ಬೆಂಗಳೂರು : ಕನ್ನಡದ ಚಿತ್ರರಂಗದ ಖ್ಯಾತ ಹೆಸರಾಂತ ನಟ ದಿವಂಗತ ಡಾಕ್ಟರ್ ವಿಷ್ಣುವರ್ಧನ್ ಅವರ ಸ್ಮಾರಕ ಜಾಗವನ್ನು ಉಳಿಸಿಕೊಳ್ಳಲು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಲವು ಸಂಘ ಸಂಸ್ಥೆಗಳು ಹಾಗೂ ಡಾಕ್ಟರ್ ವಿಷ್ಣುವರ್ಧನ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ ಜರುಗಿತು.
ಖ್ಯಾತ ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಜಾಗ ಒಂದು ಪವಿತ್ರ ಸ್ಥಳ ಎಂಬುದು ಅಭಿಮಾನಿಗಳ ನಂಬಿಕೆ. ಆ ಪುಣ್ಯಭೂಮಿಗೆ ಭೇಟಿ ನೀಡಲು ಈಗ ಅಭಿಮಾನಿಗಳಿಗೆ ಅವಕಾಶ ಸಿಗುತ್ತಿಲ್ಲ.ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಇರುವ ಪುಣ್ಯಭೂಮಿ ಜೊತೆ ಫ್ಯಾನ್ಸ್ ಭಾವನಾತ್ಮಕ ನಂಟು ಹೊಂದಿದ್ದಾರೆ.
ಆ ಪುಣ್ಯಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ಅನೇಕ ಸಂಘ, ಸಂಸ್ಥೆಗಳು ಬೆಂಬಲ ನೀಡಿವೆ. ಕಿಚ್ಚ ಸುದೀಪ್, ಡಾಲಿ ಧನಂಜಯ್ ಮುಂತಾದ ನಟರು ಕೂಡ ಬೆಂಬಲ ಸೂಚಿಸಿದ್ದಾರೆ.
ಡಾ. ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಒತ್ತಾಯ ಕೂಡ ಮಾಡಲಾಗುತ್ತಿದೆ. ಕಿಚ್ಚ ಸುದೀಪ್ ಅವರು ಇಂದು ಕೆಸಿಸಿ ಕ್ರಿಕೆಟ್ ಟೂರ್ನಿಗೆ ಆಹ್ವಾನ ನೀಡಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ವಿಷ್ಣು ಅಭಿಮಾನಿಗಳ ಹೋರಾಟದ ಬಗ್ಗೆಯೂ ಚರ್ಚೆ ಮಾಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…
ಅಮೆರಿಕದ ಸಿಯಾಟಲ್‌ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…
ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…
ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…
ಒಂದೆಡೆ ತಂಪಿನ ವಾತಾವರಣ : ಮತ್ತೊಂದೆಡೆ ಕಿರಿಕಿರಿ ಉಂಟುಮಾಡುವ ಕೆಸರುಮಯ ತಾಣ ಜಿ. ತಂಗಂ ಗೋಪಿನಾಥಂ ಮಂಡ್ಯ: ಕಳೆದ ಎರಡು…
ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕೃಷಿಯಲ್ಲಿ ಪ್ರಾಮುಖ್ಯತೆ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರು ಮತ್ತು ಸಾಹಿತಿಗಳು ಕಡಿಮೆ ಏನಿಲ್ಲ ಎಂಬುದನ್ನು…