ನವದೆಹಲಿ: ಇದು ಪ್ರಧಾನಿ ನರೇಂದ್ರ ಮೋದಿ ಅವರ ಕಾಲ. ಶಂಕುಸ್ಥಾಪನೆಯನ್ನು ಒಬ್ಬರು ಮತ್ತು ಉದ್ಘಾಟನೆಯನ್ನು ಇನ್ನೊಬ್ಬರು ಮಾಡುವ ಸಮಯ ಮುಗಿದು ಹೋಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಪರೋಕ್ಷವಾಗಿ ಡಿಸಿಎಂ ಶಿವಕುಮಾರ್ ಅವರಿಗೆ ತಿರುಗೇಟು ನೀಡಿರುವ ಅವರು, ನಾನು ಹೊಸ ತಲೆಮಾರಿನವ, ಹಾಗಾಗಿ ಬೇಗ ಕೆಲಸ ಆಗಬೇಕು ಎನ್ನುವವನು. ಇಂದಿರಾ ಗಾಂಧಿ ಶಂಕುಸ್ಥಾಪನೆ ಮಾಡಿ, ಸೋನಿಯಾ ಗಾಂಧಿ ಉದ್ಘಾಟನೆ ಮಾಡುವ ಸಮಯ ಮುಗಿದಿದೆ. ಇದು ಮೋದಿ ಕಾಲ, ಎಲ್ಲವೂ ವೇಗವಾಗಿ ನಡೆಯುತ್ತವೆ. ಆದರೆ ವಿಳಂಬ ಮಾಡುವುದೇ ಕಾಂಗ್ರೆಸ್ ಪಕ್ಷದವರ ಕಥೆ ಎಂದು ಟಾಂಗ್ ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳದಿ ಲೈನ್ ಮೆಟ್ರೊವನ್ನು ಏಕೆ ಆತುರದಲ್ಲಿ ಮಾಡಿದರು ಅಂಥ ಬೈಯುತ್ತಿರುವವರು, ಇವರ ಕೊಡುಗೆ ಏನು? ಸಮಸ್ಯೆಗಳು ಇದ್ದಾಗ ಎಲ್ಲಿ ಹೋಗಿದ್ದರು ಇವರು. ಮೆಟ್ರೋಗೆ ನಾಲ್ಕು ವರ್ಷ ಎಂ.ಡಿ ಇರಲಿಲ್ಲ. ಬಿಎಂಆರ್‍ಸಿಎಲ್ ಎರಡು ವರ್ಷದಲ್ಲಿ ಅರ್ಧ ಡಜೆನ್ ಸಮಯ ಮುಹೂರ್ತ ಫಿಕ್ಸ್ ಮಾಡಿ, ಮುಂದೂಡಿಕೆ ಮಾಡಿದೆ ಎಂದರು.
ವೇಗವಾಗಿ ಕೆಲಸ ಮಾಡುವ ಸಮಯ ಇದು. ಆಲಮಟ್ಟಿಗೆ ಶಾಸ್ತ್ರೀಯವರು ಅಡಿಗಲ್ಲು ಹಾಕಿ, ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದರು. ಕಾಂಗ್ರೆಸ್‍ನವರು ಈ ವೇಗದಲ್ಲಿ ದೇಶ ನಡೆಸಿದ್ದಾರೆ. ಜಿರೋ ಟ್ರಾಫಿಕ್‍ನಲ್ಲಿ ಓಡಾಡುವವರಿಗೆ ಮೆಟ್ರೋ ಅವಶ್ಯಕತೆ ಬಗ್ಗೆ ಏನು ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…
ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…
ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…
ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…