ರಾಜ್ಯ

ಲೋಕಸಭಾ ಚುನಾವಣೆ: ಬಿಜೆಪಿ ಎರಡನೇ ಪಟ್ಟಿ ರಿಲೀಸ್‌; ಮೈಸೂರಿಗೆ ಯದುವೀರ್‌ ಅಭ್ಯರ್ಥಿ!

ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಪಕ್ಷವು ರಾಜ್ಯದ 20 ಕ್ಷೇತ್ರಗಳು ಸೇರಿದಂತೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಪ್ರಕಟ ಮಾಡಿದೆ. ಎರಡನೇ ಪಟ್ಟಿಯಲ್ಲಿ ಒಟ್ಟು 72 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿದ್ದು, ಮೈಸೂರಿಗೆ ಅಚ್ಚರಿಯ ಆಯ್ಕೆಯಂತೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಟಿಕೆಟ್‌ ನೀಡಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಸಂಸದ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೈ ತಪ್ಪಿದೆ.

ರಾಜ್ಯದ 20 ಕ್ಷೇತ್ರಗಳಿಗೆ ಕಮಲ ಕಲಿಗಳ ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಕೆಲ ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌ ಆಗಿದೆ.‌ ಅಚ್ಚರಿ ಬೆಳವಣಿಗೆಯಲ್ಲಿ ಚಾಮರಾಜನಗರದ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಅಳಿಯನಿಗೂ ಟಿಕೆಟ್‌ ಕೈ ತಪ್ಪಿದ್ದು, ಎಸ್‌. ಬಾಲರಾಜ್‌ ಅವರ ಪರ ಕೇಂದ್ರ ಬ್ಯಾಟ್‌ ಬೀಸಿದೆ. ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯನ್ನಾಗಿಸಿದರೆ, ಡಾ. ಮಂಜುನಾಥ್‌ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಸಲು ಬಿಜೆಪಿ ಹೈ ಕಮಾಂಡ್‌ ಮುಂದಾಗಿದೆ.

ರಾಜ್ಯದ 20 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ.

ಚಿಕ್ಕೋಡಿ – ಅಣ್ಣಸಾಹೇಬ್ ಶಂಕರ್ ಜೊಲ್ಲೆ ,

ಬಾಗಲಕೋಟೆ – ಪಿಸಿ ಗಡ್ಡಿಗೌಡರ್

ಬಿಜಾಪುರ – ರಮೇಶ್ ಜಿಗಿಜಿಣಗಿ ,

ಗುಲ್ಬರ್ಗ – ಉಮೇಶ್ ಜಾದವ್ ,

ಬೀದರ್ – ಭಗವತ್ ಖುಬಾ ,

ಕೊಪ್ಪಳ – ಬಸವರಾಜ್ ಕ್ಯಾವತೋರ್

ಬಳ್ಳಾರಿ – ಬಿ ಶ್ರೀರಾಮುಲು

ಹಾವೇರಿ – ಬಸವರಾಜ್ ಬೊಮ್ಮಾಯಿ

ಧಾರವಾಡ – ಪ್ರಹ್ಲಾದ್ ಜೋಶಿ

ದಾವಣಗೆರೆ – ಗಾಯತ್ರಿ ಸಿದ್ದೇಶ್ವರ

ಶಿವಮೊಗ್ಗ – ಬಿ ವೈ ರಾಘವೇಂದ್ರ

ಉಡುಪಿ ಚಿಕ್ಕಮಗಳೂರು – ಕೋಟಾ ಶ್ರೀನಿವಾಸ್ ಪೂಜಾರಿ

ದಕ್ಷಿಣ ಕನ್ನಡ – ಬ್ರಿಜೇಶ್ ಚೌಟಾ

ತುಮಕೂರು – ವಿ ಸೋಮಣ್ಣ

ಮೈಸೂರು – ಯದುವೀರ್ ಕೃಷ್ಣದತ್ತ ಒಡೆಯರ್

ಚಾಮರಾಜನಗರ – ಎಸ್ ಬಾಲರಾಜ್

ಬೆಂಗಳೂರು ಗ್ರಾಮಾಂತರ – ಡಾ ಸಿ.ಎನ್ ಮಂಜುನಾಥ್

ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ

ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ

ಬೆಂಗಳೂರು ಸೆಂಟ್ರಲ್ – ಪಿಸಿ ಮೋಹನ್

andolanait

Recent Posts

ಮಂಡ್ಯ | ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

ಮಂಡ್ಯ : ತಾಲೂಕಿನ ಸೂನಗಹಳ್ಳಿ-ಬೂತನಹೊಸೂರು ನಡುವಿನ ಹೆಬ್ಬಾಳ ಕಟ್ಟೆ ಬಳಿ ಕಬ್ಬಿನ ಗದ್ದೆಯಲ್ಲಿ ಬುಧವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.…

2 hours ago

ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ದಾಳಿ : ಇರಾನಿನ ಕ್ಷಿಪಣಿ ತಾಣ ನಾಶ

ಟೆಹ್ರಾನ್ : ಇರಾನ್ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ…

4 hours ago

ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ

ಬೆಂಗಳೂರು : ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹತ್ಯೆ, ಹಲ್ಲೆ ಮತ್ತು ಬೆದರಿಕೆ ಹಾಕುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ…

5 hours ago

ಮೈಸೂರು ನಗರದಲ್ಲಿ ಮಳೆ ; ತಂಪಾದ ಇಳೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ…

6 hours ago

ಯುಗಾದಿ ಸಂಭ್ರಮ : ಮೈಸೂರಲ್ಲಿ ಖರೀದಿ ಜೋರು

ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ…

7 hours ago

ನಾಳೆ ಧುರಂಧರ್-2 ಬಿಡುಗಡೆ : ಎಲ್ಲಾ ದಾಖಲೆ ಮುರಿಯುವ ನಿರೀಕ್ಷೆ

ಮುಂಬೈ : ಆದಿತ್ಯ ಧರ್‌ ನಿರ್ದೇಶನದ, ರಣವೀರ್‌ ನಟನೆಯ ಧುರಂಧರ್-2 ಚಿತ್ರದ ಎರಡನೇ ಭಾಗವು ನಾಳೆ(ಮಾರ್ಚ್.‌19) ಬಿಡುಗಡೆಯಾಗಲಿದೆ. ಕಳೆದ ವರ್ಷ…

7 hours ago