಿರಂತರ ದಾಳಿಗೆ ತುತ್ತಾಗಿ ಅಸಂಖ್ಯಾತ ಹಿಂದೂ ದೇವಾಲಯಗಳು ಭಗ್ನಗೊಂಡಿರುವುದಕ್ಕೆ, ನಾಮಾವಶೇಷಗೊಂಡಿರುವುದಕ್ಕೆ ಇಂದಿಗೂ ಸಾಕ್ಷಿ, ಪುರಾವೆಗಳು ನಮ್ಮ ಕಣ್ಣಿಗೆ ರಾಚುತ್ತಿವೆ. ಎಷ್ಟೇ ದುರಾಕ್ರಮಣಗಳು ನಡೆದರೂ ಬಹುತ್ವ ಸಂಸ್ಕೃತಿಯ ಹಿಂದುತ್ವದ ಭಾರತ ಗಟ್ಟಿಯಾಗಿ ಉಳಿಯಲಿದೆ.
ಸ್ವಾತಂತ್ರ್ಯ ನಂತರವೂ ಮತಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುತ್ವವನ್ನು ದಮನ ಮಾಡಲು ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಕುತಂತ್ರವನ್ನು ಬಗ್ಗು ಬಡಿಯಲೆಂದೇ ‘ಭಾರತೀಯ ಜನತಾ ಪಾರ್ಟಿ’ ಜನ್ಮತಾಳಿದ್ದು. ಕಾಂಗ್ರೆಸ್’ನ ಸ್ವಾರ್ಥ ಹಾಗೂ ನಿರಂಕುಶ ಪ್ರಭುತ್ವದ ಆಡಳಿತವನ್ನು ಮೂಲೆಗಟ್ಟಿ ದೇಶದ ಜನರು ಇಂದು ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿ ಅದರ ನೆರಳಲ್ಲಿ ಅಭಿವೃದ್ಧಿಯ ಭಾರತವನ್ನು ಕಾಣುತ್ತಿದ್ದಾರೆ.
ರಾಜಕೀಯ ಭೂಪಟದಲ್ಲಿ ‘ಅಳಿಸಿ ಹೊಗುತ್ತಿರುವ ಕಾಂಗ್ರೆಸ್ ಅಸ್ತಿತ್ವವನ್ನು ಮೊದಲು ಉಳಿಸಿಕೊಳ್ಳಿ’, ಆ ನಂತರ ರಾಷ್ಟ್ರದ ಕುರಿತು ನೀವು ಮಾತನಾಡುವಿರಂತೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಹೇಳಿದ್ದೇನು? : ಭಾರತದಲ್ಲಿ ಬರೀ ಹಿಂದುಗಳಿಲ್ಲಾ, ಕ್ರಿಶ್ಚಿಯನ್, ಮುಸ್ಲಿಂ, ಬೌಧ್ಧ, ಜೈನ ಎಲ್ಲರೂ ಇದ್ದಾರೆ. ಭಾರತವನ್ನು ಕೇವಲ ಹಿಂದೂ ರಾಷ್ಟ್ರ ಎಂದಯ ಘೋಷಿಸಲು ಆಗುವುದಿಲ್ಲ. ಇದು ಬಿಜೆಪಿ ಸಿದ್ದಾಂತವಾಗಿದ್ದು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು.
ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…
ಲಕ್ಷ್ಮೀ ಕಾಂತ್ ಕೊಮಾರಪ್ಪ ಕೃಷಿ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದಂತೆ ತಿದ್ದುಪಡಿ ತರಲು ಆಗ್ರಹ ಸೋಮವಾರಪೇಟೆ: ಕೊಡಗು ಜಿಲ್ಲೆಯ ಅರ್ಧದಷ್ಟು…
ಪ್ರಶಾಂತ್ ಎಸ್. ಬೊಂತಗಳ್ಳಿ ಸೇತುವೆ, ತಂತಿಗುಳ್ಳು ತಿರುವಿನಲ್ಲಿ ಹಂಪ್, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಗ್ರಾಮಸ್ಥರ ಆಗ್ರಹ ಮೈಸೂರು: ಬನ್ನೂರು ಮುಖ್ಯ ರಸ್ತೆಯಲ್ಲಿನ…
ಕೆ.ಬಿ.ರಮೇಶನಾಯಕ ಮೈದಾನ ಸಂರಕ್ಷಿಸಿಕೊಳ್ಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ಚೆಂಡು ಮೈದಾನ ಈಗ ಬಿಡಾಡಿ ದನಗಳ,…