ಚಿಕ್ಕಬಳ್ಳಾಪುರ : ನಾನು ಹಿಂದೂ ಆಗಿಯೇ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಅವರಿಗೆ ಬಿಜೆಪಿ ಮುಖಂಡ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದ ಮರಳುಕುಂಟೆ ಗ್ರಾಮದಲ್ಲಿ ಬರ ಅಧ್ಯಯನದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿಯವರಿಗೆ ಶ್ರೀರಾಮನೇ ಚುನಾವಣಾ ಅಜೆಂಡಾ ಎಂಬ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಬಿಜೆಪಿ ನೇರವಾಗಿ ತೊಡಗಿಸಿಕೊಂಡಿತ್ತು. ರಾಮಮಂದಿರಕ್ಕೆ ವಿರೋಧ ಮಾಡಿದ್ದು ಕಾಂಗ್ರೆಸ್ ಪಕ್ಷ. ಹಜ್ ಯಾತ್ರೆಗೆ ಕಳಿಸೋದು ಮಾತ್ರ ಜಾತ್ಯಾತೀತತೆಯೇ? ಅಯೋಧ್ಯೆಗೆ ಯಾತ್ರೆ ಕಳುಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆಯೇ? ಚುನಾವಣೆ ವೇಳೆಯ ಹಿಂದೂಗಳು ಇದೇ ರೀತಿ ಮಾತನಾಡುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.
ನಾವು ಹುಟ್ಟಿನಿಂದ ಸಾಯುವವರೆಗೂ ಹಿಂದೂಗಳು, ಆದರೆ ಕೆಲವರಿಗೆ ಚುನಾವಣೆ ವೇಳೆ ಉದ್ದದ ನಾಮ ಬರುತ್ತದೆ. ಜೈ ಶ್ರೀರಾಮ್, ಹರಹರ ಮಹಾದೇವ ಘೋಷಣೆಗಳು ಬರುತ್ತವೆ. ಆಮೇಲೆ ಇವರೆಲ್ಲ ನಾಪತ್ತೆ ಆಗುತ್ತಾರೆ. ಜಾತ್ಯಾತೀತತೆ ಅಂದರೆ ಸರ್ವ ಧರ್ಮ ಭಾವ, ತಾಲಿಬಾನ್ ಹಾಗೂ ಹಮಾಸ್‍ಗಳ ಬಳಿ ಸರ್ವ ಧರ್ಮ ಭಾವ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಗೆ ಉಚಿತ ಪ್ರವಾಸ ಆಯೋಜನೆ ಎಂಬ ಬಿಜೆಪಿ ಚುನಾವಣಾ ಪ್ರಣಾಳಿಕೆ ವಿಚಾರಕ್ಕೆ ಪರಮೇಶ್ವರ್ ಅವರು ಟೀಕೆ ಮಾಡಿದ್ದರು.
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…
ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್ ಸುತಾರ್ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…
ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…