ರಾಜ್ಯ

ಇಂದಿರಾ ಗಾಂಧಿ ದೇಶದ ಬಡವರ ಆರಾಧ್ಯ ದೈವ ಆಗಿದ್ರು : ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಬಡವರ ಆರಾಧ್ಯ ದೈವ ಆಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಸಂಸತ್‍ನಲ್ಲಿ ಇವರನ್ನು ದುರ್ಗಿ ಅಂತ ಕರೆದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ಇಂದಿರಾಗಾಂಧಿ 39ನೇ ಪುಣ್ಯ ಸ್ಮರಣೆಯ ನಿಮಿತ್ತ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಲಾಲ್ ಬಹಾದ್ದೂರ್ ಶಾಸ್ತ್ರಿ ಸಂಪುಟದಲ್ಲಿ ಮಂತ್ರಿ ಆಗಿದ್ರು. ಲಾಲ್ ಬಹಾದ್ದೂರ್ ಶಾಸ್ತ್ರಿ ನಂತರ ದೇಶದ ಪ್ರಧಾನಿ ಆದರು. ದೇಶದ ಬಡವರ ಆರಾಧ್ಯ ದೈವ ಆಗಿದ್ರು ಇಂದಿರಾಗಾಂಧಿ. ನಾನು ಜನತಾ ಪಾರ್ಟಿಯಲ್ಲಿ ಇದ್ದೆ. ಹಾರೋಹಳ್ಳಿಯಲ್ಲಿ ವೋಟ್ ಕೇಳೋಕೆ ಹೋಗಿದ್ದೆ. ರಾಜಶೇಖರ ಮೂರ್ತಿ ಊರಿನ ಜನರನ್ನ ಸೇರಿಸಿ ಮಾತಾಡುತ್ತಿದ್ದರು. ನಾನು ಮನೆ ಮನೆಗೆ ಹೋಗಿ ನೋಡಿದ್ರೆ ಇಂದಿರಾಗಾಂಧಿ ಫೋಟೋ ಇತ್ತು. ನಾನು ಆಗ ಕೇಳಿದಾಗ ನಾವು ಎಲ್ಲಾ ಇಂದಿರಾಗಾಂಧಿಗೆ ವೋಟ್ ಹಾಕೋದು ಅಂತ ಹೇಳಿದ್ರು. ಆಗ ನಾನು ರಾಜಶೇಖರ ಅವರಿಗೆ ಇಲ್ಲಿ ವೋಟ್ ಬರೊಲ್ಲ ಅಂತ ಹೇಳಿದ್ದೆ. ಅಷ್ಟರ ಮಟ್ಟಿಗೆ ಆರಾಧ್ಯ ದೈವ ಅಂತ ಪೂಜೆ ಮಾಡುತ್ತಿದ್ದರು. ಇಂತಹ ಪಾಪ್ಯುಲರ್ ಲೀಡರ್ ಅನ್ನು ಇನ್ನೊಬ್ಬರು ದೇಶದಲ್ಲಿ ನೋಡಿಲ್ಲ ಎಂದರು.

ದೇಶದಲ್ಲಿ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹತ್ಯೆ ಮರೆಯೋಕೆ ಆಗಲ್ಲ. ಇವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇವರನ್ನ ಉಕ್ಕಿನ ಮಹಿಳೆ ಅಂತ ಕರೆಯುತ್ತಾರೆ. ವಾಜಪೇಯಿ ಅವರು ಸಂಸತ್ ನಲ್ಲಿ ಇವರನ್ನು ದುರ್ಗಿ ಅಂತ ಕರೆದಿದ್ದರು ಎಂದರು. ಇನ್ನು ಬಿಜೆಪಿ ಅವರು ರಾಷ್ಟ್ರ ಪ್ರೇಮದ ಬಗ್ಗೆ ಮಾತಾಡ್ತಾರೆ. ಆದರೆ ಅವರಲ್ಲಿ ಒಬ್ಬರೂ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿಲ್ಲ. ದೇಶಕ್ಕೆ ಬಲಿದಾನ ಮಾಡಿದ್ದು ನೆಹರು ಕುಟುಂಬ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ರೇವಣ್ಣ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ನರೇಂದ್ರ ಸ್ವಾಮಿ, ರಾಣಿ ಸತೀಶ್, ನಜೀರ್ ಅಹಮದ್ ಸೇರಿ ಹಲವು ನಾಯಕರು ಭಾಗಿಯಾಗಿದ್ದು, ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

lokesh

Recent Posts

ತೆಕ್ಕಲಕೋಟೆ | ಉತ್ಖನನ ವೇಳೆ ಎರಡು ಅಸ್ಥಿ ಪಂಜರ ಪತ್ತೆ

ಬಳ್ಳಾರಿ : ಜಿಲ್ಲೆಯಲ್ಲಿ ಐದು ಸಾವಿರ ವರ್ಷಗಳಷ್ಟು ಹಳೆಯದಾದ ಪ್ರಾಗೈತಿಹಾಸಿಕ ಕಾಲದ ಎರಡು ಅಸ್ಥಿ ಪಂಜರಗಳು ಪತ್ತೆಯಾಗಿದ್ದು, ಇತಿಹಾಸ ಸಂಶೋಧನಾ…

5 mins ago

ಮಂಡ್ಯದಲ್ಲಿ ಎಆರ್‌ಎಐ ಸೆಂಟರ್‌ ತೆರೆಯಲು 500 ಕೋಟಿ ರೂ. : ಎಚ್‌ಡಿಕೆ

ಮೈಸೂರು : ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ, ಉತ್ತೇಜನಕ್ಕೆ ಕೇಂದ್ರಸರ್ಕಾರ ಆದ್ಯತೆ ನೀಡಿರುವ ಜತೆಗೆ, ಮಂಡ್ಯ ಜಿಲ್ಲೆಯಲ್ಲಿ ಆಟೋಮೋಟಿವ್ ರೀಸರ್ಚ್ ಅಸೋಸಿಯೆಷನ್…

29 mins ago

ಗಮನ ಸೆಳೆದ ಸ್ವಚ್ಛತಾ ಮ್ಯಾರಥಾನ್‌

ಮೈಸೂರು : ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಓಡೋಣ ಮೈಸೂರಿಗಾಗಿ ಒಂದಾಗೋಣ ಸ್ವಚ್ಛತೆಗಾಗಿ ಶೀರ್ಷಿಕೆಯಡಿ ಸ್ವಚ್ಚತಾ…

57 mins ago

ಗೃಹಲಕ್ಷ್ಮಿಗೆ ಜೀವಿತ ಪ್ರಮಾಣಪತ್ರ ಕಡ್ಡಾಯ : ಸಿಎಂ ಸೂಚನೆ

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಿ, ಕೂಡಲೇ ಕ್ರಮ ವಹಿಸುವಂತೆ ಸಿಎಂ…

2 hours ago

ವಿಜಯಪುರದ ಮಂಗಳೂರಿನಲ್ಲಿ ಖಾಸಗಿ ವಿಮಾನ ಪತನ: ಇಬ್ಬರಿಗೆ ಗಂಭೀರ ಗಾಯ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್‌ ವಿಮಾನವೊಂದು ಪತನವಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಕಲಬುರ್ಗಿಯಿಂದ ಬೆಳಗಾವಿಗೆ…

3 hours ago

ಕಳೆದ 4 ವರ್ಷದಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ 35 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾವಳಿ ತೀವ್ರಗೊಂಡಿದೆ. ಕಳೆದ 4 ವರ್ಷದಲ್ಲಿ 35 ಮಂದಿ ಆನ್ ಲೈನ್ ಬೆಟ್ಟಿಂಗ್ ದಂಧೆಗೆ…

3 hours ago