ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮುಡಾ ಹಗರಣ ಕುರಿತು ಸಿದ್ದರಾಮಯ್ಯ ಕುಟುಂಬದ ಮೇಲೆ ಆರೋಪ ಮಾಡಿದ್ದರು. ಸಿಎಂ ಪತ್ನಿ ಹೆಸರಿನ ಆಸ್ತಿ ಮುಡಾ ಸ್ವತ್ತಾಗಿದ್ದು, ಸತ್ತವರ ಹೆಸರಿನಲ್ಲಿ ಜಮೀನು ಡಿನೋಟಿಫಿಕೇಶನ್ ಆಗಿದೆ ಎಂದು ಆರೋಪಿಸಿದ್ದರು. ಇದೀಗ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಉರುಳಾಡುತ್ತಿದ್ದರು. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಇದೀಗ ಗಿನ್ನಿಸ್ ದಾಖಲೆಗೆ ಸಾಕಾಗುವಷ್ಟು ಸುಳ್ಳು ಹೇಳಿದ್ದಾರೆ. ಮಂತ್ರಿ ಸ್ಥಾನಕ್ಕೆ ಗೌರವಕೊಟ್ಟು ೧೦ % ಸುಳ್ಳು ಹೇಳುವುದು ಕಡಿಮೆ ಮಾಡಿ. ಮುಡಾ ಹಗರಣದ ಆರೋಪ ಮಾಡಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೀಲ ನಕ್ಷೆ ತೋರಿಸಿದರು. ನನ್ನ ಬಳಿಯೂ ನೀಲ ನಕ್ಷೆ ಇದೆ. ಕುಮಾರಸ್ವಾಮಿ ಅವರು ನನಗೆ ೧೦ ನಿಮಿಷ ಟೈಂ ಕೊಡಲಿ,ದಾಖಲೆ ಹಿಡಿದು ಮಾಧ್ಯಮಗಳ ಜೊತೆ ಬರುತ್ತೇನೆ ಎಂದು ಸವಾಲು ಹಾಕಿದರು.
ಅಲ್ಲದೆ ಸಿಎಂ ಪತ್ನಿ ಪಾರ್ವತಿಯ ಬಗ್ಗೆ ದಾಖಲೆ ಇಟ್ಟು ಆರೋಪ ಮಾಡಲಿ. ಸುಮ್ಮನೆ ನೀವೇ ಸುಳ್ಳು ಸೃಷ್ಠಿ ಮಾಡಿಕೊಳ್ಳುತ್ತಿದ್ದೀರಾ ಎಂದು ಕಿಡಿಕಾರಿದರು. ಬಳಿಕ ನಿಂಗ ಬಿನ್ ಜವರಾ ದಲಿತಾ ಸಮುದಾಯಕ್ಕೆ ಸೇರಿದವರು. ಕೆಸರೆ ಗ್ರಾಮದಲ್ಲಿ ೨೯೮೫ ರಲ್ಲಿ ಮೈಸೂರು ಡಿಸಿ ಬಹಿರಂಗ ಹರಾಜಿನಲ್ಲಿ ಜಮೀನು ನೀಡಿದ್ದರು. ನಿಂಗ ಎಂಬುವವರಿಗೆ ೧೦೦ ಗೆ ಕೆಸರೆ ಗ್ರಾಮದಲ್ಲಿ ೩.೧೬ ಎಕರೆ ಜಮೀನು ನೀಡಿದ್ದಾರೆ. ನಿಂಗಪ್ಪಗೆ ಮೂರು ಜನ ಮಕ್ಕಳು. ಇವರ ಜಮೀನು ಸೇರಿ ೧೯೯೨ ರಲ್ಲಿ ಮುಡಾ ೬೦ ಸರ್ವೆ ನಂಬರ್ ಗಳನ್ನು ಭೂಸ್ವಾಧಿನಕ್ಕೆ ನೋಟಿಫಿಕೇಷನ್ ಆಗುತ್ತೆ. ೧೯೯೨ ರಲ್ಲಿ ಜಮೀನಿಗೆ ಅವಾರ್ಡ್ ಕೂಡ ಆಗುತ್ತದೆ. ಅವಾರ್ಡ್ ನೊಟೀಸ್ ಅನ್ನು ನಿಂಗಪ್ಪ ಅವರ ಕುಟುಂಬಕ್ಕೆ ನೀಡಲಾಗಿದೆ ಎಂದು ವಿವರಿಸಿದರು.
ಜಮೀನು ಪಾರ್ವತಿ ಸಿದ್ದರಾಮಯ್ಯ ಗೆ ಬಂದಿದ್ದೆ ೨೦೧೦ ರ ಬಳಿಕ. ಈ ೩.೧೬ ಎಕರೆ ಡೀನೋಟಿಫೈ ಅಗಿದ್ದು, ೧೯೯೮ ರಲ್ಲಿ ಆಗ ಜಮೀನಿನ ಮಾಲಿಕತ್ವ ಇದ್ದಿದ್ದು ನಿಂಗ ಹೆಸರಲ್ಲಿ ಎಂದು ವಿವರಿಸಿದರು. ೨೦೦೫ ರಲ್ಲಿ ಜಮೀನು ಕನ್ವರ್ಷನ್ ಆಗುತ್ತದೆ. ಮುಡಾ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕಿತ್ತು. ಮುಡಾ ಜಮೀನು ವಿಚಾರದಲ್ಲಿ ತಪ್ಪು ಮಾಡಿದೆ. ಮುಡಾ ನಡವಳಿಯಲ್ಲೆ ತಪ್ಪಾಗಿದೆ ಎಂಬುವುದು ಗೊತ್ತಾಗುತ್ತದೆ. ಮುಡಾ ಸ್ಕ್ಯಾಮ್ ಅಲ್ಲ,ಇದು ಸ್ಕ್ಯಾಮ್ ಅಂತ ದಯವಿಟ್ಟು ಹೇಳಬೇಡಿ ಎಂದರು
ಅಲ್ಲದೆ ಕುಮಾರಸ್ವಾಮಿಗೆ ಟ್ಯೂಷನ್ ಕೊಟ್ಟ ಮೇಷ್ಟ್ರು ಸರಿಯಲ್ಲ. ವ್ಯಕ್ತಿಗಳ ಹೆಸರಲ್ಲಿ ಡಿನೋಟಿಫಿಕೇಷನ್ ಆಗಲ್ಲ. ಸರ್ವೆ ನಂಬರ್ ಆಧರಿಸಿ ನೋಟಿಫಿಕೇಷನ್ ಡಿನೋಟಿಫಿಕೇಷನ್ ಆಗುತ್ತದೆ. ಯಾರೋ ಟೈಮ್ ಮಾಡಿದ್ದನ್ನ ತಂದು ಬಿಡುಗಡೆ ಮಾಡಬೇಡಿ ಸ್ವಾಮಿ ಎಂದು ವಾಗ್ದಾಳಿ ನಡೆಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಹಲವಾರು ರಾಜ್ಯ, ಹಲವಾರು ಧರ್ಮ, ಹಲವಾರು ಆಹಾರ ವೈವಿಧ್ಯತೆ, ಹಲವಾರು ಭಾಷೆ, ಹಲವಾರು ಸಂಸ್ಕ ತಿಗಳು…
ಕೊಡಗು ಜಿಲ್ಲೆಯಲ್ಲಿಯೂ ಕಾಣಿಸಿಕೊಳ್ಳುತ್ತಿರುವ ರೋಗ; ಹತೋಟಿಗೆ ಔಷಧಿ ಜೊತೆಗೆ ಸೂಕ್ತ ಪರಿಹಾರಕ್ಕೆ ಒತ್ತಾಯ ಮಡಿಕೇರಿ: ವಾಣಿಜ್ಯ ಬೆಳೆಯಾಗಿ ಕೃಷಿಕರ ಬದುಕಿಗೆ ಆಶ್ರಯವಾಗಿರುವ…
ಚಾ.ನಗರದ ತರಕಾರಿ ಮಾರುಕಟ್ಟೆ, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯಗಳು; ಜನರಿಗೆ ಸಮಸ್ಯೆ ಚಾಮರಾಜನಗರ: ನಗರದಲ್ಲಿನ ಎರಡು ಸಾರ್ವಜನಿಕ…
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…