ರಾಜ್ಯ

ಕಾಶ್ಮೀರದಲ್ಲಿ ಭಯೋತ್ಪಾದಕರ ಮನೆ ಇದ್ದದ್ದು ಮೊದಲೇ ಗೊತ್ತಿರಲಿಲ್ಲವೇಕೆ? ಕೇಂದ್ರಕ್ಕೆ ಸಚಿವ ಸಂತೋಷ್‌ ಲಾಡ್‌ ಪ್ರಶ್ನೆ

ಬೆಂಗಳೂರು : ಕಾಶ್ಮೀರದಲ್ಲಿ ಉಗ್ರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಉಗ್ರರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಟ್ಟವರು ಯಾರು? ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ಸೇನಾ ವ್ಯವಸ್ಥೆ ಯಾರ ನಿಯಂತ್ರಣದಲ್ಲಿದೆ. ಉಗ್ರರು ಮನೆ ಕಟ್ಟಿಕೊಂಡಿರುವುದು ಇವರಿಗೆ ಗೊತ್ತಿರಲಿಲ್ಲವೇ? ಎಂದು ಕೇಂದ್ರ ಸರ್ಕಾರವನ್ನು ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‍ಗೆ ತೆರಳಲು ಸೈನಿಕರಿಗೆ ಐದು ನಿಮಿಷ ಸಾಕಿತ್ತು. ಆದರೆ ಎರಡು ಗಂಟೆ ವಿಳಂಬವಾಗಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.

ಎಲ್ಲವನ್ನೂ ತಪ್ಪು ಮಾಹಿತಿಗಳ ಮೂಲಕ ದಾರಿ ತಪ್ಪಿಸುವ ಅನಗತ್ಯವಾಗಿ ರಾಜಕೀಯವಾಗಿ ವೈಭವೀಕರಿಸಿರುವ ಪ್ರಯತ್ನಗಳಾಗುತ್ತಿವೆ. ವೈಫಲ್ಯಗಳ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಪಹಲ್ಗಾಮ್‍ನ 7 ಕಿ.ಮೀ. ಅಂತರದಲ್ಲಿ ವಾಯುಸೇನಾ ನೆಲೆಯಿದೆ. ಅದರ ಸಮೀಪವೇ ನೌಕಾ ನೆಲೆಯಿದೆ. ವಾಯುನೆಲೆಯಲ್ಲಿ ಹೆಲಿಕಾಪ್ಟರ್ ಆನ್ ಮಾಡಲು ಎರಡು ನಿಮಿಷ, ಸ್ಥಳಕ್ಕೆ ತೆರಳಲು ಐದು ನಿಮಿಷ ಸಾಕಿತ್ತು. ಆದರೆ ಎರಡು ಗಂಟೆಯಾದರೂ ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಬರಲಿಲ್ಲ. ಸ್ಥಳೀಯರೇ ಸಂತ್ರಸ್ತರನ್ನು ರಕ್ಷಣೆ ಮಾಡಿದರು. ಬಿಜೆಪಿಯವರು ಹಿಂದೂ-ಮುಸ್ಲಿಂ ಎಂದು ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಗುಪ್ತಚರ ವ್ಯವಸ್ಥೆ ಇದ್ದರೂ ಈ ದಾಳಿಯ ಬಗ್ಗೆ ಮಾಹಿತಿ ಇಲ್ಲದೆ ವೈಫಲ್ಯವಾಗಿದೆ. ಬಿಜೆಪಿಯವರು ಮಾಧ್ಯಮಗಳ ಮೂಲಕ ತಮ್ಮ ಪರವಾಗಿ ಕ್ರೈಂ ಸೃಷ್ಟಿ ಮಾಡುತ್ತಾರೆ. ಪಾಕಿಸ್ತಾನಕ್ಕೆ ಸಿಂಧೂ ನದಿಯ ನೀರು ನಿಲ್ಲಿಸಲಾಗಿದೆ ಎಂದು ಹೇಳಿದರೆ ಜನ ಅದನ್ನು ನಂಬುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದದಲ್ಲಿ ನೀರು ನಿಲ್ಲಿಸಲು ಸಾಧ್ಯವೇ ಎಂಬ ಯೋಚನೆ ಯಾರೂ ಮಾಡುವುದಿಲ್ಲ. ಟಿವಿ ಸ್ಕ್ರೀನ್‍ನಲ್ಲಿ ಕುಳಿತು ಬಿಜೆಪಿಯವರು ಹೇಳಿದಂತೆ ಭಯೋತ್ಪಾದರ ನಿರ್ಮೂಲನೆ, ಆಕ್ರಮಣ ಎಂದೆಲ್ಲಾ ಅಬ್ಬರಿಸುತ್ತಿದ್ದಾರೆ. ಇದರಲ್ಲಿ ಯಾವುದಾದರೂ ನಿಜ ಅಡಗಿದೆಯೇ? ಎಂದು ಪ್ರಶ್ನಿಸಿದರು.

ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ದಿನಕ್ಕೊಂದು ವದಂತಿಗಳನ್ನು ಹರಿಯಬಿಡುತ್ತಿದೆ. ಕೇಂದ್ರ ಸಚಿವ ಪಿಯೂಷ್ ಘೋಯಲ್ ರಾಷ್ಟ್ರದ ಜನರಿಗೆ ದೇಶಭಕ್ತಿಯೇ ಇಲ್ಲ ಎಂದಿದ್ದಾರೆ. ಅವರು ಹೇಗೆ ಬೇಕಾದರೂ ಮಾತನಾಡಬಹುದು. 2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೂ 11 ಗಂಭೀರ ಸ್ವರೂಪದ ಭಯೋತ್ಪಾದಕ ದಾಳಿಗಳಾಗಿವೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು. ಯಾರು ರಾಜೀನಾಮೆ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ಹೆಚ್ಚಿದೆ. ಅದಕ್ಕನುಗುಣವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿರಬೇಕಿತ್ತು, ಎಷ್ಟು ಹೆಚ್ಚಿಸಲಾಗಿದೆ ಎಂಬ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಈ ಹಿಂದೆ ಮೋದಿಯವರು ಪೆಟ್ರೋಲ್, ಡೀಸೆಲ್, ಡಾಲರ್, ಚಿನ್ನ ಧಾರಣೆಗಳ ಬಗ್ಗೆ ಏನು ಹೇಳಿದರು ಎಂದು ವಿಡಿಯೋಗಳಿವೆ. ಅವುಗಳನ್ನು ಒಮ್ಮೆ ಮರುಪ್ರಸಾರ ಮಾಡಬೇಕು. ಬಿಜೆಪಿಯವರು ಅಂತಹ ಎಲ್ಲಾ ಹೇಳಿಕೆಗಳಿಗೂ ಉತ್ತರ ಕೊಡಬೇಕು ಎಂದು ತಿರುಗೇಟು ನೀಡಿದರು.

ಪಹಲ್ಗಾಮ್‍ನಲ್ಲಿ ಹಿಂದೂಗಳೆಂದು ಕೇಳಿ ಗುಂಡು ಹೊಡೆಯುತ್ತಿರಲಿಲ್ಲ ಎಂದು ಶಿವಮೊಗ್ಗದ ಹೆಣ್ಣುಮಗಳನ್ನು ಹೇಳಿದ್ದನ್ನು ಆಧರಿಸಿ ಸಚಿವ ಆರ್.ಬಿ.ತಿಮಾಪುರ್ ಹೇಳಿರಬಹುದು. ಶಿವಮೊಗ್ಗದ ಹೆಣ್ಣುಮಗಳು ಹೇಳಿರುವುದು ಸರಿ ಇರಬಹುದು. ಆದರೆ ಅಲ್ಲಿ ಬೇರೆ ರೀತಿಯ ಘಟನೆಗಳೇ ನಡೆದಿವೆ ಎಂದು ಹೇಳಿದರು.

ಬಿಜೆಪಿ ಈ ಹಿಂದೆ ಪುಲ್ವಾಮ ಘಟನೆ ನಡೆದಾಗ ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆದ್ದಿತ್ತು. ಈಗ ಬಿಹಾರದ ಚುನಾವಣೆ ಇದೆ. ಮೋದಿ ದಾಳಿಯಾಗುತ್ತಿದ್ದಂತೆ ಅಲ್ಲಿಗೆ ತೆರಳಿದ್ದಾರೆ. ಹಿಂದೂ, ಮುಸ್ಲಿಂ ಎಂದು ಬಿಜೆಪಿಯವರು ಒಡಕಿನ ಮಾತುಗಳನ್ನಾಡುತ್ತಿದ್ದಾರೆ. ದೇಶದಲ್ಲಿ ಶೇ.80ರಷ್ಟು ಹಿಂದೂಗಳಿದ್ದಾರೆ. ಯಾರ ಬಳಿ ಹೆಚ್ಚಿನ ಆಸ್ತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರದವರು ರೈಲ್ವೆ ಟಿಕೆಟ್ ಹೆಚ್ಚು ಮಾಡಿದರು. ಅದರ ಪರಿಣಾಮ ಹಿಂದೂಗಳ ಮೇಲಾಗಲಿಲ್ಲವೇ?, ಕುಂಭಮೇಳ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಆದಾಯ ಮಾಡಿಕೊಂಡರು. ರೈಲ್ವೆ ಟಿಕೆಟ್ ಬೆಲೆಗೆ ರಿಯಾಯಿತಿ ಕೊಟ್ಟಿದ್ದರೇ? ಎಂದು ಪ್ರಶ್ನಿಸಿದರು.

ಮೋದಿ ಪಾಕಿಸ್ತಾನದ ಮೇಲೆ ಇನ್ನೇನು ಬಾಂಬ್ ಹಾಕಿಯೇಬಿಟ್ಟರು ಎಂಬರ್ಥದಲ್ಲಿ ಸುದ್ದಿ ಸಂಸ್ಥೆಗಳು ಅಜೆಂಡಾ ಸೆಟ್ ಮಾಡುತ್ತಿವೆ. ಜನ ಅದನ್ನು ನಿಜ ಎಂದು ನಂಬುತ್ತಿದ್ದಾರೆ. ಈ ಹಿಂದೆ ಗುಜರಾತ್‍ನಲ್ಲಿ 21 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ಸಿಕ್ಕಿತ್ತು. ಅದರಲ್ಲಿ ಭಯೋತ್ಪಾದಕರ ಕೈವಾಡವಿದೆ ಎಂಬ ಅನುಮಾನ ಕೇಳಿಬಂದಿತ್ತು. ಆದರೆ ಅದು ಎಲ್ಲೂ ಚರ್ಚೆಯಾಗಲಿಲ್ಲ. ಅಂಡಮಾನ್, ನಿಕೋಬಾರ್, ಮುಂಬೈನಲ್ಲೂ ಮಾದಕವಸ್ತು ಜಪ್ತಿಯಾಯಿತು. ಅದರ ಹಿಂದಿರುವವರು ಯಾರು? ಎಂದು ಈವರೆಗೂ ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೆ ಪರೀಕ್ಷೆಯಲ್ಲಿ ತಾಳಿ ಮತ್ತು ಜನಿವಾರಕ್ಕೆ ಕಡಿವಾಣ ಹಾಕಲಾಗಿದೆ. ಬಿಜೆಪಿಯವರು ಈಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಸಂತೋಷ್ ಲಾಡ್ ಸವಾಲು ಹಾಕಿದರು.

ಆಂದೋಲನ ಡೆಸ್ಕ್

Recent Posts

ಪಾದಯಾತ್ರೆ ವೇಳೆ ಚಿರತೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ : ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…

1 hour ago

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣ : ಜಿ.ಟಿ.ದಿನೇಶ್‌ಗೆ ಹೈಕೋರ್ಟ್ ಶಾಕ್

ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…

1 hour ago

ಸಮೀಕ್ಷೆ | ಫೆ.10ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ

ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…

2 hours ago

ಅಕ್ರಮ ರೆಸಾರ್ಟ್‌ ವಿರುದ್ದದ ಅನಿರ್ದಿಷ್ಟ ಪ್ರತಿಭಟನೆ ಅಂತ್ಯ

ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…

2 hours ago

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಗೆಹಲೋತ್‌ ನಿರಾಕರಣೆ

ಬೆಂಗಳೂರು : ನೆರೆಯ ತಮಿಳುನಾಡು ಮತ್ತು ಕೇರಳದಂತೆ ಕರ್ನಾಟಕದಲ್ಲೂ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಏರ್ಪಡುವ ಲಕ್ಷಣಗಳು ಗೋಚರಿಸಿದ್ದು,…

2 hours ago

ಯುವಕರೇ, ನಿಯಮ ಪಾಲಿಸಿ ಜೀವ ಉಳಿಸಿ : ಎಸ್‌ಪಿ ಶೋಭಾರಾಣಿ ಮನವಿ

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ.ಶೋಭಾರಾಣಿ ಮಂಡ್ಯ : ಯುವಜನತೆ ರಸ್ತೆ ಸುರಕ್ಷತಾ…

3 hours ago