hd kumaraswamy
ಬೆಂಗಳೂರು : ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ದುರಸ್ಥಿ ಮಾಡುವ ಬದಲು ಉದ್ಯಮಿ ಕಿರಣ್ ಮುಜುಂದಾರ್ ಶಾ ಅವರನ್ನು ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಮೇಲೆ ಚಾಟಿ ಬೀಸಿದರು.
ಬೆಂಗಳೂರಿನ ಯಲಹಂಕದಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (ICAR) 33ನೇ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಕೃಷಿ ಕೀಟ ಜೈವಿಕ ನಿಯಂತ್ರಣ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಶಾ ಅವರು ಹೇಳಿದ್ದು ಒಂದೆಡೆ ಇರಲಿ, ದಿನನಿತ್ಯವೂ ಮಾಧ್ಯಮಗಳು ತೋರಿಸುತ್ತಿರುವುದು ಸುಳ್ಳೇ? ವಾಸ್ತವಾಂಶವನ್ನು ಮಾಧ್ಯಮಗಳೇ ತೋರಿಸುತ್ತಿವೆ. ಗುಂಡಿಗಳನ್ನು ಮುಚ್ಚಿ ಸಮಸ್ಯೆ ಬಗೆಹರಿಸುವುದು ಬಿಟ್ಟು ಶಾ ಅವರನ್ನು ಟೀಕಿಸುವುದರಲ್ಲಿ ಈ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಮಗ್ನರಾಗಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಟಿ ಟೀಕಿಸಿದರು.
ಇದನ್ನು ಓದಿ: ಮೈ-ಬೆಂ ಹೆದ್ದಾರಿಯ ಸರ್ವಿಸ್ ರಸ್ತೆ ಸಮಸ್ಯೆ ಪರಿಶೀಲಿಸಿದ ಶಾಸಕ : ಅಭಿವೃದ್ಧಿ ಕೆಲಸಕ್ಕೆ ಸೂಚನೆ
ರಾಜ್ಯ ಕಾಂಗ್ರೆಸ್ ಸರ್ಕಾರವು ಜನರ ಕೆಲಸ ಮಾಡುವುದು ಬಿಟ್ಟು ಕ್ಷುಲ್ಲಕ ವಿಚಾರಗಳ ಮೇಲೆ ಗಮನವಿಟ್ಟು ಸಮಯ ಪೋಲು ಮಾಡುತ್ತಿದೆ. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ ಉದ್ಯಮಿ ಕಿರಣ್ ಮುಜುಂದಾರ್ ಶಾ ಅವರ ಟ್ವೀಟ್ ಗೆ ಈ ಸರ್ಕಾರ ಪ್ರತಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಒಂದು ಸರ್ಕಾರದ ವರ್ತನೆ ಇರಬೇಕಾದದ್ದು ಹೀಗಲ್ಲ ಎಂದು ಸಚಿವರು ಹೇಳಿದರು.
ರಸ್ತೆಗುಂಡಿಗಳಿಂದಾಗಿ ಸಾಕಷ್ಟು ಬೆಂಗಳೂರಿನಲ್ಲಿ ಜನರಿಗೆ ಬಹಳ ತೊಂದರೆ ಆಗಿದೆ. ನಾನು ಸಿಎಂ ಆಗಿದ್ದಾಗ ನನ್ನ ಕಾಲದ ಎರಡೂ ಅವಧಿಯಲ್ಲೂ ಗುಂಡಿಗಳ ಬಗ್ಗೆ ಯಾವ ಉದ್ಯಮಿಗಳೂ ಟೀಕೆ ಮಾಡಲಿಲ್ಲ. 2006-07ರಲ್ಲಿ 59 ರಸ್ತೆಗಳ ಅಗಲೀಕರಣಕ್ಕೆ ಮಂಜೂರಾತಿ ನೀಡಿ ಐದಾರು ತಿಂಗಳಲ್ಲೇ ಮುಗಿಸಲಾಗಿತ್ತು. ಇವರಿಗೆ ಕೆಲಸ ಮಾಡಲು ಏನು ಅಡ್ಡಿ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಈಗಲೂ ಇವರು ಮಾಡುತ್ತಿರುವ ಕೆಲಸಗಳು ನನ್ನ ಅವಧಿಯಲ್ಲಿ ನಾನು ಮಂಜೂರಾತಿ ನೀಡಿದ್ದು. ಈ ಸರ್ಕಾರಕ್ಕೆ ಜನರ ಕೆಲಸ ಮಾಡುವುದು ಬಿಟ್ಟು ವಿನಾಕಾರಣ ಕಾಲಹರಣ ಮಾಡುತ್ತಿದೆ. ಬೇರೆ ರಾಜ್ಯಗಳಲ್ಲಿ ಉದ್ಯಮಿಗಳಿಗೆ ಕೊಡುವ ಸವಲತ್ತು, ರಿಯಾಯ್ತಿಗಳ ಬಗ್ಗೆ ಹೇಳಿದರೆ ಅಲ್ಲಿಗೇ ಹೋಗಲಿ, ಇಲ್ಲಿಗ್ಯಾಕೆ ಬಂದ್ರು ಅಂತಾರೆ. ಹೀಗೆ ಹೇಳಿದರೆ ಯಾವ ಉದ್ಯಮ ರಾಜ್ಯಕ್ಕೆ ಬರುತ್ತದೆ ಎಂದು ಅವರು ಕಿಡಿಕಾರಿದರು.
ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…
ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…
ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…
ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…