ರಾಜ್ಯ

ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ? : ಗೋವಿಂದ ಕಾರಜೋಳ

ಧಾರವಾಡ : ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ? ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಸರ್ಕಾರ ಬಿಳಿಸೋಕೆ ಹೋಗಿಲ್ಲ. ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ? ಕಾಂಗ್ರೆಸ್‌ನವರು ಹಾಲು ಕುಡಿದು ಸಾಯೋಕೆ ತಯಾರಾಗಿದ್ದಾರೆ. ಬಿಜೆಪಿಯವರು ನಾವು ಸರ್ಕಾರ ಬೀಳಿಸುವ ಪಾಪದ‌ ಕೆಲಸ ಮಾಡೋದಿಲ್ಲ ಎಂದರು. ‌

ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರು 2 ದರ್ಜೆ ನಾಯಕರಾಗಿ ಕೆಲಸ ಮಾಡ್ತಾ ಇದ್ದಾರೆ. ಲಿಂಗಾಯತರು ಗೌಡ್ರ ಲೆಕ್ಕದಲ್ಲಿಯೂ ಇಲ್ಲ, ಕುಲಕರ್ಣಿ ಪುಸ್ತಕದಲ್ಲಿಯೂ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ದಲಿತರು, ಹಿಂದುಳಿದವರು, ಗೌಡರ 3 ಗುಂಪುಗಳು ಕಾಂಗ್ರೆಸ್ ಸರ್ಕಾರದಲ್ಲಿವೆ. ಸಿದ್ದರಾಮಯ್ಯ ಕೇವಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಟ್ಟು, ಪುರುಷರಿಗೆ ಫ್ರೀ ಬಸ್ ಕೊಡದೇ ಪಾಪದ ಕೆಲಸ ಮಾಡ್ತಾ ಇದ್ದಾರೆ. ರಾಜ್ಯ ಸರ್ಕಾರ 5 ತಿಂಗಳಲ್ಲಿ ಸಂಪೂರ್ಣ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ‌ಕೊಟ್ಟು ಸಿಎಂ ಸಿದ್ದರಾಮಯ್ಯ ಅವರು ಭಂಡತನಕ್ಕೆ ಬಿದ್ದಿದ್ದಾರೆ. ಸುಳ್ಳು ಗ್ಯಾರಂಟಿಗಳನ್ನು ನೋಡಿ ಸರ್ಕಾರಕ್ಕೆ ,ಜನರು ಕಲ್ಲು ಹೊಡೆಯುವ ಕಾಲ ಬರುತ್ತೆ.ಸಿಎಂ ಸಿದ್ದರಾಮಯ್ಯ ಮಾತನ್ನು ಯಾರೂ ಕೇಳುತ್ತಿಲ್ಲ. ಮಂತ್ರಿಗಳಿಗೆ ಊಟ-ತಿಂಡಿ ಕೊಟ್ಟು ಗದ್ದ-ತುಟಿ ಸವರುವ ಪರಿಸ್ಥಿತಿ ‌ಸಿಎಂ ಸಿದ್ದರಾಮಯ್ಯರಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.

lokesh

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

8 hours ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

8 hours ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

8 hours ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

8 hours ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

9 hours ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

10 hours ago