ರಾಜ್ಯ

ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ: ಬಸವರಾಜ ಬೊಮ್ಮಾಯಿ

ಗದಗ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ ಪತ್ನಿಯ ಸಹೋದರಿ ಹುಬ್ಬಳ್ಳಿಯಲ್ಲಿ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಪರೂಪದ ರಾಜಕಾರಣಿ, ದೂರದೃಷ್ಟಿ ಉಳ್ಳ ಪ್ರಧಾನಿಯಾಗಿದ್ದರು. ದೇಶವನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಿದವರು.

ಆರ್ ಬಿಐ ಗೌರ್ನರ್ ಆಗಿ, ವಿಶ್ವಬ್ಯಾಂಕಿನ ಭಾರತದ ಪ್ರತಿನಿಧಿಯಾಗಿ ಭಾರತ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವರು ಸಂಪೂರ್ಣ ಜೀವನ ಮೀಸಲಿಟ್ಟಿದ್ದರು. ಅದರ ಪರಿಣಾಮ ಭಾರತ ಸಧೃಡ ಆರ್ಥಿಕ ಸ್ಥಿತಿಯಲ್ಲಿದೆ ಎಂದು ಹೇಳಿದರು.

ಇದರ ಜೊತೆಗೆ ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರವಾದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ ಪತ್ನಿಯ ಸಹೋದರಿ ಹುಬ್ಬಳ್ಳಿಯಲ್ಲಿ ಇರುವುದು ವಿಶೇಷ. ನಾವು ಯಾವಾಗಲೂ ಭೇಟಿ ಆದಾಗ ಹುಬ್ಬಳಿಯ ಬಗ್ಗೆ ಕೇಳುತ್ತಿದ್ದರು. ಬಹಳ ಕಾಳಜಿ ವಹಿಸುತ್ತಿದ್ದರು.

ಬೆಂಗಳೂರಿನ ಅಭಿವೃದ್ಧಿಯ ಬಗ್ಗೆಯೂ ಕಾಳಜಿ ಇದ್ದ ಮನಮೋಹನ್ ಸಿಂಗ್ ಅವರು ಬೆಂಗಳೂರು ಮೆಟ್ರೋ ಯೋಜನೆಗೆ ಸುಮಾರು 5 ಸಾವಿರ ಕೋಟಿ ರೂ. ನೀಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಬಹಳ ಇದೆ. ಅವರ ಅಗಲಿಕೆಯಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ತಿಳಿಸಿದರು.

andolana

Recent Posts

ನಂಜನಗೂಡು| ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತಕ್ಕೆ ಲಾಕ್‌ ಆದ ಕಾವೇರಿ ನಿಗಮದ ಇಂಜಿನಿಯರ್‌

ನಂಜನಗೂಡು: ಲಂಚ ಸ್ವೀಕರಿಸುವಾಗಲೇ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್‌ ಕಾವೇರಿ ರಂಗನಾಥನ್‌ ಹಾಗೂ ಅಕೌಂಟ್‌ ಸೂಪರಿಡೆಂಟ್‌ ಉಮಾ ಮಹೇಶ್‌…

4 hours ago

ನಾಳೆ ಕುಶಾಲನಗರದಲ್ಲಿ ಕಾಡಾನೆ ಕಾರ್ಯಾಚರಣೆ

ಕುಶಾಲನಗರ: ಇಲ್ಲಿನ ಗ್ರಾಮಾಂತರ ಭಾಗದಲ್ಲಿ ನಾಡಿಗೆ ಬಂದು ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸಲು ನಾಳೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ…

4 hours ago

ಕುರ್ಚಿ ಉಳಿಸಿಕೊಳ್ಳಲೆಂದೇ ವಿಜಯೇಂದ್ರರಿಂದ ಜನಾಕ್ರೋಶ ಯಾತ್ರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.…

4 hours ago

ವೆಬ್ ಸೀರಿಸ್‍ನಲ್ಲಿ ದೀಕ್ಷಿತ್ ಶೆಟ್ಟಿ; ಜಿಯೋ ಹಾಟ್‍ಸ್ಟಾರ್‍ನಲ್ಲಿ ‘ಟಚ್ ಮಿ ನಾಟ್‍’

‘ದಿಯಾ’ ಚಿತ್ರದ ನಂತರ ದೀಕ್ಷಿತ್‍ ಶೆಟ್ಟಿ ಬೇರೆ ಭಾಷೆಗಳತ್ತ ಪ್ರಯಾಣ ಬೆಳೆಸಿರುವುದು ಗೊತ್ತೇ ಇದೆ. ಈಗಾಗಲೇ ಅವರು ಕೆಲವು ತೆಲುಗು…

6 hours ago

ಪುನೀತ್ ಅಭಿಮಾನಿಯ ಕಥೆ ಹೇಳುವ ‘ಪುನೀತ್‍ ನಿವಾಸ’

ಪುನೀತ್ ರಾಜಕುಮಾರ್‍ ನೆನಪಲ್ಲಿ ಈಗಾಗಲೇ ಕೆಲವು ಚಿತ್ರಗಳು ಪ್ರಾರಂಭವಾಗಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿವೆ. ಈ ಮಧ್ಯೆ, ಪುನೀತ್‍…

6 hours ago

ಮುಖ್ಯಮಂತ್ರಿಗಳಿಂದ ಬಿಡುಗಡೆ ಆಯಿತು ‘ವೀರ ಚಂದ್ರಹಾಸ’ ಟ್ರೇಲರ್‍

ರವಿ ಬಸ್ರೂರು ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ ‘ವೀರ ಚಂದ್ರಹಾಸ’ ಚಿತ್ರವು ಏಪ್ರಿಲ್‍ 18ರಂದು ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.…

6 hours ago