ರಾಜ್ಯ

ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಳಗಾವಿ: ಇನ್ನೂ ಕೇವಲ ಎಂಟು ದಿನಗಳಲ್ಲಿ ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ ನೀಡಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನಾದರೂ ಅಪಪ್ರಚಾರ ಮಾಡಲಿ. ನಾವು ಈಗಾಗಲೇ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ತಾಲ್ಲೂಕು ಪಂಚಾಯಿತಿ ಮುಖಾಂತರ ಬಿಡುಗಡೆ ಮಾಡಬೇಕು ಎಂದು ಹೇಳಿರುವುದರಿಂದ ಸ್ವಲ್ಪ ತಡವಾಗಿದೆ ಎಂದರು.

ಇನ್ನು ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಹಣ ನಿಲ್ಲೋದಿಲ್ಲ. ಇನ್ನು 8-10 ದಿನಗಳಲ್ಲಿ ಹಣ ಖಾತೆಗೆ ಜಮೆ ಆಗುತ್ತದೆ. 2 ದಿನ ಕಳೆದಿದೆ. ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡೇ ಮಾಡುತ್ತೇವೆ. ಯಾರೂ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಭರವಸೆ ನೀಡಿದರು.

ಬಸ್‌ ಕಂಡಕ್ಟರ್‌ ಮೇಲೆ ನಡೆದ ಹಲ್ಲೆ ಕುರಿತು ಮಾತನಾಡಿದ ಅವರು, ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಘಟನೆ ನಡೆದ ಐದೇ ನಿಮಿಷಕ್ಕೆ ಕಮೀಷನರ್‌ ಜೊತೆ ನಾನು ಮಾತನಾಡಿದ್ದೆ. ಯಾರು ತಪ್ಪಿತಸ್ಥರು ಅವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೇನೆ. ನಾಲ್ಕೈದು ಪುಂಡರು ಬಂದು ಭಾಷಾ ವಿವಾದ ಎಳೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ಕಿಡಿಕಾರಿದರು.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಕರ್ನಾಟಕ ಹೈಕೋರ್ಟ್‌ : 70 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಕಾನೂನು ಪದವಿ ಸೇರಿದಂತೆ ವಿವಿಧ…

7 mins ago

ಸಿಲಿಂಡರ್‌ಗೆ ಮುಗಿಬಿದ್ದ ಜನ : ಪೊಲೀಸ್‌ ರಕ್ಷಣೆಯಲ್ಲಿ ಸಿಲಿಂಡರ್‌ ವಿತರಣೆ

ಕೆ.ಆರ್.ಪೇಟೆ : ಗೃಹ ಬಳಕೆ ಸಿಲಿಂಡರ್ ಸಿಗುವುದಿಲ್ಲ ಎಂದು ಏಕಾಏಕಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಜಮಾಯಿಸಿದ ಪರಿಣಾಮ…

27 mins ago

ಒಮ್ಮತದ ಅಭ್ಯರ್ಥಿ ಆಯ್ಕೆ ಆಗಿದೆ ; ಅಲ್ಪಸಂಖ್ಯಾತರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ : ಡಿಸಿಎಂ ಡಿ.ಕೆ

ಬೆಂಗಳೂರು : ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಆಗಿದೆ ಎಂದು ಉಪ ಮುಖ್ಯಮಂತ್ರಿ…

1 hour ago

ಮೇಲುಕೋಟೆಯಲ್ಲಿ ವಾಹನ ದಟ್ಟಣೆ ; ನಿಯಂತ್ರಣಕ್ಕೆ ಶಾಸಕರ ಸೂಚನೆ

ಮೇಲುಕೋಟೆ : ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಮತ್ತು ಉತ್ಸವ ಬೀದಿಗಳಲ್ಲಿ ಭಕ್ತರ ವಾಹನ ನಿಲುಗಡೆಯನ್ನು ನಿಯಂತ್ರಿಸಬೇಕು ಎಂದು ಮೇಲುಕೋಟೆ…

2 hours ago

ಮಂಗಳೂರು ಬಂದರಿಗೆ ಬಂದ ಎಲ್‌ಪಿಜಿ ಹೊತ್ತ ಎರಡು ಹಡಗು

ಮಂಗಳೂರು : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ…

2 hours ago

ನಮ್ಮ ವೈರಿಗಳಿಗೆ ಮಾತ್ರ ಹೊರ್ಮುಜ್‌ ಮುಚ್ಚಿದೆ : ಇರಾನ್‌

ವಿಶ್ವಸಂಸ್ಥೆ : ಇರಾನ್‌ ವೈರಿಗಳು ಹಾಗೂ ಅವರೊಂದಿಗೆ ನಂಟು ಹೊಂದಿರುವ ರಾಷ್ಟ್ರಗಳಿಗೆ ಮಾತ್ರ ಹೊರ್ಮುಜ್‌ ಜಲಸಂಧಿ ಮುಚ್ಚಲಾಗಿದೆ ಎಂದು ವಿಶ್ವಸಂಸ್ಥೆಯ…

3 hours ago