ಬೆಂಗಳೂರು: ಲೊಕಸಭೆ ಚುನಾವಣೆಯಿಂದ ತೆರೆವಾದ ಮೂರು ಕ್ಷೇತ್ರಗಳಗೆ ನವೆಂಬರ್ 13ರಂದು ಮರು ಚುನಾವಣೆ ನಡೆಯಲಿದ್ದು ಈ ಪೈಕಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯು ಬಹಳ ಕುತೂಹಲ ಮೂಡಿಸಿದೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಮೈತ್ರಿ ಪಕ್ಷಗಳನ್ನು ಗಟ್ಟಿಗೊಳಿಸುವುದು ನಮ್ಮ ಕರ್ತವ್ಯ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಬಿಜೆಪಿ ತೊರೆದಿರುವ ವಿಷಯವನ್ನು ಕ್ಷೇತ್ರದ ಜನತೆ ಗಮನಿಸುತ್ತಾರೆ. ಉಪಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ, ಹಾಗೇಯೇ ಇಳಿ ವಯಸ್ಸಿನಲ್ಲಿಯೂ ಮಾಜಿ ಪ್ರಧಾನಿ ದೇವೇಗೌಡರು ಬಂದು ಪ್ರಚಾರ ಮಾಡುತ್ತಾರೆ ಎಂಬ ವಿಷಯ ಕೇಳಿ ಕಾಂಗ್ರೆಸ್‌ಗೆ ಭಯ ಶುರುವಾಗಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.
ಸಾಮಾಜಿಕ ನ್ಯಾಯದ ಮುಖ್ಯ ಪರಿಕಲ್ಪನೆಯಾಗಿರುವ ಒಳಮೀಸಲಾತಿ ಜಾರಿ ಬಗ್ಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇಲ್ಲ, ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿಯೇ ಒಳಜಗಳವಿದೆ, ವಿಷಯ ಮುಚ್ಚಿ ಹಾಕಿ ರಾಜ್ಯದ ಜನರಲ್ಲಿ ಗೊಂದಲ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಾಗಿದ ಹಣ್ಣಲ್ಲ ಮಂತ್ರಕ್ಕೆ ಉದುರಿದ ಹಣ್ಣಲ್ಲ ಗುದ್ದಿ ಗುದ್ದಿ ಮಾಗಿಸಿದ ಹಣ್ಣು ಮತ್ತೆ ಮೈಮರೆತರೆ ಕೈಯಿಂದಲೇ ಮಾಯವಾಗುವ ಹಣ್ಣು ಕೈಗೆ…
ನಕಲಿ ನೋಟುಗಳು, ನಕಲಿ ಆಹಾರ ಪದಾರ್ಥಗಳು, ನಕಲಿ ದಾಖಲೆಗಳು, ನಕಲಿ ಅಧಿಕಾರಿಗಳು, ನಕಲಿ ಪೊಲೀಸರು, ನಕಲಿ ಸುದ್ದಿ ವಾಹಿನಿಗಳು ಅಷ್ಟೇ…
ಚನ್ನಪಟ್ಟಣದ ಕಲ್ಪಶ್ರೀ ಪ್ರದರ್ಶನ ಕಲೆಗಳು ಕೇಂದ್ರ ಟ್ರಸ್ಟ್ ವತಿಯಿಂದ ನವಂಬರ್ 5ರ ಸಂಜೆ 5.30ಕ್ಕೆ ಮಲೇಷಿಯಾದ ಕೌಲಾಲಂಪುರದ ಸುಭಾಷ್ ಚಂದ್ರ…
ಮಡಿಕೇರಿ: ನಾಳೆ ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಯುವುದರಿಂದ ಮಧ್ಯಾಹ್ನ 2 ಗಂಟೆ ಬಳಿಕ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.…
ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ…
ಎಚ್.ಡಿ.ಕೋಟೆ: ಕಳೆದ ಕೆಲ ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ಸೆರೆಗೆ ದಸರಾ ಆನೆ ಮಹೇಂದ್ರನನ್ನು ಬಳಸಿಕೊಳ್ಳಲಾಗಿದೆ.…