ರಾಜ್ಯ

ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಶತಶತಮಾನಗಳಿಂದ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದಾರೆ. ನಮ್ಮ ಇಡೀ ಊರಿನಲ್ಲಿ ಲಾಯರ್ ಆದವನು ನಾನು ಒಬ್ಬನೇ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಶಿಕ್ಷಣದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಕಾಳಿದಾಸ ಹೆಲ್ತ್ ಆಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಸಂತ ನಗರದ ದೇವರಾಜ್ ಅರಸು ಭವನದಲ್ಲಿ ನಡೆದ ಪ್ರೇರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಸಿಎಂ, ನಮ್ಮ ಊರಲ್ಲಿ ಪದವೀಧರರು ಇದ್ದರು. ಆದರೆ ಲಾಯರ್ ಆಗಿದ್ದು ನಾನೇ. ನಮ್ಮ ಅಪ್ಪ ನಮ್ಮೂರು ಶಾನುಭೋಗರ ಮಾತು ಕೇಳುತ್ತಿದ್ದರು. ನನಗೆ ಎಂಎಸ್‌ಸಿ ಸೀಟು ಸಿಗಲಿಲ್ಲ. ಆಮೇಲೆ ವ್ಯವಸಾಯ ಮಾಡುತ್ತಿದ್ದೆ. ಅದಾದ ಬಳಿಕ ಲಾ ಓದೋಕೆ ಹೋಗಿದ್ದೆ ಎಂದು ತಿಳಿಸಿದರು.

ನಮ್ಮ ಅಪ್ಪನಿಗೆ ನಾನು ಲಾ ಮಾಡ್ತೀನಿ ಅಂತ ಹೇಳಿದ್ದೆ. ಆಗ ಅವರು ಶಾನುಭೋಗರ ಹತ್ತಿರ ಹೋಗಿ ಕೇಳಿದ್ದರು. ಆಗ ಶಾನುಭೋಗರು ಕುರುಬರು ಲಾಯರ್ ಕೆಲಸ ಮಾಡೋಕೆ ಆಗುತ್ತಾ? ಬೇಡ ಎಂದು ಹೇಳಿದ್ದರು. ಅವರ ಮಾತು ಕೇಳಿ ನಮ್ಮ ಅಪ್ಪ ನನಗೆ ಲಾಯರ್ ಮಾಡಬೇಡ ಎಂದು ಹೇಳಿದ್ರು. ಆದರೂ ಕೂಡಾ ನಾನು ಲಾಯರ್ ಓದಿದೆ. ಬಳಿಕ ಶಾನುಭೋಗರ ಆಸ್ತಿ ವಿಚಾರಕ್ಕೆ ನಾನೇ ಲಾಯರ್ ಆದೆ. ಆಗ ಶಾನುಭೋಗರು ಏನು ಮಾತಾಡದೇ ಸುಮ್ಮನೆ ಆದರು ಎಂದು ಸಿಎಂ ತಮ್ಮ ಲಾ ಜೀವನದ ನೆನಪನ್ನು ಬಿಚ್ಚಿಟ್ಟರು.

lokesh

Recent Posts

ಪರವಾನಗಿ ಅಮಾನತ್ತು : ನಾಲ್ವರ ವಿರುದ್ಧ ಶಿಸ್ತು ಕ್ರಮ

ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ…

2 hours ago

ಸಿ.ಟಿ.ರವಿ ಯಾವ ಕಡೆಯಿಂದಲೂ ಒಳಗೆ ಬರತಕ್ಕದ್ದಲ್ಲ : ಚೀಫ್ ಮಾರ್ಷಲ್​​ಗೆ ಸಭಾಪತಿ ಸೂಚನೆ

ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ…

3 hours ago

ಮಂಡ್ಯ | 60 ಲಕ್ಷ ಲಂಚಕ್ಕೆ ಬೇಡಿಕೆ ; ಅಬಕಾರಿ ಉಪ ಆಯುಕ್ತ ಅಮಾನತು

ಮಂಡ್ಯ : ಹೊಸದಾಗಿ ಬಾರ್ ಆರಂಭಿಸಲು ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಡಿ ಮಂಡ್ಯ ಅಬಕಾರಿ ಉಪ…

4 hours ago

ಮೈಸೂರಿನಲ್ಲಿ ಮತ್ತೆ ಡ್ರಗ್ಸ್‌ ಪತ್ತೆ ; ಮೂವರ ಬಂಧನ

ಮೈಸೂರು : ಮೈಸೂರಲ್ಲಿ ಪದೇ ಪದೇ ಡ್ರಗ್ಸ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ. ಈ ಸಂಬಂಧ ಹೈಕೋರ್ಟ್‌ ಸಹ ಕಳವಳ…

4 hours ago

ಮೈ-ಬೆಂ ಹೆದ್ದಾರಿಯಲ್ಲಿ ಸುಲಿಗೆ,ದರೋಡೆ ; 34 ಪ್ರಕರಣಗಳಲ್ಲಿ 28 ಕೇಸ್‌ ಸಾಲ್ವ್‌!

ಮಂಡ್ಯ : ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ…

4 hours ago

ಮೂರು ಬಾಲಕಿಯರನ್ನು ಬಲಿ ಪಡೆದ ಆನ್‌ಲೈನ್‌ ಗೇಮ್‌ ; ಮಹಡಿಯಿಂದ ಹಾರಿ ಆತ್ಮಹತ್ಯೆ

ಗಾಜಿಯಾಬಾದ್ : ಆನ್‌ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ…

6 hours ago