ಬೆಂಗಳೂರು : ಹುಲಿ ಉಗುರು ವಿಚಾರವಾಗಿ ರಾಜ್ಯದ ಚಿನ್ನದ ಅಂಗಡಿಗಳ ಮಾಲೀಕರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಚಿನ್ನದ ಅಂಗಡಿ ಮಾಲೀಕರಾದ ಟಿ.ಎ. ಶರವಣ ಆರೋಪ ಮಾಡಿದರು.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಲಿ ಉಗುರು ವಿಚಾರವಾಗಿ ಚಿನ್ನದ ಅಂಗಡಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಮಾಡ್ತಾ ಇದ್ದಾರೆ. ನೋಟಿಸ್ ಕೊಡದೆ, ತಪಾಸಣೆ ನಡೆಸದೆ ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಿದ್ದು ಸರಿಯಲ್ಲ. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆಗಳಿವೆ, ಅದರ ಪರಿಹಾರಕ್ಕೆ ಸರ್ಕಾರ ಗಮನ ಹರಿಸೋಕೆ ಆಗ್ತಿಲ್ವ ಎಂದು ವಾಗ್ದಾಳಿ ನಡೆಸಿದರು.
ಯಾವ ವಿಚಾರವನ್ನು ಮುಚ್ಚಿಡೋಕ್ಕೆ ಹುಲಿ ಉಗುರು ವಿಷಯವನ್ನು ಹೈಲೈಟ್ ಮಾಡ್ತಾ ಇದ್ದೀರಾ? ಅಸಲಿ ಹುಲಿ ಉಗುರು ಧರಿಸೋ ಶಕ್ತಿ ಯಾರಿಗೂ ಇಲ್ಲ. ಹಸುವಿನ ಕೊಂಬು ಹಾಗೂ ಸಿಂತೆಟಿಕ್ ವಸ್ತುವಿನಿಂದ ಅಕ್ಕಸಾಲಿಗರಿಂದ ಮಾಡಿಸಿರೋದು. ಹುಲಿ ಉಗುರು ಅಷ್ಟೇನಾ, ಆನೆ ಕೂದಲೂ ಕಾಣಲ್ವಾ? ಆನೇ ಕೂದಲು, ಹುಲಿ ಉಂಗುರು ಎಂದು ನಾವು ಮಾರುತ್ತಿರುವುದು ಕಪ್ಪು ಪ್ಲಾಸ್ಟಿಕ್ ಪೈಪ್ ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ ಮೊದಲು ಜನರಲ್ಲಿ ಜಾಗೃತಿ ಮೂಡಿಸಿ ಎಂದರು.
ಅರ್ಚಕರು, ರಾಜಕೀಯ ವ್ಯಕ್ತಿಗಳು, ಸಿನಿ ತಾರೆಯರ ಮೇಲೆ ದಾಳಿ ಮಾಡೋದು ಬಿಡಿ. ನಿಜ್ವಾಗ್ಲೂ ಯಾರ ಬಳಿ ಇದೆ ಅಂಥವರಿಗೆ ವಾಪಾಸ್ ಕೊಡೋಕೆ 2 ತಿಂಗಳು ಟೈಮ್ ಕೊಡಿ. ಅದನ್ನು ಬಿಟ್ಟು ಒಡವೆ ಅಂಗಡಿಗಳ ಮೇಲೆ ದಾಳಿ ಮಾಡಿ, ದಬ್ಬಾಳಿಕೆ ಮಾಡೋದು ಸರಿಯಲ್ಲ. ಹೀಗೆ ಮುಂದುವರಿದರೆ ನಾವು ಪ್ರತಿಭಟನೆಗೆ ಮುಂದಾಗ್ತಿವಿ ಎಂದು ಶರವಣ ಎಚ್ಚರಿಕೆ ನೀಡಿದರು.
ತುಮಕೂರಿನ ವಿಶ್ವಾಸ ಜ್ಯುಯಲರ್ಸ್ ಮೇಲೆ ನಿನ್ನೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿ ಮಾಲೀಕ ಇಲ್ಲದ ಕಾರಣಕ್ಕೆ, ಅವರ ಮನೆಗೆ ಕಳ್ಳನ ರೀತಿ ಹುಡುಕಿಕೊಂಡು ಹೋಗಿದ್ದಾರೆ. ನೋಟಿಸ್ ಕೊಟ್ಟು ತಪಾಸಣೆ ಬನ್ನಿ, ಬೇಡ ಅನ್ನಲ್ಲ. ಸರ್ಕಾರ ನೆಡೆಸುವ ಮಂತ್ರಿಗಳು ಮೊದಲು ಸರಿ ಇದ್ದಾರಾ ನೋಡಿಕೊಳ್ಳಿ. ಚಿಕ್ಕವರಿಗೆ ಒಂದು ನ್ಯಾಯ, ದೊಡ್ಡವರಿಗೆ ಮತ್ತೊಂದು ನ್ಯಾಯಾನಾ? ಕುಮಾರಸ್ವಾಮಿಯವರ ಮನೆಯಲ್ಲಿ ಇದ್ದ ಲಾಕೆಟ್ ನಕಲಿ. ಅದನ್ನು ನಾನೇ ಪರಿಶೀಲಿಸಿ ಅಧಿಕಾರಿಗಳಿಗೆ ಒಪ್ಪಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…
• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…