ಅಂಕಣಗಳು

ಜೇನಿನಿಂದ ಕೋಟಿ ಗಳಿಸುತ್ತಿರುವ ಜಯಶಂಕರ್

• ಎಚ್.ವಿ.ದಿವ್ಯ

ಉದ್ಯೋಗ, ವ್ಯವಹಾರಗಳನ್ನು ಮಾಡಿದವರು ಬಿಲಿಯನ್ನಿಯರ್‌ಗಳಾಗಿ ಗುಣಮಟ್ಟದ ಜೀವನ ಸಾಗಿಸುವುದನ್ನು ನಾವು ನೋಡಿದ್ದೇವೆ. ಆದರೆ ರೈತರೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ನಾವು ಎಂದಾದರೂ
ಕಂಡಿದ್ದೇವೆಯೇ? ಸಾಮಾನ್ಯ ಇಲ್ಲ. ಆದರೆ ಇಲ್ಲೊಬ್ಬ ರೈತರು ಹೈನುಗಾರಿಕೆಯಿಂದಲೇ ಇಂದು ಲಕ್ಷಾಂತರ ರೂ. ಆದಾಯ ಪಡೆದು ಬಿಲೇನಿಯರ್ ರೈತರಾಗಿದ್ದಾರೆ.

ಜೇನು ಸಾಕಾಣಿಕೆಯ ಮೂಲಕ ಬಿಲೇನಿಯರ್ ಆದವರು ಕೃಷಿಕ ಜಯಶಂಕರ್. ಮೂಲತಃ ತಮಿಳುನಾಡಿನ ಕೊಯಂಬತ್ತೂರಿನವರು. ಆದರೆ ಕಳೆದ ಮೂರು ತಲೆಮಾರು ಗಳಿಂದ ಇವರು ಕರ್ನಾಟಕದಲ್ಲೇ ನೆಲೆ ಕಂಡಿದ್ದು, ನಂಜನಗೂಡಿನ ಹೆಡಿಯಾಲ ಸಮೀಪದ ಗಣೇಶಪುರ ಗ್ರಾಮದ ನಿವಾಸಿಯಾಗಿದ್ದಾರೆ.

46ವರ್ಷ ವಯಸ್ಸಿನ ಜಯಶಂಕರ್ ಓದಿದ್ದು, ಕೇವಲ 8ನೇ ತರಗತಿಯಾದರೂ ಕೃಷಿಯಲ್ಲಿ ಅಪಾರ ಜ್ಞಾನ ಸಂಪಾದಿಸಿಕೊಂಡಿದ್ದಾರೆ 1995ರ ಸಮಯದಿಂದ ಕೇರಳದಿಂದ ಕರ್ನಾಟಕಕ್ಕೆ ಜೇನು ಪೆಟ್ಟಿಗೆಗಳನ್ನು ಇಟ್ಟುಕೊಂಡು ಬರುತ್ತಿದ್ದವರಿಗೆ ಸಹಾಯಕರಾಗಿ ಕೆಲಸ ಆರಂಭಿಸಿ ಜೇನು ಕೃಷಿಯ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿಕೊಂಡರು. 2003ರ ನಂತರ ತಾವೇ ಜೇನು ಸಾಕಲು ಆರಂಭಿಸಿದರು.

1995ರ ಸಂಧರ್ಭದಲ್ಲಿ ವಿವಾಹದ ನಂತರ ಪಶು ಸಂಗೋಪನೆ ಆರಂಭಿಸಿದ ಇವರು 10 ಹಸುಗಳನ್ನು ಹೊಂದಿದ್ದರು. ಆದರೆ ದಿಢೀರನೆ ಮೂರು ಹಸುಗಳು ಸಾವನ್ನಪ್ಪಿದ್ದರಿಂದ ಅಂದು ಬೇಸತ್ತು ಆತ್ಮಹತ್ಯೆಗೂ ಯತ್ನಿಸಿದರು. ನಂತರ ಕೋಳಿ ಸಾಕಣೆಯಲ್ಲಿಯೂ ನಷ್ಟ ಅನುಭವಿಸಿದರು. ಆದರೆ ತಾವು ಬಿಡುವಿನ ವೇಳೆ ಮಾಡುತ್ತಿದ್ದ ಜೇನು ಕೃಷಿಯನ್ನೇ ಮೂಲ ವೃತ್ತಿಯನ್ನಾಗಿ ಏಕೆ ಮಾಡಿಕೊಳ್ಳಬಾರದು ಎಂದು ಆಲೋಚಿಸಿ ಜೇನು ಕೃಷಿ ಆರಂಭಿಸಿದರು. ಇದರಿಂದ ಉತ್ತಮ ಲಾಭ ಕಂಡ ಇವರು 2009ರಲ್ಲಿ 1.2 ಲಕ್ಷ ರೂ. ಆದಾಯ ಗಳಿಸಿದರು. ನಂತರದಲ್ಲಿ 10 ಪೆಟ್ಟಿಗೆಯಿಂದ ಜೇನು ಕೃಷಿಯನ್ನು ಪ್ರಾರಂಭಿಸಿ ದರು. ಬಳಿಕ 2009ರಲ್ಲಿ ಮಂಡ್ಯದಿಂದಲೇ ಇವರ ಬಳಿ ಜೇನುಹುಳಗಳನ್ನು ಕೊಂಡುಕೊಳ್ಳಲು ವಿವಿಧ ಇಲಾಖೆಯ ವರು ಬಂದರು. ತೋಟಗಾರಿಕಾ ಕಾಲೇಜಿನ ಡಾ. ಮುತ್ತುರಾಜ್‌ರವರ ಮಾರ್ಗದರ್ಶನದಿಂದ ತೋಟಗಾರಿಕಾ ಇಲಾಖೆ ಹಾಗೂ ವಿವಿಧ ಕಡೆ ಜೇನುಹುಳುಗಳನ್ನು ಮಾರಲು
ಪ್ರಾರಂಭಿಸಿದರು. 2013ರ ಹೊತ್ತಿಗೆ 300 ಪೆಟ್ಟಿಗೆಗಳಷ್ಟು ಜೇನು ಕೃಷಿ ವಿಸ್ತಾರ ಗೊಂಡಿತು.

2015ರಲ್ಲಿ ಐಸಿಎಆರ್ ಜೆಎಸ್‌ ಎಸ್ ಕೃಷಿ ವಿಜ್ಞಾನ ಕೇಂದ್ರದ ಸಂಪರ್ಕಕ್ಕೆ ಬಂದ ಜಯಶಂಕರ್ ಅವರಿಗೆ ಜೇನು ಕೃಷಿಯಲ್ಲಿ ಇದ್ದ ಅನುಭವವನ್ನು ಗಮನಿಸಿ ಕೆವಿಕೆಯ ಜೇನು ಕೃಷಿ ತರಬೇತಿಗಾಗಿ ಇವರನ್ನು ನೇಮಕ ಮಾಡಲಾಯಿತು. ಅಲ್ಲದೆ ಕೆವಿಕೆ ಸಂಪರ್ಕದಲ್ಲಿದ್ದ ಇತರೆ ರೈತರಿಗೆ ಜೇನುಹುಳ, ಪೆಟ್ಟಿಗೆ, ಜೇನು ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಪರ್ಕ ಕಲ್ಪಿಸಿಕೊಡಲಾಯಿತು. ಪರಿಣಾಮ ಇಂದು ಅವರ ನಿವ್ವಳ ಆದಾಯ 1.2 ಕೋಟಿ ರೂ. ಗಳಷ್ಟಿದೆ. ಇವರ ವ್ಯಾಪಾರ ವಹಿವಾಟು 2.75 ಕೋಟಿ ರೂ. ಗಳಿಷ್ಟಿದೆ. ಕೋವಿಡ್‌ಗೂ ಮುನ್ನ 600-700 ಪೆಟ್ಟಿಗೆಗಳಷ್ಟು ಜೇನು ಮಾರಾಟ ಮಾಡುತ್ತಿದ್ದ ಇವರು ಈಗ 5,000ದಷ್ಟು ಜೇನು ಪೆಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರೊಂದಿಗೆ 15 ಜನ ನುರಿತ ಕೆಲಸಗಾರರಿಗೆ ಉದ್ಯೋಗ ನೀಡಿದ್ದಾರೆ. ಅವರ ಸಹಾಯದಿಂದ ಜೇನು ಪೆಟ್ಟಿಗೆ ತಯಾರಿ, ಜೇನು ಮೌಲ್ಯವರ್ಧನೆ, ಗಾಣದೆಣ್ಣೆ ತಯಾರಿ ಮಾಡುತ್ತಿದ್ದಾರೆ. ಇವರ ಬಳಿ ಇರುವುದು ಕೇವಲ ಒಂದು ಹೆಕ್ಟೇರು ಜಮೀನು ಅಷ್ಟೇ. ಇವರು ತಮ್ಮ ಜೇನು ಪೆಟ್ಟಿಗೆಗಳನ್ನು ಇತರೆ ರೈತರ ಜಮೀನುಗಳಲ್ಲಿ ಇಡುತ್ತಾರೆ. ಜೇನಿನಿಂದ ಉತ್ತಮ ಪರಾಗ ಸ್ಪರ್ಶ ಆಗುವುದರಿಂದ ಇತರೆ ಜಮೀನಿನ ಬೆಳೆಗಳ ಇಳುವರಿಯೂ ಹೆಚ್ಚಾಗಲಿದ್ದು, ಇತರೆ ರೈತರಿಗೂ ಅನುಕೂಲವಾಗಲಿದೆ.

ಇವರು ಒಂದು ಜೇನು ಕುಟುಂಬಕ್ಕೆ 1,200, ಪೆಟ್ಟಿಗೆ ಹಾಗೂ ಹುಳಕ್ಕೆ 4,500, ಜೇನು 1 ಕೆಜಿಗೆ 300 ರೂ. ಹಾಗೂ ಮೇಣ ವನ್ನು 500ರೂ.ಗಳಿಗೆ ಮಾರಾಟ ಮಾಡುತ್ತಾರೆ. ತಮ್ಮಲ್ಲಿ ಖರೀದಿಸುವ ಎಲ್ಲ ರೈತರಿಗೂ ಉಚಿತ ತರಬೇತಿ
ನೀಡುವುದು ಇವರ ವಿಶೇಷತೆ. ಇತ್ತೀಚೆಗೆ ಜೇನಿನ ಮುಳ್ಳನ್ನು ಬಳಸಿಕೊಂಡು ಮಂಡಿನೋವು ಮತ್ತು ಬೆನ್ನು ನೋವಿಗೆ ಚಿಕಿತ್ಸೆ ನೀಡಲೂ ಆರಂಭಿಸಿದ್ದಾರೆ.

‘ನನ್ನ ಮಕ್ಕಳನ್ನೂ ನಾನು ಜೇನು ಕೃಷಿಗೇ ತರುತ್ತೇನೆ. ಜೇನನ್ನು ನಾಶ ಮಾಡಿದರೆ 5 ವರ್ಷ ಯಾವುದೇ ಪ್ರಾಣಿ ಸಂಕುಲ ಇರಲು ಸಾಧ್ಯವಿಲ್ಲ. ಯಾರೂ ಜೇನನ್ನು ಸಾಯಿಸಬೇಡಿ, ಹೆಚ್ಚೇನೇನಾದರೂ ಇದ್ದರೆ ನನಗೆ ಕರೆ ಮಾಡಿ, ಮಾರ್ಗದರ್ಶನ ಮಾಡುತ್ತೇನೆ ಎಂದು ಎಲ್ಲರಲ್ಲೂ ಮನವಿ ಮಾಡುತ್ತಾರೆ. ಜೇನು ಪೆಟ್ಟಿಗೆ ಇಟ್ಟರೆ ಸಮಾಜ ಸೇವೆ ಮಾಡಿದಂತೆ ಎನ್ನುತ್ತಾರೆ ಜಯಶಂಕರ್, ಕರ್ನಾಟಕದಲ್ಲಿ ಜೇನಿನ ಉತ್ಪತ್ತಿ ಹೊಂಗೆ ಹೂವಿನಿಂದ ಮಾರ್ಚಿಯಿಂದ ಪ್ರಾರಂಭವಾಗಿ ಮೇ ತಿಂಗಳಿಗೆ ಮುಗಿಯುತ್ತದೆ. ರಬ್ಬರ್, ಹುರುಳಿ, ಕಾಡಿನ ಗಿಡಗಳಿರುವ ಕಡೆ ಹೆಚ್ಚು ಇಳುವರಿ ಪಡೆಯಬಹುದು.

ಇವರ ಕಾರ್ಯಚಟುವಟಿಕೆಯನ್ನು ಗುರುತಿಸಿ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಇವರ ಹೆಸರನ್ನು ಮಹೇಂದ್ರ ಟ್ರ್ಯಾಕ್ಟರ್‌ರವರ ಕಡೆಯಿಂದ ನೀಡಲಾಗುವ ರಾಷ್ಟ್ರಮಟ್ಟದ ‘ಬಿಲೇನಿಯರ್ ಫಾರ್ಮರ್’ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. ಈ ಪ್ರಶಸ್ತಿಗೆ ಆಯ್ಕೆಯಾದ ಇವರನ್ನು ನವದೆಹಲಿಯಲ್ಲಿ ಡಿ.6-8ರಂದು ನಡೆದ ಕಾರ್ಯಕ್ರಮದಲ್ಲಿ ಬಿಲೇನಿಯರ್ ಫಾರ್ಮರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. (ಲೇಖಕಿ ಸುತ್ತೂರಿನ ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಪ್ರಭಾರ ಮುಖ್ಯಸ್ಥರು) hvdivya28@gmail.com

andolanait

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

7 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

7 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

8 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

8 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

8 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

8 hours ago